ಜನವರಿ 8 : ಕುಡ್ಲ ತುಳು ಮಿನದನ

ಸುರತ್ಕಲ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಸುರತ್ಕಲ್ ನ ಬಂಟರ ಸಂಘ ಮತ್ತು ಬಂಟರ ಸಂಘದ ಮಹಿಳಾ ವೇದಿಕೆಯ ಸಹಯೋಗದಲ್ಲಿ ಜನವರಿ 8 ರಂದು ಸುರತ್ಕಲ್ ಸುಭಾಷಿತ ನಗರದ ಬಂಟರ ಭವನದಲ್ಲಿ “ಕುಡ್ಲ ತುಳು ಮಿನದನ ಕಾರ್ಯಕ್ರಮ ” ಜರಗಲಿದೆ.

ಬೆಳಿಗ್ಗೆ ಮಾಹೆ ವಿ ವಿ ಯ ವಿಶ್ರಾಂತ ಕುಲಪತಿ ಪದ್ಮಭೂಷಣ ಪ್ರೊ ಬಿ ಎಂ ಹೆಗ್ಡೆ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಶಾಸಕ ಬಿ ಎ ಮೊಯಿದಿನ್ ಬಾವಾ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರ‍್ಯೆ ಶುಭಾಶಂಸನೆಗ್ಯೆಯಲಿದ್ದು ಸಚಿವರಾದ ಯು ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಜೆ ಆರ್ ಲೋಬೊ, ಕೆ ಅಭಯಚಂದ್ರ ಜ್ಯೆನ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಹರಿನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಾರ್ಪೋರೇಟರ್ ಗುಣಶೇಖರ ಶೆಟ್ಟಿ ಸುರತ್ಕಲ್, ಮಂಗಳೂರು ತಾಲೂಕು ನಾಗರಿಕ ಸಮಿತಿ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ, ಉದ್ಯಮಿಗಳಾದ ಲೀಲಾಕ್ಷ ಕರ್ಕೇರ, ಟಿ ರವೀಂದ್ರ ಪೂಜಾರಿ ಮತ್ತು ಕಂದಾಯ ಇಲಾಖೆಯ ಯೋಜನಾ ವ್ಯವಸ್ತಾಪಕ ಕೆ ಸುಧಾಕರ ಶೆಟ್ಟಿ ಬಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಜರಗಲಿರುವ ” ತುಳು ಭಾಷೆದ ಒರಿಪು ಬೊಕ್ಕ ಬುಲೆಚ್ಚಿಲ್ ಡ್ ಮಾದ್ಯಮೊಲೆದ ಪಾಲ್ ಕುರಿತು ಗೋಷ್ಥಿಯಲ್ಲಿ ಪತ್ರಕರ್ತ ಈಶ್ವರ್ ದ್ಯೆತೋಟ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪತ್ರಕರ್ತರಾದ ಮನೋಹರ್ ಪ್ರಸಾದ್, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ ಸದಾನಂದ ಪೆರ್ಲ, ದೃಶ್ಯ ಮಾಧ್ಯಮದ ಎಂ ಎಸ್ ಕೋಟ್ಯಾನ್ ಭಾಗವಹಿಸಲಿದ್ದಾರೆ.

ಮಧ್ಯಾಹ ಜರಗಲಿರುವ “ಬದಲಾವೊಂದುಪ್ಪುನ ತುಳುನಾಡ್ ದ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ಆಚರಣೆಲು ಕುರಿತ ಗೋಷ್ಟಿಯ ಅಧ್ಯಕ್ಷತೆಯನ್ನು ಜಾನಪದ ಸಂಶೋಧಕ ಕೆ ಎಲ್ ಕುಂಡಂತಾಯ ವಹಿಸಲಿದ್ದು ತುಳು ಸಾಹಿತ್ಯಅಕಾಡೆಮಿಯ ಮಾಜಿ ಸದಸ್ಯ ದಯಾನಂದ ಕತ್ತಲ್ ಸಾರ್, ಪತ್ರಕರ್ತ ಪರಮಾನಂದ ಸಾಲ್ಯಾನ್, ಹಳೆಯಂಗಡಿ ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಚೇಳಾಯರು ಭಾಗವಹಿಸಲಿದ್ದಾರೆ.

ಸಂಜೆ ಜರಗಲಿರುವ ತುಳು ಕವಿ ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಕವಿ ಮಹಮ್ಮದ್ ಬಡ್ಡೂರು ವಹಿಸಲಿದ್ದು ಪ್ರಸನ್ನ ಸಚ್ಚರಿಪೇಟೆ, ಮಾಲತಿ ಶೆಟ್ಟಿ ಮಾಣೂರು ಮತ್ತಿತರ ಕವಿಗಳು ಭಾಗವಹಿಸಲಿದ್ದಾರೆ.

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯವರಿಂದ ಹಾಗೂ ಸುರತ್ಕಲ್ ನ ಗೋವಿಂದ ದಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಸಂಜೆ ಸುಂಕದ ಕಟ್ಟೆಯ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಮಾರೋಪ ಸಮಾರಂಭದ ಬಳಿಕ ಸುರತ್ಕಲ್ ನ ಬಂಟರ ಸಂಘದಿಂದ ತುಳುನಾಡ ಸಂಸ್ಕ್ರತಿ ಕಾರ್ಯಕ್ರಮ ಜರಗಲಿದೆ.

ಸಂಜೆ ಜರಗಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ವಹಿಸಲಿದ್ದು ಮಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಕುಮಾರಿ ಸುಮಿತ್ರ ಕರಿಯ, ಕಾರ್ಪೋರೇಟರ್ ಅಶೋಕ್ ಶೆಟ್ಟಿ, ಎಂ ಆರ್ ಪಿ ಎಲ್ ನ ಪ್ರಬಂಧಕಿ ವೀಣಾ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರ‍್ಯೆ ಮಾಲಾಡಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kateel-06011704
ಕಟೀಲು ಕುದ್ರು : ನೂತನ ಮುಖಮಂಟಪ ಸಮರ್ಪಣೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಮೂಲಕುದ್ರು ಭ್ರಾಮರೀವನದ ನಾಗದೇವರ ಸನ್ನಿಧಿಯಲ್ಲಿ ನೂತನ ಶುಕ್ರವಾರ ಶಿಲಾಮಯ ಮುಖಮಂಟಪವನ್ನು ಸಮರ್ಪಿಸಲಾಯಿತು. ಆಕರ್ಷಕ ಕೆತ್ತನೆಗಳಿಂದ ಕೂಡಿದ ಮುಖಮಂಟಪವನ್ನು ಸಮರ್ಪಿಸುವ ಸಂದರ್ಭ...

Close