ಪಂಜ ಶ್ರೀ ಹರಿಪಾದ ಅಭಿವೃದ್ಧಿ ಪೂರ್ವಭಾವಿ ಸಭೆ

ಕಿನ್ನಿಗೋಳಿ: ನಮ್ಮ ಸನಾತನ ಸಂಸ್ಕೃತಿಯ ದ್ಯೋತಕವಾಗಿ ನಮ್ಮ ಪೂರ್ವಿಕರು ಕೆಲವೊಂದು ಧಾರ್ಮಿಕ ನಂಬಿಕೆ ಆಚರಣೆಗಳನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಉಳಿಸಿ ಬೆಳೆಸಿ ಹಾಗೂ ಇಲ್ಲಿನ ಸಾನಿಧ್ಯ ಅಭಿವೃದ್ಧಿ ಮಾಡುವ ಕರ್ತವ್ಯ ನಮ್ಮದು. ಎಲ್ಲರೂ ಸಹಕರಿಸಿದರೆ ಶೀಘ್ರ ಅಭಿವೃದ್ಧಿ ಸಾಧ್ಯ ಎಂದು ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.
ಪಂಜ ಕೊಯಿಕುಡೆ ಶ್ರೀ ಹರಿಪಾದ Pತ್ರದ ಜೀರ್ಣೋದ್ಧಾರದ ಪ್ರಯುಕ್ತ ಶುಕ್ರವಾರ ನಡೆದ ಪೂರ್ವಭಾವಿ ಸಬೆಯಲ್ಲಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿ ಇಂತಹ ಕ್ಷೇತ್ರಗಳು ಇರುವುದು ಬಹಳ ವಿರಳ ದೈವಜ್ಞರ ಚಿಂತನೆ ಹಾಗೂ ಅಷ್ಟ ಮಂಗಳದ ಪ್ರಶ್ನೆ ಇಡುವ ಮೂಲಕ ಸಾನಿಧ್ಯದ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.
ಹಿರಿಯ ಧಾರ್ಮಿಕ ಮುಖಂಡ ಸತ್ಯಜಿತ್ ಸುರತ್ಕಲ್ ಮಾತನಾಡಿ ಧರ್ಮ ಜಾಗೃತಿ ಆಗಬೇಕು. ಇಂತಹ ಪುರಾತನ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು, ಜಿ. ಪಂ. ಮಾಜಿ ಸದಸ್ಯ ಈಶ್ವರ್ ಕಟೀಲು, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಬೊಳ್ಳೂರು, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷ ಮೋಹನ್‌ದಾಸ್, ಪಂಜ ನಾರಾಯಣ ಕೋಟ್ಯಾನ್, ಮಹಾಗಣಪತಿ ಮಂದಿರದ ಸುರೇಶ್ ಭಟ್ ಪಂಜ, ಉಲ್ಯ ಸುಂದರ ಪೂಜಾರಿ, ಗ್ರಾ. ಪಂ. ಸದಸ್ಯ ಲೋಹಿತ್ ಕುಮಾರ್, ಸುರೇಶ್ ದೇವಾಡಿಗ ಪಂಜ, ವೆಂಕಟೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಅರ್ಚಕ ವಿಷ್ಣು ಭಟ್ ಸ್ವಾಗತಿಸಿದರು. ಸೋಂದಾ ಭಾಸ್ಕರ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-14011703

Comments

comments

Comments are closed.