ಪಡುಪಣಂಬೂರು ಗ್ರಾಮಕ್ಕೆ ಪಡಿತರ ಅಂಗಡಿ ಅಗತ್ಯ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿಯ 2016-17 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಕಲ್ಲಾಪು ವೀರಭದ್ರ ದೇವಳದ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಮೂಲ್ಕಿ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಪಡಿತರ ವಿತರಣಾ ಕೇಂದ್ರವಿದ್ದು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಇಂತಹ ಅವಕಾಶ ಇಲ್ಲದೇ ಇರುವುದರಿಂದ ಸೀಮೆಎಣ್ಣೆ ಇನ್ನಿತರ ಪಡಿತರವು ಪಡುಪಣಂಬೂರು ಗ್ರಾಮಸ್ಥರಿಗೆ ಯಾಕೆ ಸಿಗುತ್ತಿಲ್ಲ. ಆಹಾರ ಮತ್ತು ಪಡಿತರ ಸಾಮಗ್ರಿ ವಿತರಣಾ ಇಲಾಖೆಯು ಶೀಘ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಕೇಂದ್ರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಮಸ್ಯೆಗೆ ಉತ್ತರಿಸಿದ ಆಹಾರ ಇಲಾಖಾಧಿಕಾರಿ ವಾಸು ಶೆಟ್ಟಿ ಮಾತನಾಡಿ ಇಂತಹ ಕೇಂದ್ರ ಸ್ಥಾಪನೆಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಅಥವ ಗ್ರಾಮ ಪಂಚಾಯಿತಿಗಳು ಆಸಕ್ತಿ ವಹಿಸಿದಲ್ಲಿ ಪಡಿತರ ವಿತರಣಾ ಕೇಂದ್ರದ ಏಜೆನ್ಸಿಯನ್ನು ನೀಡುವ ಅವಕಾಶ ಇದೆ. 2015 ರ ಮೊದಲು ರೇಶನ್ ಕಾರ್ಡ್ ಮಾಡಿಸಲು ಮತದಾರರ ಗುರುತು ಚೀಟಿ ಕಡ್ಡಾಯವಾಗಿದ್ದು ಇದೀಗ ಹತ್ತು ತಿಂಗಳಿನಿಂದ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ ಹೊಸ ಎಪಿಲ್ ಕಾರ್ಡುಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದು ಎಂದರು.
ಉಜಾಲ ಗ್ಯಾಸ್ ಸಂಪರ್ಕ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಗೊಂದಲ, ಎಪಿಎಲ್-ಬಿಪಿಎಲ್ ಕಾರ್ಡ್‌ಗಳ ಗೊಂದಲ, ಕೃಷಿ ಬಿತ್ತನೆ ಬೀಜದ ಕೊರತೆ, ವಿದ್ಯುತ್ ಕಡಿತ, ಕೆರೆಕಾಡಿನ ರಸ್ತೆ ಬದಿಯಲ್ಲಿನ ಮರದ ಗೆಲ್ಲುಗಳನ್ನು ಕಡಿದು ರಸ್ತೆಗೆ ಎಸೆಯುವ ಮೆಸ್ಕಾಂ ಇಲಾಖೆ, ಕಂಬಳಬೆಟ್ಟು, ತೋಕೂರು, ಪಲ್ಲಿಗುಡ್ಡೆಯಲ್ಲಿ ಅಕ್ರಮ ಚಟುವಟಿಕೆ, ರಸ್ತೆ ಬದಿಯ ಚರಂಡಿ ಮುಚ್ಚಿರುವುದು, ಕೆರೆಕಾಡು ಜಳಕದ ಕೆರೆ ಸಂಪರ್ಕದ ರಸ್ತೆಗೆ ಡಾಮರೀಕರಣ ಇನ್ನಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ನೋಡೆಲ್ ಅಧಿಕಾರಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರಾ, ಜೀವನ್ ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಪಂಚಾಯಿತಿ ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರು, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-1001201701

Comments

comments

Comments are closed.

Read previous post:
Kinnigoli-09011702
ಜ.13-19 ಏಳಿಂಜೆ ದೇವಳ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ಮಹಾ ಗಣಪತಿ ದೇವಸ್ಥಾನ ದಲ್ಲಿ ಜನವರಿ 13 ರಿಂದ 19 ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದೆ. ಜ. 13ರ ಬೆಳಿಗ್ಗೆ...

Close