ಕಟೀಲು ಕುದ್ರು : ನೂತನ ಮುಖಮಂಟಪ ಸಮರ್ಪಣೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಮೂಲಕುದ್ರು ಭ್ರಾಮರೀವನದ ನಾಗದೇವರ ಸನ್ನಿಧಿಯಲ್ಲಿ ನೂತನ ಶುಕ್ರವಾರ ಶಿಲಾಮಯ ಮುಖಮಂಟಪವನ್ನು ಸಮರ್ಪಿಸಲಾಯಿತು.
ಆಕರ್ಷಕ ಕೆತ್ತನೆಗಳಿಂದ ಕೂಡಿದ ಮುಖಮಂಟಪವನ್ನು ಸಮರ್ಪಿಸುವ ಸಂದರ್ಭ ಆಶ್ಲೇಷ ಬಲಿ ಸೇವೆ, ಸಗ್ರಿ ಗೋಪಾಲಕೃಷ್ಣ ಸಾಮಗರಿಂದ ನಾಗದರ್ಶನ, ನಾಗ ತನು ಪ್ರಸನ್ನ ಪೂಜೆಗಳ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮುಖಮಂಟಪವನ್ನು ಸೇವಾರೂಪದಲ್ಲಿ ನಿರ್ಮಿಸಿದ ದಾನಿಗಳಾದ ಎರ್ಮಾಳ್ ಹೊಸಮನೆ ರಾಧಾ ವಿ. ಶೆಟ್ಟಿ, ಸತೀಶ್ ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ, ಕಲ್ಲಟ್ಟೆಗುತ್ತು ಕುಟುಂಬಿಕರು, ಕಟೀಲು ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ. ರವೀಂದ್ರನಾಥ ಪೂಂಜ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ವೇದವ್ಯಾಸ ತಂತ್ರಿ, ಅತ್ತೂರು ಬಾಬು ಶೆಟ್ಟಿ, ವಾಮಯ್ಯ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kateel-06011701 Kateel-06011702 Kateel-06011703 Kateel-06011704 Kateel-06011705Kateel

Comments

comments

Comments are closed.

Read previous post:
Mulki-05011702
ಮೂಲ್ಕಿ ಹೋಬಳಿ ಸಾಹಿತ್ಯ ಸಮ್ಮೇಳನ ಸಮಾರೋಪ

ಮೂಲ್ಕಿ: ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಅಭಿರುಚಿಯನ್ನು ಬೆಸೆಯುವಂತಹ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ, ಸಾಹಿತಿಗಳು ಪ್ರಚಾರ ಬಯಸದೇ ಸದ್ದಿಲ್ಲದೇ ಕನ್ನಡದ ಕಂಪನ್ನು ಪಸರಿಸುವ ಮೂಲಕ ಮುಂದಿನ ಯುವ ಪೀಳಿಗೆಯನ್ನು...

Close