ಭಾಷೆಯ ಹೆಸರಿನಲ್ಲಿ ದ್ವೇಷ ಬೇಡ : ಬಿ.ಎಂ.ಹೆಗ್ಡೆ

ಸುರತ್ಕಲ್ :  ತುಳುನಾಡಿಗೆ ತಾಯಿಯ ಸ್ಥಾನ ನೀಡುವ ಮೊದಲು ನಮ್ಮ ಹೆತ್ತ ತಾಯಿಯನ್ನು ಮೊದಲು ಪ್ರೀತಿಸಲು ಕಲಿಯಬೇಕು, ಭಾಷೆಯ ಹೆಸರಿನಲ್ಲಿ ದ್ವೇಷ ಮಾಡಬಾರದು, ಮನದಲ್ಲೊಂದು ಸಮಾಜದಲ್ಲೊಂದು ದ್ವಿಮುಖ ಭಾವದ ಮನೋಭಾವನೆಯನ್ನು ದೂರಮಾಡಿ ಎಂದು ಪದ್ಮಭೂಷಣ ಪ್ರೋ. ಬಿ.ಎಂ.ಹೆಗ್ಡೆ ಹೇಳಿದರು.
ಅವರು ಸುರತ್ಕಲ್ ಬಂಟರ ಸಂಘದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಯೋಜನೆಯಲ್ಲಿ ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆಯ ಜಂಟಿ ಸಹಕಾರದಲ್ಲಿ ನಡೆದ ಕುಡ್ಲ ತುಳು ಮಿನದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಬಿ.ಎ.ಮೊದಿನ್ ಬಾವಾ ಅಧ್ಯಕ್ಷತೆಯನ್ನು ವಹಿಸಿ, ವಿಶ್ವಮಾನ್ಯತೆ ಹೊಂದಿದ ತುಳುವರು ಜಗತ್ತಿನ ಮೂಲೆ ಮೂಲೆಯಲ್ಲೂ ಜನಮನ್ನಣೆ ಪಡೆದಿದ್ದಾರೆ, ಮುಂದಿನ ಪೀಳಿಗೆಗೆ ತುಳುವನ್ನು ತಲುಪಿಸುವ ಕೆಲಸಕ್ಕೆ ಸಹಕಾರ ನೀಡಬೇಕಾದ ಅನಿವಾರ್ಯತೆ ನಮ್ಮಲ್ಲಿದೆ ಎಂದರು.
ಕಂದಾಯ ಇಲಾಖೆಯ ಸಮಾಲೋಚನೆ ವಿಪತ್ತು ನಿರ್ವಹಣೆಯ ಯೋಜನಾ ವ್ಯವಸ್ಥಾಪಕ ಕೆ.ಸುಧಾಕರ ಶೆಟ್ಟಿ ಬಾಳರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ತುಳುನಾಡನ್ನು ಉಳಿಸುವ ಹೋರಾಟ ನಡೆಸುತ್ತಿದ್ದರೂ, ತುಳುನಾಡನ್ನು ವಿನಾಶದ ಹಾದಿಯಲ್ಲಿ ತಲುಪಿಸುವ ಬೃಹತ್ ಕೈಗಾರಿಕೆಗಳು ಇಲ್ಲಿ ಸ್ಥಾಪನೆ ಆಗುತ್ತಿದೆ. ಇದಕ್ಕೆ ಹೊಣೆಗಾರರು ಸಹ ನಾವೇ ಆಗಿದ್ದೇವೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ಮೋಹನ್ ಕೊಪ್ಪಲ, ಪ್ರೋ. ಡಿ. ವೇದಾವತಿ, ಜಯಶೀಲ, ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಪೂಂಜ, ಹೋಟೆಲ್ ಉದ್ಯಮಿ ಟಿ.ರವೀಂದ್ರ ಪೂಜಾರಿ, ಮಂಗಳೂರು ನಾಗರಿಕ ವೇದಿಕೆಯ ಅಧ್ಯಕ್ಷ ಸುಭಾಷ್‌ಚಮದ್ರ ಶೆಟ್ಟಿ, ನಮ್ಮ ಕುಡ್ಲ ಛಾನೆಲ್‌ನ ಲೀಲಾಕ್ಷ ಕರ್ಕೇರ, ಮನಪಾದ ಕಾರ್ಪೋರೇಟ್ ಗುಣಶೇಖರ ಶೆಟ್ಟಿ ಮತ್ತಿರರು ಇದ್ದರು.
ಅಕಾಡೆಮಿ ಸದಸ್ಯೆ ರೂಪಕಲಾ ಆಳ್ವಾ ಸ್ವಾಗತಿಸಿದರು, ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ವಂದಿಸಿದರು, ಅಕಾಡೆಮಿ ಸದಸ್ಯ ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಹೆದ್ದಾರಿ ಬಳಿಯ ಸೂರಜ್ ಹೋಟೆಲ್‌ನಿಂದ ಬಂಟರ ಸಂಘಕ್ಕೆ ಅತಿಥಿಗಳೋಂದಿಗೆ ಸಂಘಟಕರು, ಕಾರ್ಯಕರ್ತರು, ಬಂಟರ ಸಂಘದ ಸದಸ್ಯರ ವಿಶೇಷ ಮೆರವಣಿಗೆ ನಡೆಯಿತು.

Surathkal-08011701

Comments

comments

Comments are closed.

Read previous post:
Kateel-08011702
ಕಟೀಲು ಸ್ವಚ್ಚತಾ ಅಭಿಯಾನ

ಕಟೀಲು : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ ಶ್ರದ್ಧಾ ಕೇಂದ್ರಗಳ ಪರಿಸರ ಶುಚಿಗೊಳಿಸುವ ಸಂಕಲ್ಪದ ಹಿನ್ನಲೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ, ಕಟೀಲು ಪದವಿಪೂರ್ವ ಕಾಲೇಜು ಎನ್.ಎಸ್.ಎಸ್. ಘಟಕ,...

Close