ಸುಸಂಸ್ಕ್ರತ ಸಮಾಜದ ನಿರ್ಮಾಣ ಸಾಧ್ಯ

ಕಿನ್ನಿಗೋಳಿ: ದೇವರ ಸಾನಿಧ್ಯಗಳನ್ನು ಅಭಿವೃದ್ದಿಪಡಿಸಿ, ಸಂಸ್ಕಾರ ಸಂಸ್ಕ್ರತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿದಾಗ ಸುಸಂಸ್ಕ್ರತ ಸಮಾಜದ ನಿರ್ಮಾಣ ಸಾಧ್ಯ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ ಸಾವಂತರು ಹೇಳಿದರು
ಕಿನ್ನಿಗೋಳಿ ಸಮೀಪದ ಏಳಿಂಜೆ ಲಕ್ಷೀಜನಾರ್ದನ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭ ದೇವಳದ ತಂತ್ರಿಗಳಾದ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಅನುವಂಶಿಕ ಅರ್ಚಕ ವೈ ವಿ ಗಣೇಶ್ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ, ಶಿಬರೂರು ಗುತ್ತು ಗುತ್ತಿನಾರ್ ಉಮೇಶ್ ಶೆಟ್ಟಿ, ಅಂಗಡಿ ಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯೆ ರಶ್ಮಿ ಆಚಾರ್ಯ, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಎಳತ್ತೂರು ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಉಳೆಪಾಡಿ ದೇವಳದ ಆಡಳಿತ ಮೊಕ್ತೇಸರ ಚಿತ್ತರಂಜನ್ ಶೆಟ್ಟಿ, ಏಳಿಂಜೆ ಜಾರಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಜಾರಂದಾಯ ದೈವಸ್ಥಾನ ಪಟ್ಟೆ ಆಡಳಿತ ಮೊಕ್ತೇಸರ ರಘುರಾಮ ಅಡ್ಯಂತಾಯ, ಐಕಳ ಗಾ.ಪಂ. ಅಧ್ಯಕ್ಷ ದಿವಾಕರ ಚೌಟ, ಅನಿಲ್ ಶೆಟ್ಟಿ ಕೋಂಜಾಲಗುತ್ತು, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಸದಾನಂದ ಭಟ್, ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್, ಕಿಟ್ಟಣ್ಣ ಶೆಟ್ಟಿ ಶಿಬರೂರು ಗುತ್ತು, ದೊಡ್ಡಣ್ಣ ಶೆಟ್ಟಿ, ವೈ ಕೃಷ್ಣ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.
ವೈ ಯೋಗೀಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ದೇವಳದ ಅರ್ಚಕ ಸದಾನಂದ ಭಟ್ ವಂದಿಸಿದರು. ಶರತ್ ಶೆಟ್ಟಿ ಮತ್ತು ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-130117018

Comments

comments

Comments are closed.

Read previous post:
Kinnigoli-13011708
ಏಳಿಂಜೆ ದೇವಳ ಉಗ್ರಾಣ ಮುಹೂರ್ತ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ಮಹಾ ಗಣಪತಿ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಿಮಿತ್ತ ಶುಕ್ರವಾರ ಹೊರೆ ಕಾಣಿಕೆ ಮೆರವಣಿಗೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಿತು....

Close