ದೇವಳಗಳು ಸಬ್‌ಸ್ಟೇಷನ್‌ವಿದ್ದಂತೆ

ಕಿನ್ನಿಗೋಳಿ: ದೇವರ ಸನ್ನಿದಾನ ಜೋಗದ ವಿದ್ಯುತ್ ಕೇಂದ್ರದ ಹಾಗಾದರೆ ದೇವಳಗಳು ಸಬ್‌ಸ್ಟೇಷನ್‌ವಿದ್ದಂತೆ ಎಲ್ಲಾ ಊರುಗಳಿಗೂ ದೇವರ ಕೃಪೆ ಸಮಾನವಾಗಿ ಪಸರಿಸಿದೆ. ಯಾವತ್ತೂ ಧರ್ಮ ಸನ್ನಡತೆಯಲ್ಲಿರುತ್ತದೆಯೋ ಅಲ್ಲಿಯ ವರೆಗೆ ಶೃದ್ಧಾ ಕೇಂದ್ರಗಳು ಹಾಗೂ ಪರಿಸರದ ಜನ ಸನ್ನಡತೆಯಿಂದಿರುತ್ತಾರೆ. ಎಂದು ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥರು ಹೇಳಿದರು.
ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷೀಜನಾರ್ದನ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ಅಷ್ಠ ಬ್ರಹ್ಮಕಲಶೋತ್ಸವದ ಪ್ರಯುಕ್ತ ನೂತನವಾಗಿ ನಿರ್ಮಾಣವಾದ ಪುಷ್ಕರಣಿಯ ಉದ್ಘಾಟನಾ ಸಮಾರಂಭದಲ್ಲಿ ಆಶೀವರ್ಚನ ನೀಡಿ ಮಾತನಾಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಗ್ರಾಮೀಣ ಪ್ರದೇಶದ ಏಳಿಂಜೆ ದೇವಳ ವಿಶಿಷ್ಟತೆಯಿಂದ ಕೂಡಿದ್ದು, ಧಾರ್ಮಿಕ ಸಂಸ್ಕಾರ ಸಂಸ್ಕೃತಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಸ್ನೇಹ ಸೌಹಾರ್ಧತೆಯ ನೆಲೆವೀಡಾಗಿದೆ. ಎಂದರು.
ದೇವಳದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ ಏಳಿಂಜೆ ಕೋಂಜಾಲುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ ಶುಭಾಶಂಸನೆಗೈದರು.
ಉದ್ಯಮಿ ಪ್ರಭಾಕರ ಪೂಂಜ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬಳ್ಳಾರಿಯ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ , ಕಟೀಲು ದೇವಳ ಅನುವಂಶಿಕ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜಾ, ಸಮಾಜ ಸೇವಕ ಸಂದೀಪ ಶೆಟ್ಟಿ ಮರವೂರು, ಮಣಿಪಾಲ ಸಿದ್ಧಿ ವಿನಾಯಕ ದೇವಳ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪಾಡಿ, ಮಂಗಳಾದೇವಿ ದೇವಳ ಆಡಳಿತ ಮೊಕ್ತೇಸರ ರಮಾನಾಥ ಶೆಟ್ಟಿ , ಶ್ರೀ ಕ್ಷೇತ್ರ ಮುಂಡ್ಕೂರಿನ ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ , ಹಿರಿಯ ಅರ್ಚಕ ವೈ. ವೆಂಕಟೇಶ್ ಭಟ್, ಕಟೀಲು ಪದವಿ ಕಾಲೇಜು ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ , ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಚಲನ ಚಿತ್ರನಟ ಅರ್ಜುನ ಡಿ. ಕಾಫಿಕಾಡ್, ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಳದ ಅನುವಂಶಿಕ ಅರ್ಚಕ ವೈ. ಗಣೇಶ್ ಭಟ್, ಏಳಿಂಜೆ ಜಾರದಾಯ ದೈವಸ್ಥಾನ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಪಟ್ಟೆ ಜಾರಂದಾಯ ದೈವಸ್ಥಾನ ಆಡಳಿತ ಮೊಕ್ತೇಸರ ರಘುರಾಮ ಅಡ್ಯಂತಾಯ, ದಿವಾಕರ ಶೆಟ್ಟಿ ಕೊಂಜಾಲಗುತ್ತು, ಅನಿಲ್ ಶೆಟ್ಟಿ ಕೊಂಜಾಲಗುತ್ತು, ವೈ. ಕೃಷ್ಣ ಸಾಲ್ಯಾನ್, ವೈ ಯೋಗೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ದೇವಳದ ಅರ್ಚಕ ಸದಾನಂದ ಭಟ್ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ , ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-14011702

Comments

comments

Comments are closed.