ಏಳಿಂಜೆ ಧಾರ್ಮಿಕ ಸಭಾ ಕಾರ್ಯಕ್ರಮ

ಕಿನ್ನಿಗೋಳಿ : ಗ್ರಾಮದಲ್ಲಿ ದೇವಳ ಮತ್ತು ಶಾಲೆಗಳು ಇದ್ದರೆ ಗ್ರಾಮ ಅಭಿವೃದ್ದಿ ಹೊಂದುವುದು ಖಚಿತ. ಧರ್ಮದ ಬಗ್ಗೆ ಸದ್ಬಾವನೆ ಬೆಳೆಸಿ ಚಿಂತನೆ ಆಚಾರ ವಿಚಾರಗಳನ್ನು ಅನುಸರಿಸಿದಾಗ ಜೀವನದಲ್ಲಿ ಯಶಸ್ಸನ್ನು ಕಂಡು ಕೊಳ್ಳಬಹುದು ಎಂದು ಪಲಿಮಾರು ಹೃಷಿಕೇಶತೀರ್ಥ ಸಂಸ್ಥಾನಂ ಮಠಾಶರಾದ ಶ್ರೀ ಶ್ರೀ 1008 ಶ್ರೀ ವಿದ್ಯಾದೀಶ ತೀರ್ಥ ಶ್ರೀ ಪಾದಂಗಳವರು ಹೇಳಿದರು.
ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ಗುರುವಾರ ನಡೆದ ಅಷ್ಠಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಕಟೀಲು ದೇವಳ ಪ್ರಧಾನ ಅರ್ಚಕ ವೆ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ, ಆನೆಗುಡ್ಡೆ ವಿನಾಯಕ ದೇವಳ ಧರ್ಮದರ್ಶಿ ವೆ.ಮೂ. ಕೆ.ಎಸ್ ಉಪಾಧ್ಯಾಯ, ವೇ.ಮೂ. ಪಂಜ ಭಾಸ್ಕರ ಭಟ್, ವೇ.ಮೂ.ವೈ.ವಿ. ಗಣೇಶ್ ಭಟ್, ಶುಭಾಶಂಸನೆಗೈದರು.
ದೇವಳದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು, ಕರ್ನಾಟಕ ಸರಕಾರ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾದ್ಯಕ್ಷ ದಿವಾಕರ ಶೆಟ್ಟಿ ಕೊಂಜಾಲುಗುತ್ತು, ಶಿಬರೂರುಗುತ್ತು ಕಿಟ್ಟಣ್ಣ ಶೆಟ್ಟಿ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವಿಶ್ವತ್ ಕೆಮಿಕಲ್ಸ್ ಲಿ. ಕಾರ್ಯಾದ್ಯಕ್ಷ ಬಿ. ವಿವೇಕ್ ಶೆಟ್ಟಿ, ಧೋರ್ಡೆ ಪಾಟೀಲ್ ಚಾರಿಟೇಬಲ್ ಟ್ರಸ್ಟ್, ರಾಜೇಂದ್ರ ಎಸ್. ಧೋರ್ಡೆ, ಮುಂಬೈ ಹೈಕೋರ್ಟ್ ಸೀನಿಯರ್ ಕೌನ್ಸಿಲ್ ರಮೇಶ್ ಧೋರ್ಡೆ, ಐಒಬಿ ಬ್ಯಾಂಕ್ ಮಾಜಿ ಅಧ್ಯಕ್ಷ ನರೇಂದ್ರ, ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ , ವೈ. ಯೋಗೀಶ್ ರಾವ್, ವಿಶ್ವನಾಥ ಶೆಟ್ಟಿ , ವೈ. ಕೆ. ಸಾಲ್ಯಾನ್, ರಘುರಾಮ ಅಡ್ಯಂತಾಯ, ಸೀತಾರಾಮ ಶೆಟ್ಟಿ , ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಸದಾನಂದ ಶೆಟ್ಟಿ ಭಂಡಸಾಲೆ, ರಾಮಣ್ಣ ಶೆಟ್ಟಿ ಕುಂರ್ಬಿಲ್‌ಗುತ್ತು, ಪುವಣ ಪೂಜಾರಿ, ವಿಶ್ವನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಉಳೆಪಾಡಿ ದೇವಳದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ಬ್ರಹ್ಮಕಲಶದ ಬಗ್ಗೆ ಬರೆದ ಕಾವ್ಯವನ್ನು ವಾಚಿಸಿದರು.
ಅನಿಲ್ ಶೆಟ್ಟಿ ಕೊಂಜಲುಗುತ್ತು ಸ್ವಾಗತಿಸಿದರು. ಲಕ್ಷಣ್ ಬಿ. ಬಿ ವಂದಿಸಿದರು. ಸಾಯಿನಾಥ್ ಶೆಟ್ಟಿ ಹಾಗೂ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-21011708

Comments

comments

Comments are closed.

Read previous post:
Kinnigoli-21011707
ಕಟೀಲು ಗ್ರಾಮ ಸಭೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆ ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ಪಂಚಾಯತ್ ವಠಾರದಲ್ಲಿ ನಡೆಯಿತು ಯಾವುದೇ ಪ್ರಯೋಜನಕ್ಕೆ ಬಾರದ...

Close