ದೇವರನ್ನು ಭಕ್ತಿ ಜೀವನದಲ್ಲಿ ನೆಮ್ಮದಿ

ಕಿನ್ನಿಗೋಳಿ : ದೇವರನ್ನು ಭಕ್ತಿಯಿಂದ ಪೂಜಿಸಿದಾಗ ಜೀವನದಲ್ಲಿ ಮಾನಸಿಕ ನೆಮ್ಮದಿ ಸುಖ ಶಾಂತಿ ಸಿಗುವುದು ಎಂದು ಶಿರ್ಡಿ ಮಾಜಿ ಟ್ರಸ್ಟಿ ಗೋಪಿನಾಥ್ ಕೋತೆ ಪಾಟೀಲ್ ಹೇಳಿದರು.
ಕಿನ್ನಿಗೋಳಿ ಸಮೀಪದ ಅತ್ತೂರು ಕುಂಜೊಟ್ಟುವಿನಲ್ಲಿ ಸಾಯಿಬಾಬಾ ಮೂರ್ತಿಯ ಪ್ರತಿಷ್ಠಾಪನೆ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಅತ್ತೂರು ಬೈಲು ಮಹಾಗಣಪತಿ ಮಂದಿರದ ಗಣಪತಿ ಉಡುಪ, ಕಟೀಲು ದೇವಳ ಪ್ರಧಾನ ಆರ್ಚಕ ಲಕ್ಷೀನಾರಾಯಣ ಆಸ್ರಣ್ಣ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ, ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ದಿವಾಕರ ಪೂಜಾರಿ, ಗುತ್ತಿನಾರ್ ದೊಡ್ಡಯ್ಯ ಮೂಲ್ಯ ಅವರನ್ನು ಸನ್ಮಾನಿಸಲಾಯಿತು,
ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶರ ಭಟ್, ವೆಂಕಟರಾಜ ಉಡುಪ, ಅತ್ತೂರು ಹೊಸಲೊಟ್ಟು ಬಾಬು ಶೆಟ್ಟಿ, ಏಳತ್ತೂರು ದೇವಳ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಮುಂಬೈ ಉದ್ಯಮಿ ಕೇಶವ ಪೂಜಾರಿ, ಎನ್ ಟಿ ಪೂಜಾರಿ, ಗೀತಾ ಕಟಪಾಡಿ, ಜಿಗ್ನೇಶ್ ಮೋದಿ, ಮೀನಾ ತ್ಯಾಗಿ, ವಾಮನ ಡಿ.ಪೂಜಾರಿ, ಸೀತಾರಾಮ ಪೂಜಾರಿ, ಮತ್ತಿತರರು ಇದ್ದರು.
ಪ್ರಸನ್ನ ಎಲ್ ಶೆಟ್ಟಿ ಅತ್ತೂರುಗುತ್ತು ಕಾರ್ಯಕ್ರಮ ನಿರೂಪಿಸಿದರು.

Kinnigoli-12011703 Kinnigoli-12011704

Comments

comments

Comments are closed.