ವಿದ್ಯಾರ್ಥಿಗಳು ದೇಶದ ಏಳಿಗೆಗಾಗಿ ಶ್ರಮಿಸಬೇಕು

ಕಿನ್ನಿಗೋಳಿ: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಶಿಸ್ತು, ಸಂಯಮ ಹಾಗೂ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು ಹಾಗೂ ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.

ಇತ್ತೀಚೆಗೆ ನಡೆದ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಫ್ರೌಡ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಡಬಿದಿರೆ ಜೈನ್ ಹೈಸ್ಕೂಲು ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಮಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ರಾಜ್ಯಮಟ್ಟದ ಶ್ರೇಷ್ಠ ಪ್ರಾಚಾರ್ಯ ಪ್ರಶಸ್ತಿ ಪುರಸ್ಕ್ರತ ಹಾಗೂ ರೋಟರಿ ಶಾಲಾ ಮಾಜಿ ಕಾರ್ಯದರ್ಶಿ ಪ್ರೊ. ಜಯರಾಮ ಪೂಂಜಾ ಅವರನ್ನು ಸನ್ಮಾನಿಸಲಾಯಿತು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಶಾಲಾ ಸಮಿತಿ ಉಪಾಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ವಿಲಿಯಂ ಸಿಕ್ವೇರಾ, ಕೋಶಾಧಿಕಾರಿ ಸತೀಶ್ಚಂದ್ರ ಹೆಗ್ಡೆ, ಮುಖ್ಯಶಿಕ್ಷಕ ಗಿಲ್ಬರ್ಟ್ ಡಿ’ಸೋಜ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಶರತ್ ಶೆಟ್ಟಿ, ಶಾಲಾ ನಾಯಕಿ ಶ್ರೇಯಾ, ಶಾಲಾ ನಾಯಕ ಪ್ರಜ್ವಲ್ ಪಿಂಟೊ ಉಪಸ್ಥಿತರಿದ್ದರು.

Kinnigoli-1201201701

Comments

comments

Comments are closed.