ಕೊಲ್ಲೂರು ಹಿಂದು ರುದ್ರ ಭೂಮಿ ಶಿಲನ್ಯಾಸ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಗ್ರಾಮದಲ್ಲಿ ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಅವರ ಅನುದಾನದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಐದು ಲಕ್ಷ ರೂ. ವೆಚ್ಚದ ಹಿಂದು ರುದ್ರಭೂಮಿಯ ಶಿಲನ್ಯಾಸ ಹಿಂದು ರುದ್ರಭೂಮಿ ಸಮಿತಿ ಅಧ್ಯಕ್ಷ ದಯಾನಂದ ಭಟ್ ಅವರ ಪೌರೋಹಿತ್ಯದಲ್ಲಿ ಸೋಮವಾರ ನಡೆಯಿತು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಬಳ್ಕುಂಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ ಎಸ್. ಕೋಟ್ಯಾನ್, ಮಾಜಿ ಅಧ್ಯಕ್ಷೆ ಗೀತಾ ಅಮೀನ್, ಪಂಚಾಯಿತಿ ಸದಸ್ಯರಾದ ಆನಂದ್, ಗೀತಾ, ಹಿಂದು ರುದ್ರಭೂಮಿ ಸಮಿತಿ ಕಾರ್ಯದರ್ಶಿ ಪ್ರವೀಣ್ ಪದವು, ಗುತ್ತಿಗೆದಾರ ಕೈಲಾಸ್ ಬಾಬು, ಎಲ್ಲಪ್ಪ ಟಿ. ಸಾಲ್ಯಾನ್, ಐತಪ್ಪ ಸಾಲ್ಯಾನ್, ಗಂಗಾಧರ ಪೂಜಾರಿ, ವಾಸು, ಬೇಬಿ, ಅಮಿತಾ, ಸುಂದರ ಪೂಜಾರಿ, ಕೃಷ್ಣ, ನಾರಾಯಣ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-160117016

Comments

comments

Comments are closed.

Read previous post:
Kinnigoli-160117015
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2017

ಕಿನ್ನಿಗೋಳಿ ರಸ್ತೆಯ ಸುರಕ್ಷತೆ ನಿಯಮ ಸರಿಯಾಗಿ ಪಾಲಿಸಿದಾಗ ಅಪಘಾತಗಳನ್ನು ತಡೆಗಟ್ಟಬಹುದು. ಅಪಘಾತ ನಡೆಯದಂತೆ ನೋಡಿಕೊಳ್ಳುವುದೆ ನಮ್ಮೆಲರ ಆದ್ಯ ಕರ್ತವ್ಯ. ತಮ್ಮ ಕುಟುಂಬದ ರಕ್ಷಣೆಗಾಗಿ ರಸ್ತೆಯ ಮೇಲೆ ಸಂಚರಿಸುವಾಗ ಎಚ್ಚರದಿರಬೇಕು....

Close