ಕಟೀಲು ಗ್ರಾಮ ಸಭೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆ ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ಪಂಚಾಯತ್ ವಠಾರದಲ್ಲಿ ನಡೆಯಿತು
ಯಾವುದೇ ಪ್ರಯೋಜನಕ್ಕೆ ಬಾರದ ಕಟೀಲು ಸಿತ್ಲ ಪರಕಟ್ಟ ಕಿಂಡಿಅಣೆಕಟ್ಟು, ಕಟೀಲು ಪರಿಸರದಲ್ಲಿನ ಅಸ್ವಚ್ಚತೆ, ಪರವಾನಿಗೆ ಇಲ್ಲದೆ ಕಾರ್ಯಾಚರಿಸುವ ಅಂಗಡಿ ಮುಂಗಟ್ಟುಗಳು, ಕಟೀಲು ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಮತ್ತಿತರ ವಿಷಯಗಳ ಬಗ್ಗೆ ದೀರ್ಘ ಚರ್ಚೆ ನಡೆಯಿತು.
ಕಟೀಲು ಸಿತ್ಲ ಪರಕಟ್ಟದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ 4 ವರ್ಷದ ಹಿಂದೆ ನಿರ್ಮಾಣವಾದ ಕಿಂಡಿ ಅಣೆಕಟ್ಟು ಕೃಷಿಕರರಿಗೆ ಪ್ರಯೋಜನ ಬಾರದಂತಿದೆ. ಕಿಂಡಿಗೆ ಹಲಗೆ ಹಾಕಲು ಆಗುತ್ತಿಲ್ಲ ನೀರು ವೃಥಾ ಪೋಲಾಗುತ್ತಿದೆ. ಬದಿಯಲ್ಲಿ ತಡೆಗೋಡೆಗಳಿರದೆ ಮಳೆಗಾಲದಲ್ಲಿ ನೀರು ಕೃಷಿ ಪ್ರದೇಶಗಳಿಗೆ ನುಗ್ಗುತ್ತಿದೆ. ಪತ್ರಿಕೆ ಟಿವಿ ಮಾಧ್ಯಮದವರು ಈ ಬಗ್ಗೆ ಪ್ರಕಟಿಸಿದರೂ ಯಾವುದೇ ಪರಿಹಾರ ಕಂಡಿಲ್ಲ ಶಾಸಕ , ಸಂಸದರು ಭೇಟಿ ನೀಡಿ ಕ್ರಮ ಕೈಗೊಳ್ಳಲು ಅಕಾರಿಗಳು ಕಡೆಯಿಂದ ಯಾವುದೇ ಉತ್ತರವಿಲ್ಲ ಗ್ರಾಮ ಸಭೆಗೆ ನೀರಾವರಿ ಇಲಾಖಾಕಾರಿಗಳು ಆಹ್ವಾನ ನೀಡಿದರೂ ಬರಲಿಲ್ಲ ಯಾಕೆ? ಕೇಷಿಕರ ಬಗ್ಗೆ ದಿವ್ಯ ನಿರ್ಲಕ್ಷಯ ಯಾಕೆ ಎಂದು ಗ್ರ್ರಾಮಸ್ಥ ಸಿತ್ಲ ಜಗನ್ನಾಥ ಶೆಟ್ಟಿ ಪ್ರಶ್ನಿಸಿದರು. ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಶೆಟ್ಟಿ ಮಾತನಾಡಿ ಈಬಗ್ಗೆ ನಿರ್ಣಯ ಮಾಡಲಾಗಿದೆ, ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಕಾರಿಗಳು ಕರೆಸಿ ಸಮಸ್ಯೆಯ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಕಟೀಲು ದೇವಳದ ಪರಿಸರದಲ್ಲಿ ಹಲವು ಅಂಗಡಿಗಳಿಗೆ ಪರವಾನಿಗೆ ಇಲ್ಲ, ತಾತ್ಕಲಿಕ ಅಂಗಡಿಗಳು ತಲೆವೆತ್ತಿವೆ. ಗಿಡಿಗೆರೆಯಿಂದ ಕಟೀಲು ಸೇತುವೆ ವರೆಗೆ ವ್ಯಾಪ್ತಿ ಮೀರಿದ ಅಕ್ರಮ ಕಟ್ಟಡಗಳು, ಅಸಮರ್ಪಕ ಟ್ರಾಫಿಕ್, ಪಾರ್ಕಿಂಗ್ ವ್ಯವಸ್ಥೆ, ಕಟೀಲು ಬಸ್ ನಿಲ್ದಾಣದಲ್ಲಿನ ಹೋಟೆಲ್ ತಾಜ್ಯ ನೀರು ನದಿಗೆ ಬಿಡಲಾಗುತ್ತದೆ ಪಕ್ಕದ ಕುಡಿಯುವ ನೀರಿನ ಬಾವಿ ನದಿ ಸೇರಿ ಮಲಿನವಾಗುತ್ತದೆ ಇದರ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಗ್ರಾಮಸ್ಥರು ಒಕ್ಕೊರರಲ್ಲಿ ಆಗ್ರಹಿಸಿದರು. ಪಂಚಾಯಿತಿ ಪಿಡಿಒ ಪ್ರಕಾಶ್ ಬಿ. ಮಾತಾನಾಡಿ ಪಂಚಾಯಿತಿ ನಿರ್ಣಯ ಮಾಡಿ ಸಂಬಂಸಿದವರಿಗೆ ಮನವರಿಕೆ ಮಾಡಿ ಕ್ರಮ ಜರಗಿಸಲಾಗುವುದು ಎಂದು ಹೇಳಿದರು.
ಕೋಂಡೆಮೂಲ ನಡುಗೋಡು ಕಿಲೆಂಜೂರು ಗ್ರಾಮಗಳಿಗೆ ಒಂದೇ ಪಡಿತರ ಚೀಟಿ ಅಂಗಡಿಯಿದ್ದು ಅಲ್ಲದೆ ರಸ್ತೆ ಅಂಚಿನಲ್ಲಿರುದರಿಂದ ಜನ ಒತ್ತಡದಿಂದ ಗ್ರಾಹಕ ಗ್ರಾಮಸ್ಥರಿಗೆ ಸಮಸ್ಯೆ ಆಗುತ್ತದೆ ಇದಕ್ಕೆ ಪರಿಹಾರ ಕಲ್ಪಿಸಿ ಅಥವಾ ಹೆಚ್ಚಿನ ಪಡಿತರ ಅಂಗಡಿ ಒದಗಿಸಿ ಎಂದು ಗ್ರಾಮಸ್ಥರು ಕೇಳಿದರು.
ನಡುಗೋಡು ಶಾಲೆಯ ಪರಿಸರ ಹಾಗೂ ಕಟೀಲು ಭ್ರಾಮರೀ ವನದ ಬಳಿ ಅಕ್ರಮ ಕೂಟಗಳು ಕಾರ್ಯಾಚರಿಸುತ್ತದೆ. ಕಟೀಲಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಹೊರ ಠಾಣೆ ಆಗಬೇಕು ಅಲ್ಲದೆ ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕಟೀಲು ಮಲ್ಲಿಗೆಯಂಗಡಿ ಬಳಿ ರುದ್ರಭೂಮಿ ಶಿಲನ್ಯಾಸವಾಗಿ ವರ್ಷಾಗಳಾದರೂ ಯಾಕಾಗಿಲ್ಲ ಎಂದು ಗ್ರಾಮಸ್ಥರು ಕೇಳಿದಾಗ ಪಂಚಾಯಿತಿ ಅನುದಾನ ಆಗಿಲ್ಲ ಸರಿಐಆದ ಮಾಹಿತಿ ಇಲ್ಲ ಮಾಹಿತಿ ಪಡೆದುಕೊಂಡು ಇದರಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಆಡಳಿತ ತಿಳಿಸಿತು.
ಸಹಾಯಕ ತೋಟಗಾರಿಕೆ ಅಕಾರಿ ಸುಕುಮಾರ್ ಹೆಗ್ಡೆ ನೋಡಲ್ ಅಕಾರಿಯಾಗಿ ಭಾಗವಹಿಸಿದರು. ತಾ. ಪಂ. ಸದಸ್ಯರಾದ ಶುಭಲತಾ ಶೆಟ್ಟಿ, ಸುಕುಮಾರ್ ಸನಿಲ್, , ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಕಾರಿ ಡಾ. ಭಾಸ್ಕರ ಕೋಟ್ಯಾನ್, ಕಂದಾಯ ಇಲಾಖೆಯ ಸಂತೋಷ್ , ಪಂಚಾಯತ್‌ರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವ ಹಾಗೂ ವಿವಿಧ ಇಲಾಖಾಕಾರಿಗಳು ಉಪಸ್ಥಿತರಿದ್ದರು.

Kinnigoli-21011707

Comments

comments

Comments are closed.

Read previous post:
Kinnigoli-21011703
ಪುನರೂರು ಸ್ವಾಮಿ ವಿವೇಕಾನಂದ ಜಯಂತಿ

ಕಿನ್ನಿಗೋಳಿ : ಯುವ ಜನರಿಗೆ ರಾಷ್ಟ್ರಭಕ್ತಿ ಹುಟ್ಟಬೇಕಾದರೆ ಸ್ವಾಮೀ ವಿವೇಕಾನಂದರು ಮತ್ತು ಭಗಿನಿ ನಿವೇದಿತಾ ಅವರ ಜೀವನ ತತ್ವ ಆದರ್ಶಗಳನ್ನು ಆಚಾರ ವಿಚಾರಗಳನ್ನು ಅನುಸರಿಸಿದಾಗ ಜೀವನದಲ್ಲಿ ಯಶಸ್ಸನ್ನು ಕಂಡು...

Close