ಕೊಲ್ಲೂರು ನಾಗಬ್ರಹ್ಮಮಂಡಲ : ಸಿದ್ಧತಾ ಸಭೆ

ಕಿನ್ನಿಗೋಳಿ : ತುಳುನಾಡಿನ ಇತಿಹಾಸ ಕಾರ್ಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆಯರ ಕೊಲ್ಲೂರಿನ ಜನ್ಮಕ್ಷೇತ್ರದ ನಾಗಬನದಲ್ಲಿ ಮಾರ್ಚ್ 17 ರಂದು ನಡೆಯಲಿರುವ ನಾಗಬ್ರಹ್ಮ ಮಂಡಲದ ಪೂರ್ವಭಾವಿ ಸಿದ್ಧತಾ ಸಭೆ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಸಮಿತಿಯನ್ನು ರಚಿಸಲಾಯಿತು. ದಾಮೋದರ ದಂಡಕೇರಿ ಅಧ್ಯಕ್ಷರಾಗಿ ಆಯ್ಕೆಯಾದರು. ಚಂದ್ರಶೇಖರ ಭಟ್, ನಾಗರಾಜ ಭಟ್, ದೇವದಾಸ ಮಲ್ಯ, ಶಶಿಧರ ಅಡ್ಕತ್ತಾಯ, ಬಿಪಿನ್ ಪ್ರಸಾದ್, ಹರೀಂದ್ರ ಸುವರ್ಣ, ಚಂದ್ರಹಾಸ ಮರೋಳಿ, ಇಂದಿರ ಅಮೀನ್, ಆನಂದ ಕೊಲ್ಲೂರು, ಎಲ್ಲಪ್ಪ ಸಾಲ್ಯಾನ್, ಕಾಯದರ್ಶಿ ಗಂಗಾಧರ ಪೂಜಾರಿ, ಶೀನ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-16011704

Comments

comments

Comments are closed.