ರಾಮಕೃಷ್ಣ ಪೂಂಜ ಐಟಿಐ ರಸಪ್ರಶ್ನೆ

ಕಿನ್ನಿಗೋಳಿ: ಕೌಶಲ್ಯಭರಿತ ಯುವಜನಾಂಗವೇ ನಮ್ಮ ದೇಶದ ಆಸ್ತಿ . ಕೌಶಲ್ಯವು ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಮಹತ್ತರವಾದ ವಹಿಸಿ ಯುವಜನರಲ್ಲಿ ಆತ್ಮ ವಿಶ್ವಾಸವನ್ನು ಬೆಳಸುತ್ತದೆ ಇದು ನಮ್ಮ ಪ್ರಧಾನಿಯವರ ಕನಸೂ ಕೂಡ ಎಂದು ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ನಿಟ್ಟೆ ವಿದ್ಯಾಸಂಸ್ಥೆ ಮತ್ತು ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ದಿ. ಮುಲ್ಕಿ ರಾಮಕೃಷ್ಣ ಪೂಂಜಾ ಮತ್ತು ದಿ. ಕೆ.ಎಸ್. ಹೆಗ್ಡೆ ಅವರ ಸಂಸ್ಮರಣೆ ಪ್ರಯುಕ್ತ ಮಂಗಳೂರು ಮತ್ತು ಉಡುಪಿ ತಾಲೂಕುಗಳ ಪ್ರೌಢಶಾಲಾ ವಿಧ್ಯಾರ್ಥಿಗಳಿಗಾಗಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ತಪೋವನ ತೋಕೂರು ನಲ್ಲಿ ಶುಕ್ರವಾರ ನಡೆದ ಕೌಶಲ್ಯ ಟ್ರೋಫಿ-ರಸ ಪ್ರಶ್ನೆ ಸರ್ಧಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣ ಅಧೀಕ್ಷಕ ರಘುನಾಥ್, ನೀತ ಕಿಶೋರ್, ಶ್ರೀಲತಾ ರಾವ್ , ರಘುರಾಮ್ ರಾವ್, ಸಂಜೀವ ದೇವಾಡಿಗ ಉಪಸ್ಥಿತರಿದ್ದರು.
ಕಿರಿಯ ತರಬೇತಿ ಅಧಿಕಾರಿಣಿ ರಕ್ಷಿತಾ ಪ್ರಾರ್ಥನೆಗೈದರು. ಪ್ರಾಚಾರ್ಯ ವೈ. ಎನ್. ಸಾಲಿಯನ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಹರಿ ಎಚ್. ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ವಿಶ್ವನಾಥ್ ರಾವ್ ನಿರೂಪಿಸಿದರು.

Kinnigoli-16011703

Comments

comments

Comments are closed.

Read previous post:
Kinnigoli-16011702
ಮಕರ ಸಂಕ್ರಾತಿ ತಾಳಮದ್ದಲೆ

ಕಿನ್ನಿಗೋಳಿ : ಯಕ್ಷಗಾನ - ತಾಳಮದ್ದಳೆಗಳು ಸದ್ ಚಿಂತನೆಯ ಧಾರ್ಮಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಮಾಜಕ್ಕೆ ನೀಡಿ ಧಾರ್ಮಿಕ ಪ್ರಜ್ಞೆ ಹಾಗೂ ಧರ್ಮದ ಜಾಗೃತಿ ಮೂಡಿಸುತ್ತದೆ. ಯಕ್ಷಗಾನ ತಾಳಮದ್ದಲೆಗಳು...

Close