ಕಟೀಲು ಪ.ಪೂ ಕಾಲೇಜು ವಿವೇಕಾನಂದ ಜಯಂತಿ

ಕಟೀಲು : ವಿಶ್ವದ ಉತ್ತಮ ಸದ್ವಿಚಾರಧಾರೆಗಳನ್ನು ಸ್ವೀಕರಿಸಬೇಕು. ಎಲ್ಲಾ ವ್ಯಕ್ತಿಗಳಲ್ಲಿಯೂ ಪೂಜ್ಯತಾ ಭಾವವನ್ನು ಕಾಣುವುದೇ ಹಿಂದೂ ಧರ್ಮದ ಮೂಲ ತತ್ವ. ವಿವೇಕಾನಂದರ ತತ್ವಾದರ್ಶಗಳನ್ನು ರೂಪಿಸಿಕೊಂಡು ಸಮಭಾವ ಸಮಬಾಳು ನಡೆಸಬೇಕು. ಯುವಜನತೆಯಲ್ಲಿ ನೇತ್ರದಾನ ಜಾಗೃತಿ ಪ್ರತಿಜ್ಞೆ ಈ ಬಾರಿಯ ವಿವೇಕಬ್ಯಾಂಡ್ ಅಭಿಯಾನದ ವಿಶೇಷತೆಯಾಗಿದೆ ಎಂದು ರಘನಂದನ್ ಹೇಳಿದರು.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ 154ನೇ ಜಯಂತಿ ಆಚರಣೆ ಸಂದರ್ಭ ಮಾತನಾಡಿದರು.
ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜಾ ಉಪನ್ಯಾಸಕಿ ವನಿತಾ ಜೋಶಿ, ವಿದ್ಯಾರ್ಥಿ ಮುಖಂಡ ಶ್ರೀವತ್ಸ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-12011702

Comments

comments

Comments are closed.

Read previous post:
Kinnigoli-12011701
ತುಳುನಾಡಿನಲ್ಲಿ ನಾಗಸನ್ನಿಧಿ ತುಂಬಾ ಕಾರಣಿಕ

ಕಿನ್ನಿಗೋಳಿ: ತುಳುನಾಡಿನಲ್ಲಿ ದೈವ ದೇವರು ನಾಗಸನ್ನಿಧಿಗಳು ತುಂಬಾ ಕಾರಣಿಕವಾಗಿದ್ದು ತಮ್ಮನ್ನು ನಂಬಿ ಬಂದಿರುವ ಭಕ್ತರು, ಸಂಸಾರಗಳ ತಪ್ಪು ಒಪ್ಪುಗಳನ್ನು ಸರಿಪಡಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಸುಖ ಸಂಪತ್ತನ್ನು...

Close