ಕಿನ್ನಿಗೋಳಿ : ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಮಂತ್ರಾಲಯದ ಕೌಶಲ್ಯ ಯೋಜನೆಯ ಜಾಗೃತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ, ನಿಟ್ಟೆ ವಿದ್ಯಾಸಂಸ್ಥೆ ಮತ್ತು ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ದಿ. ಮುಲ್ಕಿ ರಾಮಕೃಷ್ಣ ಪೂಂಜಾ ಮತ್ತು ದಿ. ಕೆ.ಎಸ್. ಹೆಗ್ಡೆ ಅವರ ಸಂಸ್ಮರಣಾ ಪ್ರಯುಕ್ತ ಜನವರಿ 13 ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ತಪೋವನ ತೋಕೂರುವಿನಲ್ಲಿ ಮಂಗಳೂರು ಮತ್ತು ಉಡುಪಿ ತಾಲೂಕುಗಳ ಪ್ರೌಢಶಾಲಾ ವಿಧ್ಯಾರ್ಥಿಗಳಿಗಾಗಿ ಕೌಶಲ್ಯ ಟ್ರೋಫಿ-ರಸ ಪ್ರಶ್ನೆ ಸರ್ಧಾ ಕಾರ್ಯಕ್ರಮ ನಡೆಸಲಾಗುವುದು.
ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದಾರೆ. ಮಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಲ್ಟರ್ ಹೆಚ್. ಡಿಮೆಲ್ಲೊ, ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಕೆ.ಎಲ್. ಭಾಗವಹಿಸಲಿದ್ದಾರೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿ ವಿಜೇತ ತಂಡಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಆಕರ್ಷಕ ಟ್ರೋಪಿ ಹಾಗೂ ಭಾಗವಹಿಸುವ ಎಲ್ಲಾ ಶಾಲೆಗಳ ತಂಡಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಗುವುದು. ಭಾಗವಹಿಸಲು ಇಚ್ಚಿಸುವ ಪೌಢ ಶಾಲಾ ತಂಡಗಳು ಸಂಸ್ಥೆಯ ದೂರವಾಣಿ ಸಂಖ್ಯೆ (0824) 2297696, 2297119 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.