ಮೂಲ್ಕಿ ಹೋಬಳಿ ಸಾಹಿತ್ಯ ಸಮ್ಮೇಳನ ಸಮಾರೋಪ

ಮೂಲ್ಕಿ: ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಅಭಿರುಚಿಯನ್ನು ಬೆಸೆಯುವಂತಹ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ, ಸಾಹಿತಿಗಳು ಪ್ರಚಾರ ಬಯಸದೇ ಸದ್ದಿಲ್ಲದೇ ಕನ್ನಡದ ಕಂಪನ್ನು ಪಸರಿಸುವ ಮೂಲಕ ಮುಂದಿನ ಯುವ ಪೀಳಿಗೆಯನ್ನು ಆಕರ್ಷಿಸುವ ಸಮ್ಮೇಳನಗಳು ನಡೆಯಬೇಕು, ಚಿಂತನೆ, ಪರಿಕಲ್ಪನೆ, ಅಭಿರುಚಿ, ಸಂವಾದಕ್ಕೆ ಸಮ್ಮೇಳನಗಳು ಆದ್ಯತೆ ನೀಡಲಿ ಎಂದು ಹಿರಿಯ ಸಾಹಿತಿ ಗಣೇಶ್ ಮಲ್ಯ ಕಿನ್ನಿಗೋಳಿ ಹೇಳಿದರು.
ಅವರು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ಹೋಬಳಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪದ ಆಶಯದ ಮಾತಿನಲ್ಲಿ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷೆ ಡಾ.ಶೈಲಕಾ ಏತಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರನ್ನು ಸಮ್ಮೇಳನ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರದ ಸಾಧಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಮೂಲ್ಕಿ, ಡಾ.ಜೀವಿತಾ ಕಿನ್ನಿಗೋಳಿ, ಶರತ್ ಶೆಟ್ಟಿ ಕಿನ್ನಿಗೋಳಿ, ಮಾಧವ ಕೆರೆಕಾಡುರವರನ್ನು ಗೌರವಿಸಲಾಯಿತು.
ಕಿನ್ನಿಗೋಳಿ ಯುಗಪುರುಷದ ಕೆ.ಭುವನಾಭಿರಾಮ ಉಡುಪ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಡುಪಿ ನುಡಿಸಿರಿ ಘಟಕದ ಕಾರ್ಯದರ್ಶಿ ಭುವನ ಪ್ರಸಾದ ಹೆಗ್ಡೆ ಉಡುಪಿ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ, ರಾಮಕೃಷ್ಣ ಪೂಂಜಾ ಐಟಿಐನ ಪ್ರಾಂಶುಪಾಲ ವೈ.ಎನ್.ಸಾಲಿಯಾನ್, ಸಾಹಿತಿ ಡಾ.ಕೆ.ಜಗದೀಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ, ಹೋಬಳಿ ಸಂಚಾಲಕ ಎನ್.ಪಿ.ಶೆಟ್ಟಿ, ಸಮ್ಮೇಳನ ಸಮಿತಿಯ ರವಿಚಂದ್ರ, ಜಯಪಾಲ ಶೆಟ್ಟಿ ಐಕಳ, ಜೊಸ್ಸಿ ಪಿಂಟೋ, ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು ಇದ್ದರು.

Mulki-05011702

Comments

comments

Comments are closed.

Read previous post:
Mulki-05011701
ಮೂಲ್ಕಿ ಹೋಬಳಿ ಸಾಹಿತ್ಯ ಸಮ್ಮೇಳನ ಗೋಷ್ಠಿ

  ಮೂಲ್ಕಿ:  ಮೂಲ್ಕಿ ಪರಿಸರದ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಷಯದಲ್ಲಿ ಮಾತನಾಡಿ, ಕಾರ್ನಾಡು ಸದಾಶಿವ ರಾವ್‌ರವರಂತಹ ಹೋರಾಟಗಾರರು ಸ್ವತಹ ಮಹಾತ್ಮ ಗಾಂಧೀಜಿಯವರಿಗೆ ಪ್ರೇರಣೆ ಆಗಿದ್ದವರು, ಅವರನ್ನು ಅನುಸರಿಸಿದ ಅನೇಕ...

Close