ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2017

ಕಿನ್ನಿಗೋಳಿ ರಸ್ತೆಯ ಸುರಕ್ಷತೆ ನಿಯಮ ಸರಿಯಾಗಿ ಪಾಲಿಸಿದಾಗ ಅಪಘಾತಗಳನ್ನು ತಡೆಗಟ್ಟಬಹುದು. ಅಪಘಾತ ನಡೆಯದಂತೆ ನೋಡಿಕೊಳ್ಳುವುದೆ ನಮ್ಮೆಲರ ಆದ್ಯ ಕರ್ತವ್ಯ. ತಮ್ಮ ಕುಟುಂಬದ ರಕ್ಷಣೆಗಾಗಿ ರಸ್ತೆಯ ಮೇಲೆ ಸಂಚರಿಸುವಾಗ ಎಚ್ಚರದಿರಬೇಕು. ಸಂಚಾರ ನಿಯಮದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಮಂಗಳೂರು ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ರವಿಶಂಕರ್ ಮಾಹಿತಿ ನೀಡಿ ಮಾತನಾಡಿದರು.
ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ, ಬಸ್ಸು ಮಾಲಕರ ಸಂಘ ಕಿನ್ನಿಗೋಳಿ ವಲಯ, ಲಾರಿ ಮಾಲಕರ ಸಂಘ ಕಿನ್ನಿಗೋಳಿ ವಲಯ, ರೋಟರಿ ಕ್ಲಬ್ ಕಿನ್ನಿಗೋಳಿ, ಅರವಿಂದ ಮೋಟಾರ‍್ಸ್ ಕುಳೂರು ಮಂಗಳೂರು ಇವರ ಆಶ್ರಯದಲ್ಲಿ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಭಾನುವಾರ ನಡೆದ 28 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2017 ಸಮಾರಂಭದಲ್ಲಿ ಮಾತನಾಡಿದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರ ಸದೃಡ ಸುರಕ್ಷಿತ ರಸ್ತೆಗಾಗಿ ಸಾಕಷ್ಟು ಹಣ ಮೀಸಲಿರಿಸಿದೆ. ಮೂಲ್ಕಿ-ಕಟೀಲು, ಬಜಪೆ ರಸ್ತೆ ಈ ಗಾಗಲೇ ಅಗಲಗೊಳ್ಳುತ್ತಿದೆ, ಅದೇ ರೀತಿ ಬೆಳ್ತಂಗಡಿ ಮೂಡಬಿದಿರೆ ಕಿನ್ನಿಗೋಳಿ ರಸ್ತೆ ಅಭಿವೃದ್ಧಿ ಕೆಲಸ ಆಗಬೇಕಾಗಿದೆ. ಎಂದರು.
ಈ ಸಂದರ್ಭ ಮಂಗಳೂರು ಉತ್ತರ ವಲಯ ಸಂಚಾರಿ ಪೋಲಿಸ್ ಠಾಣಾ ನಿರೀಕ್ಷಕ ಮಂಜುನಾಥ್, ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್‌ಪೆಕ್ಟರ್ ನಾಗರಾಜ್ ಭಟ್ ಹಾಗೂ 20 ವರ್ಷಕ್ಕಿಂತ ಹೆಚ್ಚು ಅವಧಿಯ ಸೇವೆ ಸಲ್ಲಿಸುತ್ತಿರುವ ಬಸ್ಸು ಮಾಲಕರಾದ ಸಂದೀಪ್ ರೈ, ಸುದೇಶ್, ರಾಜೇಶ ಶೆಟ್ಟಿ, ಜಾನ್ಸನ್ ಜೊರೋಮ್ ಡಿಸೋಜ, ಹಾಗೂ ಲಾರಿ ಮಾಲಕರಾದ ಕುಪ್ಪು ಸ್ವಾಮಿ, ಹಾಜಿ ಕೆ ಮಿರಾನ್ ಹಾಗೂ ಜೀವ ರಕ್ಷಕಿ ರೇಶ್ಮ ರಾವ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮೂಲ್ಕಿ ಠಾಣಾ ಉಪ ನಿರೀಕ್ಷಕ ಆರ್ ಶಾಂತಪ್ಪ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಯುಗಪುರುಷ ಪ್ರಧಾನ ಸಂಪಾದಕ ಕೆ ಭುವನಾಭಿರಾಮ ಉಡುಪ ಮತ್ತು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರ‍್ಯೆ, ಲಾರಿ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಸ್ವರಾಜ್ ಶೆಟ್ಟಿ, ಬರ್ಟನ್ ಸಿಕ್ವೇರ , ಅಬೂಬಕ್ಕರ್ ಗುತ್ತಕಾಡು , ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ ವಂದಿಸಿದರು.

Kinnigoli-160117015

Comments

comments

Comments are closed.

Read previous post:
Kinnigoli-160117013
ಗ್ರಾಮೋದ್ಧಾರದಿಂದ ರಾಷ್ಟ್ರೋತ್ಥಾನ : ನಳಿನ್‌ಕುಮಾರ್

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಮಹಾತ್ಮ ಗಾಂಧೀಜಿಯವರ ರಾಮ ರಾಜ್ಯದ ಕನಸುಗಳನ್ನು ನನಸು ಮಾಡಬೇಕು. ರಾಷ್ಟ್ರ ಚಿಂತಿತ ಕಾರ್ಯಗಳನ್ನು ಮಾಡಬೇಕು. ಗ್ರಾಮೋದ್ಧಾರದಿಂದ ರಾಷ್ಟ್ರೋತ್ಥಾನ ಎಂದು ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್...

Close