ಕಟೀಲು ದೇವಳ ಕಾಲೇಜು : ವಿವೇಕಾನಂದ ಜಯಂತಿ

ಕಿನ್ನಿಗೋಳಿ : ಸ್ವಾಮಿ ವಿವೇಕಾನಂದರು ಯಾವುದೇ ಪಂಥಕ್ಕೆ ಮತ್ತು ಯಾವುದೇ ಪ್ರದೇಶಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡವರಲ್ಲ. ಭಾರತೀಯ ಸಂಸ್ಕೃತಿಯ ಅಂತರಗಂಗೆಯನ್ನು ಸುಪ್ತ ಚೇತನವನ್ನು ಹಿಡಿದು ಜಗದಗಲದಲ್ಲಿ ಸಂಚರಿಸಿ ವಿಶ್ವವಿಜೇತ ವಿವೇಕಾನಂದರಾದರು ಎಂದು ಉಮೇಶ್ ನುಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಇತ್ತೀಚೆಗೆ ನಡೆದ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಮಾತನಾಡಿದರು.
ವಿಜಯಾ ಬ್ಯಾಂಕ್ ಪ್ರಬಂಧಕ ಪ್ರವೀಣ್ ಡಿಜಿಟಲ್ ಇಂಡಿಯಾ ವಿಷಯದ ಕುರಿತು ಮಾಹಿತಿ ನೀಡಿ ಇಂದಿನ ಕಾಲಗತಿಗೆ ಹೊಂದಿಕೊಳ್ಳಲು ಮತ್ತು ಅನುಕೂಲತೆಗೆ ಪೂರಕವಾಗುವ ಡಿಜಿಟಲ್ ಇಂಡಿಯಾದ ಮಹತ್ವ, ಪ್ರಯೋಜನ, ಉಪಯುಕ್ತತೆ ಹಾಗೂ ಇಂದಿನ ದಿನಕ್ಕೆ ಅನಿವಾರ್ಯತೆ ಕುರಿತು ವಿವರಣೆ ನೀಡಿದರು.
ಕಾಲೇಜು ಪ್ರಿನ್ಸಿಪಾಲ್ ಎಂ.ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಎನ್ ಎಸ್ ಎಸ್ ಅಧಿಕಾರಿ ಡಾ. ಗಣಪತಿ ಭಟ್, ಕಾಲೇಜು ಮಾನವ ಸಂಪನ್ಮೂಲ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲಕ ಡಾ.ಕೃಷ್ಣ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನುಜ್ಞಾ ಕಾರ್ಯಕ್ರಮ ನಿರ್ವಹಿಸಿದರು.

Kinnigoli-17011705

Comments

comments

Comments are closed.

Read previous post:
Kinnigoli-17011704
ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕಲಶೋತ್ಸವನ್ನು ಮಂಗಳವಾರ ಶಿಬರೂರು ವೇದವ್ಯಾಸ ತಂತ್ರಿಗಳ ಪ್ರಧಾನ...

Close