ಜ. 14 ಮಕರ ಸಂಕ್ರಾತಿ ತಾಳಮದ್ದಲೆ- 2017

ಕಿನ್ನಿಗೋಳಿ : ಕಿನ್ನಿಗೋಳಿ ಯಕ್ಷಲಹರಿ ( ರಿ ) ಹಾಗೂ ಯುಗಪುರುಷ ಆಶ್ರಯದಲ್ಲಿ ಮಕರ ಸಂಕ್ರಾತಿ ತಾಳಮದ್ದಲೆ- 2017 ಜ. 14 ರಂದು ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ. ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ಚಂದ್ರಶೇಖರ ರಾವ್ ಅಧ್ಯಕ್ಷತೆ ವಹಿಸಲಿದ್ದು, ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭಾಶಂಸನೆಗೈಯಲಿದ್ದಾರೆ. ಈ ಸಂದರ್ಭ ಯಕ್ಷಗಾನ ಸಂಘಟಕ ಉಲ್ಲಾಸ್ ಶೆಟ್ಟಿ ಪೆರ್ಮುದೆ ಅವರನ್ನು ಗೌರವಿಸಲಾಗುವುದು. ಪತ್ರಕರ್ತ ಶರತ್ ಶೆಟ್ಟಿ ಅಭಿನಂದನೆಗೈಯಲಿದ್ದಾರೆ. ಉದ್ಯಮಿ ಕೆ. ಶ್ರೀಪತಿ ಭಟ್, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕಿ ಆಶಾ, ಲಯನ್ಸ್ ಮಾಜಿ ಪ್ರಾಂತ್ಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಭಾಗವಹಿಸಲಿದ್ದಾರೆ. ಬಳಿಕ ಶಲ್ಯ ಸಾರಥ್ಯ ಹಾಗೂ ಸುದರ್ಶನ ವಿಜಯ ತಾಳಮದ್ದಳೆ ನಡೆಯಲಿದೆ ಎಂದು ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಹಾಗೂ ಯುಗಪುರುಷದ ಭುವನಾಭಿರಾಮ ಉಡುಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-12011704
ದೇವರನ್ನು ಭಕ್ತಿ ಜೀವನದಲ್ಲಿ ನೆಮ್ಮದಿ

ಕಿನ್ನಿಗೋಳಿ : ದೇವರನ್ನು ಭಕ್ತಿಯಿಂದ ಪೂಜಿಸಿದಾಗ ಜೀವನದಲ್ಲಿ ಮಾನಸಿಕ ನೆಮ್ಮದಿ ಸುಖ ಶಾಂತಿ ಸಿಗುವುದು ಎಂದು ಶಿರ್ಡಿ ಮಾಜಿ ಟ್ರಸ್ಟಿ ಗೋಪಿನಾಥ್ ಕೋತೆ ಪಾಟೀಲ್ ಹೇಳಿದರು. ಕಿನ್ನಿಗೋಳಿ ಸಮೀಪದ...

Close