ಉಚಿತ ಸೈಕಲ್ ವಿತರಣೆ

ಮೂಲ್ಕಿ: ವಿದ್ಯಾರ್ಜನೆಯಿಂದಲೇ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ.ಸರಕಾರದ ಉತ್ತಮ ಯೋಜನೆಗಳಿಂದ ಬಡತನ ಮತ್ತು ಹಸಿವು ಇಂದಿನ ದಿನದಲ್ಲಿ ವಿದ್ಯೆಗೆ ಅಡ್ಡಬರಲಾರದು. ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಮೂಲ್ಕಿ ಮೆಡಲಿನ್ ಪೌಢ ಶಾಲೆಯ 8 ನೇ ತರಗತಿಯ 53 ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸುವಂತೆ ಸೈಕಲ್ ವಿತರಿಸಿ ಅವರು ಮಾತನಾಡಿದರು.
ವಿದ್ಯೆಯಿಂದ ಮಾತ್ರ ಬಡತನ ನಿವಾರಣೆ ಸಾಧ್ಯ ಎಂಬತಿಳುವಳಿಕೆಯ ಅಂಗವಾಗಿ ರಾಜ್ಯ ಸರಕಾರ ದೂರ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅನುಕೂಲವಾಗಲು ಉತ್ತಮ ದರ್ಜೆಯ ಸೈಕಲ್ ವಿತರಿಸಲಾಗುತ್ತಿದೆ ಎಂದರು. ನಗರ ಪಂಚಾಯಿತಿ ಸದಸ್ಯರಾದ ಪುತ್ತುಬಾವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ವಿದ್ಯಾ ಪಿಂಟೋ ಸ್ವಾಗತಿಸಿದರು. ಮಧುಕರ್ ನಾಯಕ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Mulki-18011701

Comments

comments

Comments are closed.