ಜ.13-19 ಏಳಿಂಜೆ ದೇವಳ ಬ್ರಹ್ಮಕಲಶೋತ್ಸವ

Kinnigoli-09011702

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ಮಹಾ ಗಣಪತಿ ದೇವಸ್ಥಾನ ದಲ್ಲಿ ಜನವರಿ 13 ರಿಂದ 19 ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದೆ. ಜ. 13ರ ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಲಿದ್ದು ಮೂಲ್ಕಿ ಸೀಮೆ ಅರಸರಾದ ದುಗ್ಗಣ ಸಾವಂತರು, ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಬ್ರಹ್ಮಶ್ರೀ ಶಿಬರೂರು ವೇದವ್ಯಸ ತಂತ್ರಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ನೂತನ ಪುಷ್ಕರಣಿ ಭಗವದರ್ಪಣೆ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರು ಆಶೀರ್ವಚನ ನೀಡಲಿದ್ದು ನಾಗಪಾತ್ರಿ ವೇದಮೂರ್ತಿ ಸಗ್ರಿ ಗೋಪಾಲಕೃಷ್ಣ ಸಾಮಗ, ಶಿಬರೂರು ವೇದವ್ಯಾಸ ತಂತ್ರಿ, ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶಾಸಕ ವಿನಯಕುಮಾರ್ ಸೊರಕೆ ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಕಲಾ ಸಂಗಮದವರಿಂದ “ಕಡಲ ಮಗೆ ” ತುಳು ನಾಟಕ. ಜ. 14ರ ಬೆಳಿಗ್ಗೆ ಮೃತ್ಯುಂಜಯ ಹೋಮ, ನವಗ್ರಹ ಹೋಮ, ಮಧ್ಯಾಹ್ನ ಮಕರ ಸಂಕ್ರಮಣ ಪ್ರಯುಕ್ತ ವಿಶೇಷ ಅನ್ನ ಸಂತರ್ಪಣೆ, ಸಂಜೆ ನವ ನಿರ್ಮಿತ ಪುಷ್ಕರಣಿಯಲ್ಲಿ ಕೂಪ ಶಾಂತಿ, ವಾಸ್ತು ಪೂಜೆ, ವಾಸ್ತು ಹೋಮ, ಪ್ರಾಕಾರ ಬಲಿ, ಮಂಟಪ ಸಂಸ್ಕಾರ, ರಾತ್ರಿ ಏಳಿಂಜೆ ಭಂಡಾರ ಮನೆಯಿಂದ ಜಾರಂದಾಯ ಮತ್ತು ಬಂಟ ದ್ಯೆವಗಳ ಭಂಡಾರ ಹೊರಟು ಜಾರಂದಾಯ ದ್ಯೆವಸ್ಥಾನಕ್ಕೆ ಆಗಮನ. ಜ.15 ರ ಬೆಳಿಗ್ಗೆ ಅಥರ್ವಶೀರ್ಷ ಗಣಯಾಗ, ಬಿಂಬಶುದ್ದಿ, ಪ್ರಾಯಶ್ಚಿತ ಮತ್ತು ಶಾಂತಿ ಹೋಮಗಳು, ಮಧ್ಯಾಹ್ನ ಜಾರಂದಾಯ ದ್ಯೆವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಅನ್ನ ಸಂತರ್ಪಣೆ, ಸಂಜೆ ನಾಗತನು ಪ್ರಸನ್ನಪೂಜೆ, ನಾಳ ಶೋಧನೆ ಅಷ್ಟಬಂಧ ಲೇಪನ, ರಾತ್ರಿ ಜಾರಂದಾಯ ದ್ಯೆವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಹಾಗೂ ಬಂಡಿ ಉತ್ಸವ, ಜ. 16ರ ಬೆಳಿಗ್ಗೆ ನಾಗ ದೇವರ ಸನ್ನಿಧಿಯಲ್ಲಿ ಕಲಶಾಭಿಷೇಕ, ಗಣಪತಿ ದೇವರ ಸನ್ನಿಧಿಯಲ್ಲಿ ಶಾಂತಿ ಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಯಕ್ಷಕೂಟ ಮಹಿಳಾ ವೇದಿಕೆ ಮಂಗಲಪಾಡಿ ಅವರಿಂದ ದಮಯಂತಿ ಪುನರ್ ಸ್ವಯಂವರ ಯಕ್ಷಗಾನ ತಾಳಮದ್ದಲೆ. ಸಂಜೆ ಮಹಾಗಣಪತಿ ದೇವರಿಗೆ 501 ಕಲಶಾಧಿವಾಸ, ಸಂಜೆ ಬರ್ಸ ತುಳು ಚಲನಚಿತ್ರ ಪ್ರದರ್ಶನ. ಜ.17 ರ ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರಿಗೆ 500 ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, 108 ನಾರಿಕೇಳ ಗಣಯಾಗ, ಮಧ್ಯಾಹ್ನ ಅನ್ನ ಸಂತರ್ಪಣೆ, ವೇದಮೂರ್ತಿ ವಾದಿರಾಜ ಉಪಾಧ್ಯಾಯರಿಂದ ಗಣೇಶಾರಾಧನೆ ಬಗ್ಗೆ ಪ್ರವಚನ, ಯಕ್ಷಗಾನ ಗಾನ ವ್ಯಭವ, ಸಂಜೆ ಚಕ್ರಾಬ್ಜ ಮಂಡಲ ಪೂಜೆ, ರಕ್ತೇಶ್ವರಿ ಮತ್ತು ಪಂಜುರ್ಲಿ ದ್ಯೆವಗಳಿಗೆ ಕಲಶಾಭಿಷೇಕ, ನಾಗ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ರಾತ್ರಿ ಏಳಿಂಜೆ ಜಾರಂದಾಯ ದ್ಯೆವಸ್ಥಾನದಲ್ಲಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ, ಅನ್ನ ಸಂತರ್ಪಣೆ. ಜ.18 ರ ಬೆಳಿಗ್ಗೆ ತತ್ವಹೋಮ, ತತ್ವಕಲಾಭಿಷೇಕ, ಬ್ರಹ್ಮ ಕಲಶ ಮಂಡಲ ರಚನೆ, ವಿಷ್ಣುಯಾಗ, ಲಕ್ಷ್ಮೀಹೃದಯಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಶ್ರೀ ಲಕ್ಷ್ಮೀಜನಾರ್ಧನ ದೇವರಿಗೆ 1001 ಕಲಾಶಾಧಿವಾಸ ಮತ್ತು ಅಧಿವಾಸ ಹೋಮಗಳು. ಸಂಜೆ ಮಂಗಳೂರಿನ ಸನಾತನ ನಾಟ್ಯಾಲಯ ತಂಡದಿಂದ ರಾಷ್ತ್ರ ದೇವೋ ಭವ ರೂಪಕ. ಜ. 19 ರ ಬೆಳಿಗ್ಗೆ 8.33 ಕ್ಕೆ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಶ್ರೀ ಲಕ್ಷ್ಮೀಜನಾರ್ಧನ ದೇವರಿಗೆ 1000 ಪರಿಕಲಶ ಸಹಿತ ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ ಅವಸೃತ ಬಲಿ, ಪಲ್ಲ ಪೂಜೆ, ಮಹಾಮಂತ್ರಕ್ಷತೆ, ಪ್ರಸಾಧ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಫಲಿಮಾರು ಮಠಾಧೀಶ ವಿದ್ಯಾದೀಶ ತೀರ್ಥರು ಆಶೀರ್ವಚನ ನೀಡಲಿದ್ದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಧರ್ಮದರ್ಶಿ ವೇದಮೂರ್ತಿ ಕೆ ಎನ್ ಉಪಾಧ್ಯಾಯ, ಹಿರಿಯ ಸಾಮಾಜಿಕ ಹೋರಾಟಗಾರ ಪದ್ಮಭೂಷಣ ಅಣ್ಣ ಹಜಾರೆ, ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಬಿ ರಮಾನಾಥ ರ‍್ಯೆ, ಪ್ರಮೋದ್ ಮಧ್ವರಾಜ್, ಮುಲ್ಕಿ ಮೂಡಬಿದ್ರೆ ಶಾಸಕ ಕೆ ಅಭಯಚಂದ್ರ ಜ್ಯೆನ್ ಮಾಜಿ ಸಚಿವರಾದ ಕೆ ಅಮರನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಡಾ ಬಿ ಆರ್ ಶೆಟ್ಟಿ, ಡಾ ಎಂ ಮೋಹನ್ ಆಳ್ವ, ಮನ್ ಮೋಹನ್ ಶೆಟ್ಟಿ, ಡಾ ಕೃಪ ಆಳ್ವ ಮತ್ತಿತರು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ದೊಡ್ಡ ರಂಗಪೂಜೆ, ಜಾರಂದಾಯ ಮತ್ತು ಬಂಟ ದ್ಯೆವಗಳ ಭಂಡಾರ ಆಗಮಿಸಿ ಉತ್ಸವ ಬಲಿ, ರಥೋತ್ಸವ, ದ್ಯೆವಗಳ ವಿಶೇಷ ಗಗ್ಗರ ಸೇವೆ ಹಾಗೂ ನವ ನಿರ್ಮಿತ ಪುಷ್ಕರಿಣೆಯಲ್ಲಿ ಅವಭೃತ ಸ್ನಾನ ಜರಗಲಿದೆಯೆಂದು ದೇವಳದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಏಳಿಂಜೆ ಕೊಂಜಾಲುಗುತ್ತು ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.

Comments

comments

Comments are closed.

Read previous post:
YamunaShetty
ಯಮುನ ಶೆಟ್ಟಿ

ಕಿನ್ನಿಗೋಳಿ : ಕಿಲೆಂಜೂರು ಹೊಸಒಕ್ಲು ದಿ. ಮುದ್ದಣ್ಣ ಶೆಟ್ಟಿ ಅವರ ಧರ್ಮ ಪತ್ನಿ ಯಮುನ ಶೆಟ್ಟಿ (75 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನ ಹೊಂದಿದ್ದಾರೆ. ಮೃತರಿಗೆ...

Close