ಪುನರೂರು ಸ್ವಾಮಿ ವಿವೇಕಾನಂದ ಜಯಂತಿ

ಕಿನ್ನಿಗೋಳಿ : ಯುವ ಜನರಿಗೆ ರಾಷ್ಟ್ರಭಕ್ತಿ ಹುಟ್ಟಬೇಕಾದರೆ ಸ್ವಾಮೀ ವಿವೇಕಾನಂದರು ಮತ್ತು ಭಗಿನಿ ನಿವೇದಿತಾ ಅವರ ಜೀವನ ತತ್ವ ಆದರ್ಶಗಳನ್ನು ಆಚಾರ ವಿಚಾರಗಳನ್ನು ಅನುಸರಿಸಿದಾಗ ಜೀವನದಲ್ಲಿ ಯಶಸ್ಸನ್ನು ಕಂಡು ಕೊಳ್ಳಬಹುದು ಎಂದು ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪುನರೂರು ಪ್ರತಿಷ್ಠಾನ (ರಿ) ಆಶ್ರಯದಲ್ಲಿ ಗುರುವಾರ ಶ್ರೀ ವಿಶ್ವನಾಥ ದೇವಳದ ವಠಾರದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ನೀಡಿ ಮಾತನಾಡಿದರು.
ಶ್ರೇಷ್ಠ ಚಿಂತನೆಗಳು ನಮ್ಮಲ್ಲಿ ಮೂಡಿದಾಗ ಉತ್ತಮ ಗುರುಗಳು ತನ್ನಿಂತಾನೆ ಲಭ್ಯವಾಗುತ್ತಾರೆ. ಭಾರತದ ಮೇಲೆ ನಿರಂತರ ಪರಕೀಯರ ಧಾಳಿಯಿಂದ ನಮ್ಮ ಸಂಸ್ಕೃತಿ ಮರೆಯುತ್ತಿರುವ ಆ ದಿನಗಳಲ್ಲಿ ದೇಶದ ಸಂಸ್ಕೃತಿಯನ್ನು ತಮ್ಮ ವಾಕ್‌ಚಾತುರ್ಯದಿಂದ ವಿಶ್ವ ಮಟ್ಟದಲ್ಲಿ ಬೆಳಗಿಸಿದ ಸ್ವಾಮೀ ವಿವೇಕಾಂದರು ಯುವ ಜನತೆಯ ಸ್ಪೂರ್ತಿಯಾಗಿದ್ದಾರೆ. ಎಂದರು.
ಭಾರತೀಯ ಧರ್ಮ ನೆಲೆಯಲ್ಲಿ ಹುಟ್ಟಿದ ನಾವು ಧನ್ಯರು ವಿವೇಕಾನಂದರ ಸಂದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಭಾರತೀಯ ಯುವ ಜನರು ಭವ್ಯ ಸುದೃಡ ಭಾರತ ಕಟ್ಟಬಹುದು. ಎಂದು ಧಾಮಿಕ ಹಿತಚಿಂತಕ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಹೇಳಿದರು.
ಮಾತಾ ಡೆವಲಪರ್ಸ್ ವ್ಯವಸ್ಥಾಪನಾ ನಿರ್ದೇಶಕ ಎನ್. ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಮಾತಾ ಚಾರಿಟೇಬಲ್ ಟ್ರಸ್ಟ್ ಮುಖಾಂತರ ದ.ಕ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆಯಾಗಿಸಲು ಪಣತೊಟ್ಟಿದ್ದು ಈಗಾಗಲೇ ೧೬೦ ಕ್ಕೂ ಅಧಿಕ ಹಕ್ಕು ಪತ್ರರಹಿತ ಜನರಿಗೆ ನೀಡಲಾಗಿದೆ. ಕಿನ್ನಿಗೋಳಿ ಗ್ರಾಮದಲ್ಲಿ ಹಕ್ಕು ಪತ್ರ ರಹಿತ ೩೨ ಜನರಿಗೆ ಸಧ್ಯದಲ್ಲಿ ಶೌಚಾಲಯ ಹಸ್ತಾಂತರಿಸಲಾಗುವುದು ಎಂದರು.

ಹೊಸದಿಗಂತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಪುನರೂರು ಪ್ರತಿಷ್ಠಾನ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಚ್.ಕೆ. ಉಷಾರಾಣಿ ಉದ್ಯಮಿ ಪಟೇಲ್ ವಾಸುದೇವ ರಾವ್, ಮಾತಾ ಡೆವಲಪರ್ಸ್ ವ್ಯವಸ್ಥಾಪನ ನಿರ್ದೇಶಕ ಎನ್. ಸಂತೋಷ್ ಕುಮಾರ್ ಶೆಟ್ಟಿ, ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಅವಿಭಜಿತ ದ.ಕ. ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಶೆಟ್ಟಿಗರ್, ಅವಿಭಜಿತ ದ.ಕ. ವಿಶ್ವಕರ್ಮ ಒಕ್ಕೂಟ ಉಪಾಧ್ಯಕ್ಷ ಮಧು ಆಚಾರ್ಯ, ಪುನರೂರು ಪ್ರತಿಷ್ಠಾನದ ಶ್ರೇಯಾ ಪುನರೂರು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-21011701 Kinnigoli-21011702 Kinnigoli-21011703 Kinnigoli-21011704 Kinnigoli-21011705 Kinnigoli-21011706

Comments

comments

Comments are closed.

Read previous post:
Kinnigoli--200117013
ಏಳಿಂಜೆ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ಪ್ರಧಾನ ಪೌರೋಹಿತ್ಯದಲ್ಲಿ ಕೃಷ್ಣರಾಜ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುವಾರ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯಿತು....

Close