ರಾಮಕೃಷ್ಣ ಪೂಂಜ – ರಸಪ್ರಶ್ನೆ ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ : ಪ್ರೌಡಶಾಲಾ ವಿದ್ಯಾರ್ಥಿ ದೆಸೆಯಲ್ಲಿಯೇ ಓದುವುದರ ಜೊತೆಗೆ ಕೌಶಲ್ಯ ಜ್ಞಾನವನ್ನು ಅಭಿವೃದ್ಧಿ ಪಡಿಸಬೇಕು ಎಂದು ನಿಟ್ಟೆ ವಿದ್ಯಾ ಸಂಸ್ಥೆ ಉಪನಿರ್ದೇಶಕರು(ಶೈಕ್ಷಣಿಕ), ನೀತಾ ಕಿಶೋರ್ ಹೇಳಿದರು.
ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಮಂತ್ರಾಲಯದ ಕೌಶಲ್ಯ ಯೋಜನೆಯ ಜಾಗೃತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ, ನಿಟ್ಟೆ ವಿದ್ಯಾಸಂಸ್ಥೆ ಮತ್ತು ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ದಿ. ಮುಲ್ಕಿ ರಾಮಕೃಷ್ಣ ಪೂಂಜಾ ಮತ್ತು ದಿ. ಕೆ.ಎಸ್. ಹೆಗ್ಡೆ ಯವರ ಸಂಸ್ಮರಣೆಯ ಪ್ರಯುಕ್ತ ಮಂಗಳೂರು ಮತ್ತು ಉಡುಪಿ ತಾಲೂಕುಗಳ ಪ್ರೌಢಶಾಲಾ ವಿಧ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ಕೌಶಲ್ಯ ಟ್ರೋಫಿ-ರಸ ಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುರತ್ಕಲ್ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ನವ್ಯಶ್ರೀ ಮತ್ತು ಮನ್ವಿಥ್ ವಿ. ಸುವರ್ಣ ಪ್ರಥಮ, ನಿಟ್ಟೆ ಡಾ. ಎನ್.ಎಸ್.ಎ.ಎಮ್. ಸೀನಿಯರ್ ಸ್ಕೂಲ್‌ನ ಹರ್ಷಿತ್ ಮತ್ತು ತೇಜಸ್ವಿ ದ್ವಿತೀಯ, ಬಡಗ ಎಕ್ಕಾರು ಸರಕಾರಿ ಪ್ರೌಡ ಶಾಲೆಯ ಮನೋಜ್ ಮತ್ತು ಗೌತಮ್ ತೃತೀಯ ಪ್ರಶಸ್ತಿ ಪಡೆದರು.
ಐಟಿಐ ಪ್ರಾಚಾರ್ಯ ವೈ.ಎನ್.ಸಾಲಿಯನ್, ರಘುರಾಮ್ ರಾವ್, ಸಂಜೀವ ದೇವಾಡಿಗ, ಲಕ್ಷ್ಮೀಕಾಂತ, ಹರಿ ಎಚ್, ವಿಶ್ವನಾಥ್ ರಾವ್ ಉಪಸ್ಥಿತರಿದ್ದರು.

Kinnigoli-16011705

Comments

comments

Comments are closed.

Read previous post:
Kinnigoli-16011704
ಕೊಲ್ಲೂರು ನಾಗಬ್ರಹ್ಮಮಂಡಲ : ಸಿದ್ಧತಾ ಸಭೆ

ಕಿನ್ನಿಗೋಳಿ : ತುಳುನಾಡಿನ ಇತಿಹಾಸ ಕಾರ್ಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆಯರ ಕೊಲ್ಲೂರಿನ ಜನ್ಮಕ್ಷೇತ್ರದ ನಾಗಬನದಲ್ಲಿ ಮಾರ್ಚ್ 17 ರಂದು ನಡೆಯಲಿರುವ ನಾಗಬ್ರಹ್ಮ ಮಂಡಲದ ಪೂರ್ವಭಾವಿ ಸಿದ್ಧತಾ ಸಭೆ ಇತ್ತೀಚೆಗೆ ನಡೆಯಿತು....

Close