ತುಳು ಲಿಪಿಯ ಒತ್ತಡ ಬೇಡ : ಮನೋಹರ ಪ್ರಸಾದ್

ಸುರತ್ಕಲ್ : ತುಳು ಭಾಷೆ ಸರಳವಾದ ಭಾಷೆಯಾಗಿದ್ದು ಅದನ್ನು ತುಳು ಲಿಪಿಯಲ್ಲಿ ಬಂಧಿಸುವ ಒತ್ತಡ ಬೇಡ, ತುಳುನಾಡಿನ ಸಿರಿ, ಕೋಟಿ ಚೆನ್ನಯ್ಯನಂತಹ ಪಾಡ್ದನ ಕಾಲದ ಸಾಹಿತ್ಯವು ಯಾವುದೇ ಬರವಣಿಗೆ ಇಲ್ಲದೆ ಪರಂಪರೆಯಂತೆ ಇಂದಿಗೂ ಪ್ರಸ್ತುತವಾಗಿದೆ. ಬರವಣಿಗೆಯನ್ನು ಕಾಣದ ಆ ಕಾಲದಲ್ಲಿನ ಲಿಪಿಯ ಮೂಲ ಹುಡುಕಾಟದ ಅಗತ್ಯವಿದೆಯೇ ತುಳು ನಾವು ನೀವು ಆಡುವ ಸುಂದರ ಭಾಷೆಯಾಗಿಯೇ ಉಳಿಯಲಿ ಎಂಟನೇ ಪರಿಚ್ಚೇದಕ್ಕೆ ಸೇರಿದಲ್ಲಿ ಇನ್ನಷ್ಟು ಗಟ್ಟಿತನ ತುಳುವಿಗೆ ಸಿಗಬಹುದು ಎಂದು ಉದಯವಾಣಿಯ ಮಂಗಳೂರು ಚೀಫ್‌ಬ್ಯೂರೋ ಮನೋಹರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸುರತ್ಕಲ್ ಬಂಟರ ಸಂಘದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಯೋಜನೆಯಲ್ಲಿ ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆಯ ಜಂಟಿ ಸಹಕಾರದಲ್ಲಿ ನಡೆದ ಕುಡ್ಲ ತುಳು ಮಿನದನ ಕಾರ್ಯಕ್ರಮದ ವಿಶೇಷ ಗೋಷ್ಠಿಯಲ್ಲಿ ತುಳು ಬಾಸೆದ ಒರಿಪು ಬೊಕ್ಕ ಬುಲೆಚಿಲ್‌ಡ್ ಮಾಧ್ಯಮದ ಪಾಲ್ ಎನ್ನುವ ವಿಷಯದಲ್ಲಿ ಪತ್ರಿಕೆಗಳು ಎಂಬ ವಿಭಾಗದಲ್ಲಿ ಮಾತನಾಡಿದರು.
ಆಕಾಶವಾಣಿಯ ಡಾ.ಸದಾನಂದ ಪೆರ್ಲ ಮಾತನಾಡಿ, ತುಳು ಭಾಷೆಗೆ ಆದ್ಯತೆ ನೀಡುವ ಮೂಲಕ ದೇಶದ ಒಟ್ಟು ೧೪೬ ವಿವಿಧ ಭಾಷೆಯಲ್ಲಿ ತುಳುವಿಗೂ ಮಾನ್ಯತೆಯಂತೆ ಆಕಾಶವಾಣಿ ಕಳೆದ ೪೦ ವರ್ಷದಿಂದ ತುಳು ಭಾಷೆ-ಸಂಸ್ಕೃತಿ-ಪರಂಪರೆಯನ್ನು ಬೆಳೆಸುತ್ತಿದೆ. ಮಾಹಿತಿ, ಶಿಕ್ಷಣ ಸಾಹಿತ್ಯ, ಸಾಂಸ್ಕೃತಿಕತೆಯಿಂದ ಧ್ವನಿಯ ರೂಪದಲ್ಲಿ ಇಂಪಾಗಿಸಿದೆ ಎಂದರು.
ದೃಶ್ಯ ಮಾದ್ಯಮದ ಎಂ.ಎಸ್.ಕೋಟ್ಯಾನ್ ಮಾತನಾಡಿ, ಮಂಗಳೂರಿನಲ್ಲಿ ತುಳುವಿಗೆ ವಿಶೇಷ ಚಾಲನೆ ಸಿಕ್ಕಿದ್ದು ದೃಶ್ಯ ಮಾದ್ಯಮದಿಂದ ಸಾಧ್ಯವಾಗಿದೆ ಎನ್ನುವುದಕ್ಕೆ ಮಂಗಳೂರಿನ ನಮ್ಮ ಕುಡ್ಲ, ನಮ್ಮ ಟಿವಿ, ಉಳ್ಳಾಲದ ಪೊಸಕುರಲ್ ನಂತಹ ಖಾಸಗಿ ಛಾನೆಲ್‌ಗಳು ಇಂದಿಗೂ ತುಳುವನ್ನೇ ಪಸರಿಸುತ್ತಿದೆ. ಇಲ್ಲಿನ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಸುವಲ್ಲಿ ಸಹಕರಿಸುತ್ತಿದೆ ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಪತ್ರಕರ್ತ ಈಶ್ವರ್ ದೈತೋಟ ಮಾತನಾಡಿ, ತುಳುನಾಡಿನಿಂದ ವಲಸೆ ಹೋದ ತುಳುವರು ತುಳುವನ್ನು ಅಕ್ಕಪಕ್ಕದಲ್ಲಿ ಬೆಳೆಸಲಿಲ್ಲ ಎಂಬ ಖೇಧವಿದೆ, ತುಳು ಭಾಷೆ ಬೆಳವಣಿಗೆಗೆ ಕನಿಷ್ಠ ಜಿಲ್ಲೆಯಿಂದ ರಾಜಧಾನಿಯವರೆಗೆ ಅಥವ ಹೊರಭಾಗದ ರಾಷ್ಟ್ರಮಟ್ಟದಲ್ಲಿ ಅಕಾಡೆಮಿಗಳ ಮೂಲಕ ಕಾರ್ಯಕ್ರಮಗಳನ್ನು ನೀಡುವ ಅಗತ್ಯವಿದೆ, ಹೇಗೆ ಹೋಟೆಲ್ ಉದ್ಯಮವು ಜಿಲ್ಲೆಯನ್ನು ಈಗಲೂ ಪ್ರಚುರ ಪಡಿಸುತ್ತಿದೆಯೋ ಅದೇ ರೀತಿ ತುಳುವಿಗಾಗಿ ಛಾನೆಲ್, ಪತ್ರಿಕೆ ಏಕೆ ಬರಬಾರದು ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.
ಲೋಕಯ್ಯ ಶೆಟ್ಟಿ ಸ್ವಾಗತಿಸಿದರು, ಜಯಶೀಲ ವಂದಿಸಿದರು, ನರೇಶ್‌ಕುಮಾರ್ ಸಸಿಹಿತ್ಲು ನಿರೂಪಿಸಿದರು.

Surathkal-09011701

 

Comments

comments

Comments are closed.

Read previous post:
ಜ.13 ಕೌಶಲ್ಯ ಟ್ರೋಫಿ-ರಸ ಪ್ರಶ್ನೆ ಸ್ಪರ್ಧೆ

ಕಿನ್ನಿಗೋಳಿ : ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಮಂತ್ರಾಲಯದ ಕೌಶಲ್ಯ ಯೋಜನೆಯ ಜಾಗೃತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ, ನಿಟ್ಟೆ ವಿದ್ಯಾಸಂಸ್ಥೆ ಮತ್ತು ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ...

Close