ಮಕರ ಸಂಕ್ರಾತಿ ತಾಳಮದ್ದಲೆ

ಕಿನ್ನಿಗೋಳಿ : ಯಕ್ಷಗಾನ – ತಾಳಮದ್ದಳೆಗಳು ಸದ್ ಚಿಂತನೆಯ ಧಾರ್ಮಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಮಾಜಕ್ಕೆ ನೀಡಿ ಧಾರ್ಮಿಕ ಪ್ರಜ್ಞೆ ಹಾಗೂ ಧರ್ಮದ ಜಾಗೃತಿ ಮೂಡಿಸುತ್ತದೆ. ಯಕ್ಷಗಾನ ತಾಳಮದ್ದಲೆಗಳು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹೊಸತನ ಬಳಸಿಕೊಂಡಾಗ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು. ಎಂದು ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಚಂದ್ರಶೇಖರ ರಾವ್ ಬಿ. ಹೇಳಿದರು.
ಕಿನ್ನಿಗೋಳಿ ಯಕ್ಷಲಹರಿ (ರಿ) ಯುಗಪುರುಷ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಶನಿವಾರ ನಡೆದ ತಾಳಮದ್ದಲೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಯಕ್ಷಗಾನ ಸಂಘಟಕ ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ವಿಜಯ ಕಲಾವಿದರು ಅಧ್ಯಕ್ಷ ಶರತ್ ಶೆಟ್ಟಿ ಅಭಿನಂದನಾ ಭಾಷಣಗೈದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಲಹರಿ ಅಧ್ಯಕ್ಷ ಪಿ ಸತೀಶ್ ರಾವ್ ಸ್ವಾಗತಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಯಕ್ಷಲಹರಿ ಕಾರ್ಯದರ್ಶಿ ವಸಂತ ದೇವಾಡಿಗ ವಂದಿಸಿದರು. ಯಕ್ಷಲಹರಿ ಉಪಾಧ್ಯಕ್ಷ ಪಶುಪತಿ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಶಲ್ಯ ಸಾರಥ್ಯ ನಂತರ ಸುದರ್ಶನ ವಿಜಯ ಯಕ್ಷಗಾನ ತಾಳಮದ್ದಲೆ ನಡೆಯಿತು.

Kinnigoli-16011702

Comments

comments

Comments are closed.

Read previous post:
Kinnigoli-16011701
ಉಳೆಪಾಡಿ: ಮಕರ ಸಂಕ್ರಾಂತಿ

ಕಿನ್ನಿಗೋಳಿ: ಸನಾತನ ಧರ್ಮದ ಸಂಸ್ಕೃತಿ, ಧಾರ್ಮಿಕತೆಗೆ ಚ್ಯುತಿ ಬಾರದಂತೆ ನಾವು ಜೀವನ ಸಾಗಿಸಬೇಕು ಇದರಿಂದ ದೇವರ ಅನುಗ್ರಹ ಮಾನಸಿಕ ನೆಮ್ಮದಿ ಇರುತ್ತದೆ ಎಂದು ಮುಂಬಯಿ ಉದ್ಯಮಿ ವಿರಾರ್ ಶಂಕರ...

Close