ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು

ಬಜಪೆ: ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು ಬಜಪೆ ಸಮೀಪದ ಕತ್ತಲ್ ಸಾರ್ ಗುರುಂಪೆ ಎಂಬಲ್ಲಿ ಜನಿಸಿದ್ದು ಅಲ್ಲಿನ ಗ್ರಾಮದ ಜನರಿಗೆ ಅಚ್ಚರಿ ಮೂಡಿಸಿದೆ. ಪಡುಪೆರಾರ್ ಸಮೀಪದ ಕತ್ತಲ್ ಸಾರ್ ಗುರುಂಪೆ ನಿವಾಸಿ ಹೇಮನಾಥ ಶೆಟ್ಟಿ ಕೃಷಿಯ ಜೊತೆ ಹೈನುಗಾರಿಕ ಉದ್ಯಮವನ್ನು ಮಾಡುತ್ತಿದ್ದು ಹಲವು ದನ ಮತ್ತು ಎಮ್ಮೆಗಳನ್ನು ಸಾಕುತ್ತಿದ್ದಾರೆ, 7 ವರ್ಷ ಹಿಂದೆ ತಾವು ತಂದ ಜರ್ಸಿ ದನವೊಂದು ಎರಡು ಬಾರಿ ಕರು ಹಾಕಿದ್ದು ಇದೀಗ ಜನವರಿ 13 ರಂದು ಮೂರನೇ ಕರುವಿಗೆ ಜನ್ಮ ನೀಡಿದೆ, ಆದರೆ ಕರು ಜನಿಸುವಾಗ ಮನೆಯವರಿಗೆ ವಿಚಿತ್ರ ಕಾದಿತ್ತು ಒಂದೇ ದೇಹದ ಕರುವಿಗೆ ಎರಡು ತಲೆ, ನಾಲ್ಕು ಕಣ್ಣು, ಮೂರು ಕಿವಿ, ಎರಡೂ ತಲೆಯ ಭಾಗ ಕೂಡಿಕೊಂಡಿದ್ದ ಕರು ಜೀವಂತವಾಗಿದೆ, ಆದರೆ ನಿಲ್ಲಲು ಅಸಾಧ್ಯ, ಕರುವಿಗೆ ದನದ ಹಾಲನ್ನು ಮಗುವಿಗೆ ಹಾಲುಣಿಸುವ ಬಾಟಲ್ ನಲ್ಲಿ ಮನೆಯವರು ನೀಡುತ್ತಿದ್ದು.
ನೋಡಲು ಸಾಮಾನ್ಯ ಕರುವಿನಂತೆ ಇದ್ದು, ಬಾಯಿ ಮತ್ತು ಕಣ್ಣು ಗಳು ಒಂದೇ ರೀತಿಯಾಗಿ ಚಲನವಲನದಲ್ಲಿ ಕೂಡಿದ್ದು, ಉಸಿರಾಡಲು ಸ್ವಲ್ಪ ಕಷ್ಟ ಸಾಧ್ಯವಾಗಿದೆ. ಜರ್ಸಿ ದನವಾದರಿಂದ ಕರು ಕೂಡ ಎತ್ತರವಾಗಿದೆ, ಪಶುವೈದ್ಯರು ಪರಿಶೀಲಿಸಿ ಕೆಲವೊಂದು ಸಂದರ್ಭದಲ್ಲಿ ಇಂತಹ ಕರು ಜನನವಾಗುವುದು ಸಾಮಾನ್ಯ ಆದರೆ ಕರು ಬದುಕುಳಿಯುವ ಸಾದ್ಯತೆ ಬಹಳ ಕಡಿಮೆ ಎಂದು ತಿಳಿಸಿದ್ದಾರೆ.

Kinnigoli-160117017 Kinnigoli-160117018 Kinnigoli-160117019 Kinnigoli-160117020 Kinnigoli-160117021 Kinnigoli-160117022 Kinnigoli-160117023

Comments

comments

Comments are closed.

Read previous post:
Kinnigoli-160117016
ಕೊಲ್ಲೂರು ಹಿಂದು ರುದ್ರ ಭೂಮಿ ಶಿಲನ್ಯಾಸ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಗ್ರಾಮದಲ್ಲಿ ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಅವರ ಅನುದಾನದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಐದು ಲಕ್ಷ ರೂ. ವೆಚ್ಚದ...

Close