ಐಕಳ : 95ಲಕ್ಷ ರೂ ಅನುದಾನ ಮಂಜೂರು

ಕಿನ್ನಿಗೋಳಿ: ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಐಕಳ ಗ್ರಾಮ ಪಂಚಾಯಿತಿಗೆ ವಿವಿಧ ಕಾಮಗಾರಿಗಳಿಗಾಗಿ 95 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಮಾರ್ಚ್‌ನೊಳಗೆ ಕಾಮಗಾರಿ ಮುಗಿಯಬೇಕಾಗಿದೆ ಹಾಗೂ ಕಾಮಗಾರಿಯಲ್ಲಿ ಪಾರದರ್ಶಕತೆ ಅತ್ಯಗತ್ಯ ಈ ಬಗ್ಗೆ ಯಾವುದೇ ರಾಜಿಯಿಲ್ಲ. ಕಾಮಗಾರಿಗಳ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಕಾಳಜಿ ವಹಿಸಿ ಪರಿಶೀಲಿಸಬೇಕಾಗಿದೆ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮಂಗಳವಾರ ಐಕಳ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ ಪಂಚಾಯಿತಿ ಬಳಿ 9 ಲಕ್ಷ ರೂ ವೆಚ್ಚದ ಜಿಮ್ ಕಟ್ಟಡ, 5 ಲಕ್ಷ ರೂ ವೆಚ್ಚದ ಸ್ಥಳಂತಗುತ್ತು ರಸ್ತೆ, 4 ಲಕ್ಷ ರೂ ವೆಚ್ಚದ ಐಕಳ ಮುಂಚಿಗುಡ್ಡೆ ರಸ್ತೆ, 4 ಲಕ್ಷ ರೂ ವೆಚ್ಚದ ನೆಲ್ಲಿಗುಡ್ಡೆ ಕುತ್ಲೋಡಿ ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿ ಅವರು ಮಾತನಾಡಿದರು.
ಈ ಸಂದರ್ಭ ಐಕಳ ಗ್ರಾಮ ಕರಣಿಕರು ಐಕಳ ಪಂಚಾಯತ್‌ನ ಏಳಿಂಜೆ ಹಾಗೂ ಐಕಳ ಪಂಚಾಯತ್ ಬಳಿಯ ಎರಡು ಅಂಗನವಾಡಿಗಳ ನಿರ್ಮಾಣಕ್ಕೆ ಗುರುತಿಸಲಾದ ಜಾಗದ ಪಹಣಿಪತ್ರವನ್ನು ಶಾಸಕರ ಮೂಲಕ ಪಂಚಾಯಿತಿಗೆ ಹಸ್ತಾಂತರಿಸಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಉಪಾಧ್ಯಕ್ಷೆ ಸುಂದರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ಯಾಮಲಾ, ಪಂಚಾಯತ್‌ರಾಜ್ ಇಂಜಿನಿಯರ್ ಪ್ರಶಾಂತ ಆಳ್ವ, ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರ ಸಂತೋಷ್ ಕುಮಾರ್ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

Kinnigoli-1101201702

Comments

comments

Comments are closed.

Read previous post:
Kinnigoli-1001201702
ಉಮೇಶ್ ಮನೆಗೆ ನಳಿನ್ ಕುಮಾರ್ ಕಟೀಲ್ ಬೇಟಿ

ಕಿನ್ನಿಗೋಳಿ: ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿ ಉಮೇಶ್ ಶೆಟ್ಟಿ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಬೇಟಿ ನೀಡಿ, ಉಮೇಶ್ ಶೆಟ್ಟಿ ಅವರ...

Close