ಜ.15ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2017

ಕಿನ್ನಿಗೋಳಿ: ದ.ಕ.ಜಿಲ್ಲಾ ಸಾರಿಗೆ ಮತ್ತು ಪೋಲಿಸ್ ಇಲಾಖೆ,ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ, ಚಾಲಕ ಮತ್ತು ನಿರ್ವಾಹಕರ ಸಂಘ, ಲಾರಿ ಮಾಲಕರ ಸಂಘ, ಕಿನ್ನಿಗೋಳಿ ರೋಟರಿ ಕ್ಲಬ್ ಮತ್ತು ಮಂಗಳೂರಿನ ಕೂಳೂರು ಅರವಿಂದ ಮೋಟಾರ‍್ಸ್ ಸಂಸ್ಥೆಯ ಜಂಟೀ ಆಶ್ರಯದಲ್ಲಿ ಜನವರಿ 15 ಭಾನುವಾರ ಸಂಜೆ 7 ಗಂಟೆಗೆ ಕಿನ್ನಿಗೋಳಿಯ ರೋಟರಿ ರಜತ ಭವನದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2017 ಕಾರ್ಯಕ್ರಮ ನಡೆಯಲಿದೆ ಎಂದು ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ಉತ್ತರ ವಲಯ ಸಂಚಾರಿ ಪೋಲಿಸ್ ಠಾಣೆಯ ನಿರೀಕ್ಷಕ ಮಂಜುನಾಥ್, ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್ ಪೆಕ್ಟರ್ ನಾಗರಾಜ್ ಭಟ್ ಹಾಗೂ 20 ವರ್ಷಕ್ಕಿಂತ ಹೆಚ್ಚು ಅವಧಿಯ ಸೇವೆ ಸಲ್ಲಿಸುತ್ತಿರುವ ಹಿರಿಯ ಬಸ್ಸು ಮಾಲಕರು, ಲಾರಿ ಮಾಲಕರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ ಅಭಯಚಂದ್ರ ಜ್ಯೆನ್ ವಹಿಸಲಿದ್ದು ರಾಜ್ಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಉಪ ಸಾರಿಗೆ ಆಯುಕ್ತ ಆರ್ ಎಂ ವರ್ಣೇಕರ್, ಮಂಗಳೂರು ಸಂಚಾರ ವಿಭಾಗ ಪೋಲಿಸ್ ಉಪ ಆಯುಕ್ತ ಕೆ ತಿಲಕಚಂದ್ರ, ಮೂಲ್ಕಿ ಪೋಲಿಸ್ ಠಾಣಾ ನಿರೀಕ್ಷಕ ಅನಂತ ಪದ್ಮನಾಭ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಯುಗಪುರುಷ ಪ್ರಧನ ಸಂಪಾದಕ ಕೆ ಭುವನಾಭಿರಾಮ ಉಡುಪ ಮತ್ತು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರ‍್ಯೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಲಾರಿ ಮಾಲಕರ ಸಂಘದ ಸಂತೋಷ್ ಕುಮಾರ್ ಹೆಗ್ಡೆ, ಕಿನ್ನಿಗೋಳಿ ಬಸ್ಸು ಚಾಲಕ ಮತ್ತು ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ, ಸ್ವರಾಜ್ ಶೆಟ್ಟಿ, ಯುಗಪುರುಷದ ಕೆ ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ದೇವಿದಾಸ ಶೆಟ್ಟಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-14011701
ಪಕ್ಷಿಕೆರೆ ವಿವೇಕಾನಂದ ಜಯಂತಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಅತ್ತೂರು ವಾರ್ಡ್‌ನಲ್ಲಿ ಸ್ವಾಮೀ ವಿವೇಕಾನಂದ ರ 154ನೇ ಜಯಂತಿ ಕಾರ್ಯಕ್ರಮವನ್ನು ಗುರುವಾರ ಬಿಜೆಪಿ ಮೂಲ್ಕಿ ಮೂಡಬಿದ್ರೆ ಕೇತ್ರದ ಅಧ್ಯಕ್ಷ ಈಶ್ವರ್...

Close