ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ

ಮೂಲ್ಕಿ: ದೀನವರ್ಗದ ಕಷ್ಟಗಳನ್ನು ಹೋಗಲಾಡಿಸಲು ದೇವರಲ್ಲಿ ವಿಶ್ವಾಸ ಮತ್ತು ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಏಸುಕ್ರಿಸ್ತರು ತಿಳಿಸಿದ ತತ್ವ ಮತ್ತು ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಮೂಲ್ಕಿ ಸಿ.ಎಸ್.ಐ ಯುನಿಟಿ ದೇವಾಲಯದ ಸಭಾಪಾಲಕರಾದ ರೆ. ಎಡ್ವರ್ಡ್ ಕರ್ಕಡ ಹೇಳಿದರು. ಮೂಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ಕಾರ್ನಾಡು ರೋಟರಿ ಸತಾಬ್ದಿ ಭವನದಲ್ಲಿ ನಡೆದ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭ ಆಶೀರ್ವಚನ ನೀಡಿದರು.
ಎಲ್ಲಾ ಧರ್ಮಗಳ ಸಾರವನ್ನು ಅರಿತು ಸಮಾಜದಲ್ಲಿ ಸಮಾನ ಮನಸ್ಕರಾಗಿ ಬಾಳಿ ಬದುಕುಕಲು ಎಲ್ಲಾ ಧರ್ಮಗ್ರಂಥಗಳು ಮಾರ್ಗದರ್ಶನ ನೀಡುತ್ತಿವೆ ರೋಟರಿ ಕ್ಲಬ್ ಸದಸ್ಯರು ಈ ನಿಟ್ಟಿನಲ್ಲಿ ಎಲ್ಲಾ ಹಬ್ಬಗಳ ಆಚರಣೆ ನಡೆಸುತ್ತಿರುವುದು ಅಭಿನಂದನೀಯ ಎಂದರು.
ಈ ಸಂದರ್ಭ ಗೋಡ್ವಿನ್ ಎಮಿಲ್ಡಾ ತಂಡದವರಿಂದ ಕ್ರಿಸ್ಮಸ್ ರೂಪಕ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗರತ್ನಾ ರವರು ಇತ್ತೀಚೆಗೆ ವಿಶ್ವ ವ್ಯಾಪಿಯಾಗಿ ಹರಡುತ್ತಿರುವ ಮೀಸಲ್ಸ್ ಮತ್ತು ರುಬೆಲ್ಲಾ ರೋಗದ ಬಗ್ಗೆ ಮಾಹಿತಿ ನೀಡಿ 9ತಿಂಗಳಿಂದ 15 ವರ್ಷದ ಒಳಗಿನ ಮಕ್ಕಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಜೋನ್ ವಿಲ್ಸನ್ ವಹಿಸಿದ್ದರು.
ಅತಿಥಿಗಳಾಗಿ ಸಹಾಯಕ ಗವರ್ನರ್ ಜೆ.ಸಿ.ಸಾಲ್ಯಾನ್, ಝೋನಲ್ ಲೆಪ್ಟಿನೆಂಟ್ ಪ್ರೊ.ಜಯರಾಮ ಪೂಂಜ, ಕಾರ್ಯದರ್ಶೀ ಗೋಪಾಲ ಭಂಡಾರಿ ಉಪಸ್ಥಿತರಿದ್ದರು . ಜೋನ್ ವಿಲ್ಸನ್ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷ ರೇಮಂಡ್ ರೆಬೆಲ್ಲೋ ನಿರೂಪಿಸಿದರು. ಗೋಪಾಲ ಭಂಡಾರಿ ವಂದಿಸಿದರು.

Kinnigoli-0601201702

Comments

comments

Comments are closed.

Read previous post:
Kinnigoli-0601201701
ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸೆ

ಮೂಲ್ಕಿ: ಗ್ರಾಮೀಣ ಬಡವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಮೂಲ್ಕಿ ಲಯನ್ಸ್ ಕ್ಲಬ್ ಸದಸ್ಯರ ಹಾಗೂ ಸಹೃದಯರ ಸೂಕ್ತ ದೇಣಿಗೆಗಳಿಂದ ಸಾಧ್ಯವಾಗಿದೆ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ಸುಜಿತ್ ಸಾಲ್ಯಾನ್...

Close