ಮುಲ್ಕಿ ರೈಲ್ವೆ ನಿಲ್ದಾಣಕ್ಕೆ ಕಲ್ಲೆಸೆತ ಮಗುವಿಗೆ ಗಾಯ

ಮೂಲ್ಕಿ: ಮೂಲ್ಕಿ ರೈಲ್ವೇ ನಿಲ್ದಾಣಕ್ಕೆ ರೈಲಿನಲ್ಲಿದ್ದ ಪ್ರಯಾಣಿಕರಿಬ್ಬರು ಕಲ್ಲೆಸೆದಿದ್ದು ಕಲ್ಲು ನಿಲ್ದಾಣದ ಮಾಡಿಗೆ ತಾಗಿ ಸಿಮೆಂಟ್ ಮಾಡಿನ ತುಂಡು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಗುವಿಗೆ ತಾಗಿ ಮಗು ಗಾಯಗೊಂಡ ಘಟನೆ ಭಾನುವಾರ ರಾತ್ರಿ 8ರ ಸುಮಾರಿಗೆ ನಡೆದಿದೆ. ಗಾಯಗೊಂಡ ಮಗುವನ್ನು ಮೂಲ್ಕಿ ಕ್ಷೀರಸಾಗರ ಬಳಿಯ ಭೂಮಿಕಾ(9) ಎಂದು ಗುರುತಿಸಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ಸುಮಾರು 40 ಜನ ಪ್ರಯಾಣಿಕರು ರೈಲ್ವೇ ಸ್ಟೇಷನ್ ಮಾಸ್ಟರ್ ಕುಲಶೇಖರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಲ್ಕಿಯ ಬಪ್ಪನಾಡು ಸಮೀಪದ ನಿವಾಸಿಗಳಾದ ಸುಮಾರು 40 ಜನ ಮುರುಡೇಶ್ವರ ಪ್ರವಾಸ ಮುಗಿಸಿ ಮಡಂಗಾವ್-ಮಂಗಳೂರು ರೈಲಿನಲ್ಲಿ ಬಂದಿದ್ದು ಮೂಲ್ಕಿ ನಿಲ್ದಾಣದ ಎರಡನೇ ರೈಲ್ವೇ ಟ್ರಾಕಿನಲ್ಲಿ ರೈಲನ್ನು ಅದರ ಚಾಲಕ ನಿಲ್ಲಿಸಿದ್ದಾನೆ. ಮೂಲ್ಕಿ ಸಮೀಪದ ಬಪ್ಪನಾಡಿನ ಪತಂಜಲಿ ಯೋಗ ಶಾಲೆಯ ಸುಮಾರು 40ಜನ ಪ್ರಯಾಣಿಕರು ಸೇರಿ ಒಟ್ಟು 80ಜನ ಎರಡನೇ ಟ್ರಾಕಿನಲ್ಲಿಳಿದು ಮೊದಲನೇ ಟ್ರಾಕಿನ ರೈಲ್ವೇ ಫ್ಲಾಟ್ ಫಾರ್ಮಗೆ ಬರಲು ವಯೋವೃದ್ದರೇ ಇದ್ದ ಪ್ರಯಾಣಿಕರ ತಂಡವು ಕತ್ತಲಿನಲ್ಲಿ ನಡೆದುಕೊಂಡು ಬರಲು ತ್ರಾಸ ಪಡಬೇಕಾಯಿತಲ್ಲದೆ ಕೊಳಚಿಕಂಬಳ ಬಳಿಯ ನಿವಾಸಿ ಲತಾ ಸಹಿತ ಹಲವರಿಗೆ ಗಾಯಗಳಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಮೊದಲ ಫ್ಲಾಟ್‌ಫಾರ್ಮ್ ಖಾಲಿ ಇದ್ದರೂ ಎರಡನೇ ಟ್ರಾಕಿನಲ್ಲಿ ನಿಲ್ಲಿಸಿದ್ದ ಬಗ್ಗೆ ಸ್ಟೇಷನ್ ಮಾಸ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಪ್ರಯಾಣಿಕರು ಕತ್ತಲಿನಲ್ಲಿ ರೈಲ್ವೇ ಟ್ರಾಕಿನಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆಯಲ್ಲಿ ರೈಲಿನಲ್ಲಿದ್ದ  ಓರ್ವ ಮೂಲ್ಕಿ ರೈಲ್ವೇ ನಿಲ್ದಾಣಕ್ಕೆ ಕಲ್ಲೆಸೆದಿದ್ದಾನೆ. ರೈಲ್ವೇ ನಿಲ್ದಾಣಕ್ಕೆ ಬಿದ್ದ ಕಲ್ಲು ನಿಲ್ದಾಣದ ಶೀಟಿಗೆ ಬಿದ್ದು ಸಿಮೆಂಟ್ ಶೀಟಿನ ತುಂಡು ಆಗತಾನೆ ರೈಲಿನಿಂದ ಬಂದು ಆಯಾಸದಿಂದ ಕುಳಿತಿದ್ದ ಮಗುವಿನ ಮೇಲೆ ಬಿದ್ದಿದೆ. ಕೂಡಲೇ ಮಗುವಿನ ಹಣೆಗೆ ಸ್ವಲ್ಪ ಗಾಯವಾಗಿದೆ. ಇದರಿಂದ ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡ ಕೂಡಲೇ ಮೂಲ್ಕಿ ಪೊಲೀಸರು ಹಾಗೂ ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕೂಡಲೇ ಮಗುವಿಗೆ ಚಿಕಿತ್ಸೆ ನೀಡಲಾಗಿದೆ.
ಎರಡನೇ ರೈಲ್ವೇ ಫ್ಲಾಟ್‌ಫಾರ್ಮ್‌ಗೆ ಆಗ್ರಹ
ಮೂಲ್ಕಿ ರೈಲ್ವೇ ನಿಲ್ದಾಣದ ಎರಡನೇ ಟ್ರಾಕಿನಲ್ಲಿ ಫ್ಲಾಟ್ ಫಾರ್ಮ ಅವಶ್ಯಕತೆ ಇದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಕಗ್ಗತ್ತಲು ತುಂಬಿರುವ ಎರಡನೇ ಟ್ರಾಕಿನಿಂದ ಮೊದಲನೇ ಟ್ರಾಕ್‌ನ ಫ್ಲಾಟ್‌ಫಾರ್ಮ್‌ಗೆ ಬರಲು ತ್ರಾಸದಾಯಕವಾಗುತ್ತಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಹಾಗೂ ತೊಂದರೆ ಬಗ್ಗೆ ಗಮನಹರಿಸುವಂತೆ ರೈಲ್ವೇ ಸಚಿವರ ಗಮನಸೆಳೆಯಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

Kinnigoli-09011701

Comments

comments

Comments are closed.