ತುಳುನಾಡಿನಲ್ಲಿ ನಾಗಸನ್ನಿಧಿ ತುಂಬಾ ಕಾರಣಿಕ

ಕಿನ್ನಿಗೋಳಿ: ತುಳುನಾಡಿನಲ್ಲಿ ದೈವ ದೇವರು ನಾಗಸನ್ನಿಧಿಗಳು ತುಂಬಾ ಕಾರಣಿಕವಾಗಿದ್ದು ತಮ್ಮನ್ನು ನಂಬಿ ಬಂದಿರುವ ಭಕ್ತರು, ಸಂಸಾರಗಳ ತಪ್ಪು ಒಪ್ಪುಗಳನ್ನು ಸರಿಪಡಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಸುಖ ಸಂಪತ್ತನ್ನು ಕರುಣಿಸಿ ಹರಸುತ್ತವೆ ಎಂದು ಅರ್ಚಕ ಏಳಿಂಜೆ ಶ್ರೀಧರ ಭಟ್ ಹೇಳಿದರು.
ಐಕಳ ಸೊರ್ಕಳ ಗುತ್ತು ಜಾರಂದಾಯ ಬಂಟ ಹಾಗೂ ಇತರ ಪರಿವಾರ ದೈವಗಳ ಸಾನಿಧ್ಯಗಳ ಪ್ರತಿಷ್ಠಾಪನೆ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಸೊರ್ಕಳಗುತ್ತು ಯಜಮಾನ ಶಂಕರ ಶೆಟ್ಟಿ ದಂಪತಿ, ರವೀಂದ್ರ ಶೆಟ್ಟಿ, ಮನೋಹರ ಶೆಟ್ಟಿ, ಅರ್ಚಕ ಏಳಿಂಜೆ ಶ್ರೀಧರ ಭಟ್ ಅವರನ್ನು ಸನ್ಮಾನಿಸಲಾಯಿತು. ಮುಂಬಯಿ ಉದ್ಯಮಿ ಗಣೇಶ್ ಶೆಟ್ಟಿ ಐಕಳ ಹೊಸಗದ್ದೆ, ಕಟೀಲು ಆರು ಯಕ್ಷಗಾನ ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಐಕಳ ಮಹಾಬಲ ಶೆಟ್ಟಿ ಸ್ವಾಗತಿಸಿದರು. ಶರತ್ ಶೆಟ್ಟಿ ಪ್ರಸ್ತಾವನೆಗೈದರು. ಶ್ರೀ ಸರಾಫ್ ಐಕಳ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಶೆಟ್ಟಿ ವಂದಿಸಿದರು.

Kinnigoli-12011701

Comments

comments

Comments are closed.

Read previous post:
Kinnigoli-1201201701
ವಿದ್ಯಾರ್ಥಿಗಳು ದೇಶದ ಏಳಿಗೆಗಾಗಿ ಶ್ರಮಿಸಬೇಕು

ಕಿನ್ನಿಗೋಳಿ: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಶಿಸ್ತು, ಸಂಯಮ ಹಾಗೂ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು ಹಾಗೂ ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ...

Close