ಗ್ರಾಮೋದ್ಧಾರದಿಂದ ರಾಷ್ಟ್ರೋತ್ಥಾನ : ನಳಿನ್‌ಕುಮಾರ್

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಮಹಾತ್ಮ ಗಾಂಧೀಜಿಯವರ ರಾಮ ರಾಜ್ಯದ ಕನಸುಗಳನ್ನು ನನಸು ಮಾಡಬೇಕು. ರಾಷ್ಟ್ರ ಚಿಂತಿತ ಕಾರ್ಯಗಳನ್ನು ಮಾಡಬೇಕು. ಗ್ರಾಮೋದ್ಧಾರದಿಂದ ರಾಷ್ಟ್ರೋತ್ಥಾನ ಎಂದು ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಹೇಳಿದರು.

ಭಾನುವಾರ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ತೋಕೂರು ಯುವಕ ಸಂಘದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರಿಗೆ ಜೀವಮಾನದ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಿ ಮಾತನಾಡಿದರು.

ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡಿದಾಗ ಸುಶಿಕ್ಷಿತ ಸದೃಡ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭ 1.25 ಲಕ್ಷ ರೂ. ವೆಚ್ಚದ ಹೈಮಾಸ್ಕ್ ಸೋಲಾರ್ ದಾರಿ ದೀಪವನ್ನು ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಉದ್ಘಾಟಿಸಿ ಸಂಸದರ ಅನುದಾನದಲ್ಲಿ 5 ಲಕ್ಷ ರೂ. ನೆರವನ್ನು ಘೋಷಿಸಿದರು.
ವಿಶ್ವಬ್ಯಾಂಕ್ ಕುಡಿಯುವ ನೀರಿನ ಯೋಜನಾ ಫಲಾನುಭವಿಗಳ ಮೂಲಕ ತೋಕೂರು ಗ್ರಾಮದಲ್ಲಿ ಕಿಂಡಿಅಣೆಕಟ್ಟು, ತುರ್ತು ವೈದ್ಯಕೀಯ ನೆರವಿಗೆ ಆರೋಗ್ಯ ನಿಧಿ, ಸ್ಥಳೀಯ ಸರ್ಕಾರಿ ಶಾಲೆಗೆ ವಿದ್ಯುತ್ ಸಲಕರಣೆಗಳನ್ನು ವಿತರಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಹರ್ಷಿತಾ, ಶೃತಿ, ಹರ್ಷಿತ್, ವೈಷ್ಣವಿ, ತೃಪ್ತಿ, ಹರ್ಷಿತಾ, ಸನಾ, ಮಹಾಲಕ್ಷ್ಮೀ, ರಂಜಿತಾ ಎನ್., ಶಹನಾಜ್ ಅಹ್ಮದ್, ಫಾತಿಮಾ, ಕೀರ್ತನಾ, ಅವರನ್ನು ಗೌರವಿಸಲಾಯಿತು.
ದಿ.ದಯಾನಂದ ರಾವ್ ಸ್ಮರಣಾರ್ಥ ನೀಡುವ ಪ್ರತಿಭಾ ಪುರಸ್ಕಾರವನ್ನು ರಮ್ಯಶ್ರೀ ಅವರಿಗೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರನ್ನು ಅಭಿನಂದಿಸಲಾಯಿತು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ, ರೋಟರಿ ಸಹಾಯಕ ಗವರ್ನರ್ ಜಿನರಾಜ್ ಸಿ.ಸಾಲ್ಯಾನ್, ಸಂಘದ ಸ್ಥಾಪಕ ಸದಸ್ಯರಾದ ಎಲ್.ಕೆ.ಸಾಲ್ಯಾನ್, ಸುಂದರ ಸಾಲ್ಯಾನ್, ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎನ್.ಶೆಟ್ಟಿಗಾರ್, ಕೋಶಾಧಿಕಾರಿ ಪಿ.ಸಿ.ಕೋಟ್ಯಾನ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿದರು, ದುರ್ಗಾಪ್ರಸಾದ್, ಸಂಪತ್‌ಕುಮಾರ್ ವರದಿ ವಾಚಿಸಿದರು, ಕುಮಾರ ದೇವಾಡಿಗ, ರಾಮಚಂದ್ರ ಶೆಟ್ಟಿ, ಗೋಪಾಲ ಭಂಡಾರಿ ಪರಿಚಯಿಸಿದರು, ಮಹಿಳಾ ಘಟಕದ ಅಧ್ಯಕ್ಷೆ ಸುನಂದ ಭಟ್ ವಂದಿಸಿದರು. ಹೇಮಂತ ಅಮಿನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-16011706 Kinnigoli-16011707 Kinnigoli-16011708 Kinnigoli-16011709Kinnigoli-160117010Kinnigoli-160117011 Kinnigoli-160117012 Kinnigoli-160117013 Kinnigoli-160117014

Comments

comments

Comments are closed.

Read previous post:
Kinnigoli-16011705
ರಾಮಕೃಷ್ಣ ಪೂಂಜ – ರಸಪ್ರಶ್ನೆ ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ : ಪ್ರೌಡಶಾಲಾ ವಿದ್ಯಾರ್ಥಿ ದೆಸೆಯಲ್ಲಿಯೇ ಓದುವುದರ ಜೊತೆಗೆ ಕೌಶಲ್ಯ ಜ್ಞಾನವನ್ನು ಅಭಿವೃದ್ಧಿ ಪಡಿಸಬೇಕು ಎಂದು ನಿಟ್ಟೆ ವಿದ್ಯಾ ಸಂಸ್ಥೆ ಉಪನಿರ್ದೇಶಕರು(ಶೈಕ್ಷಣಿಕ), ನೀತಾ ಕಿಶೋರ್ ಹೇಳಿದರು. ಭಾರತ ಸರಕಾರದ ಕೌಶಲ್ಯಾಭಿವೃದ್ಧಿ...

Close