ಮುಲ್ಕಿ ವಿಜಯ ಕಾಲೇಜು ಸ್ಥಾಪಕರ ದಿನಾಚರಣೆ

ಮೂಲ್ಕಿ:  ತಾಂತ್ರಿಕ ಜಗತ್ತಿನಲ್ಲಿ  ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಪವರ್ ಕಾರ್ಪೋರೇಶನ್ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಅವರು ಮುಲ್ಕಿ ವಿಜಯ ಕಾಲೇಜಿನ ಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉತ್ತಮ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರಲಾರವು. ನಾವೇ ಹುಡುಕಿಕೊಳ್ಳಬೇಕು ಸೃಷ್ಟಿಸಿಕೊಳ್ಳಬೇಕು. ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ದಾಖಲಿಸಲು ಸಕಲ ಪ್ರಯತ್ನಗಳನ್ನು ಮಾಡಿದಲ್ಲಿ ಉನ್ನತಿ ಸಾಧ್ಯ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ಜೀವ ರಸಾಯನಶಾಸ್ತ್ರದ ಪ್ರಾಧ್ಯಾಪಕಿ ಡಾ. ಮಂಜುಳಾ ಶಾಂತಾರಾಮ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ಉನ್ನತ ಶಿಕ್ಷಣ ಹಾಗು ಸಂಶೋಧನೆ ಮುಂತಾದ ವಿಭಾಗದಲ್ಲಿ ವಿದ್ಯಾರ್ಥಿಗಳ ಉನ್ನತಿ ಸಾಧ್ಯ ಎಂದರು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಸುರೇಶ್ ಅರಾನ್ಹ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಡಾ. ಎಂ. ಎ. ಆರ್. ಕುಡ್ವ, ಡಾ. ಬಿ. ಎಚ್. ರಾಘವ ರಾವ್ ಅವರು ಅಭಿನಂದನಾ ಭಾಷಣ ಮಾಡಿದರು.

ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಆಳ್ವ ಅಧ್ಯಕ್ಷತೆ ವಹಿಸಿದರು. ವಿಶ್ವಸ್ಥ ಮಂಡಳಿಯ ವಿ.ಶಿವರಾಮ್ ಕಾಮತ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿ.ರಮೇಶ್ ಕಾಮತ್ ಹಾಗೂ ಉದಯಕುಮಾರ್ ಉಪಸ್ಥಿತರಿದ್ದರು.

ವಿಜಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ನಾರಾಯಣ ಪೂಜಾರಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಮೀದಾ ಬೇಗಂ ವಾರ್ಷಿಕ ವರದಿ ಮಂಡಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಅನಸೂಯ ಟಿ. ಕರ್ಕೇರ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಪ್ರೊ. ವಿಜಯ ಕುಮಾರಿ ಹಾಗೂ ಹರ್ಷಿತಾ ರಾವ್ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಚ್. ಜಿ. ನಾಗರಾಜ ನಾಯಕ್ ವಂದಿಸಿದರು. ಪ್ರಾಧ್ಯಾಪಕ ಚೆನ್ನ ಪೂಜಾರಿ ನಿರೂಪಿಸಿದರು.

ಪ್ರೊ. ಸಂಪತ್ ಕುಮಾರ್ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ಯಕ್ಷಗಾನ ತರಣೆಸೇನ ಕಾಳಗ ಪ್ರದರ್ಶಿಸಲಾಯಿತು.

Mulki-08011701

Comments

comments

Comments are closed.

Read previous post:
Mulki-07011701
ಮೂಲ್ಕಿ ಅಡಿಟೋರಿಯಂ ಉದ್ಘಾಟನೆ

   

Close