ಹಳೆಯಂಗಡಿ ಮಹಿಳಾ ಹಕ್ಕು ಕಾರ್ಯಗಾರ 

ಮೂಲ್ಕಿ : ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಯುಜಿಸಿ ಯ ಪ್ರಾಯೋಜಕತ್ವದೊಂದಿಗೆ ಜನವರಿ ೧೧ ರ ಬುಧವಾರ ಬೆಳಿಗ್ಗೆ ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳೆಯರ ಮಾನವ ಹಕ್ಕುಗಳ ಬಗ್ಗೆ ರಾಷ್ತ್ರೀಯ ಕಾರ್ಯಾಗಾರ ನಡೆಯಲಿದೆ.ಕಾರ್ಯಾಗಾರವನ್ನು ಬೆಳಿಗ್ಗೆ ೯.೩೦ಕ್ಕೆ ಶಾಸಕ ಕೆ ಅಭಯಚಂದ್ರ ಜ್ಯೆನ್ ಉದ್ಘಾಟಿಸಲಿದ್ದು ಮಂಗಳೂರು ವಿ ವಿ ನಿವೃತ್ತ ಉಪನ್ಯಾಸಕ ಸುರೇಂದ್ರ ರಾವ್ ದಿಕ್ಸೂಚಿ ಭಾಷಣಗ್ಯೆಯಲಿದ್ದಾರೆ.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಂ ವಿಶ್ವನಾಥ ಭಟ್ ವಹಿಸಲಿದ್ದು ನ್ಯಾಯವಾದಿ ಆಶಾ ನಾಯಕ್,ಮಂಗಳೂರು ವಿ ವಿ ಯ ಪೊಲಿಟಿಕಲ್ ಸಯನ್ಸ್ ವಿಭಾಗದ ಮುಖ್ಯಸ್ತೆ ಲತಾ ಪಂಡಿತ್,ಹಳೆಯಂಗಡಿ ಕಾಲೇಜಿನ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಚ್ ವಸಂತ ಬೆರ್ನಾಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಬಳಿಕ ನಡೆಯಲಿರುವ ತಾಂತ್ರಿಕ ಅಽವೇಶನಗಳಲ್ಲಿ ಮಂಗಳೂರಿಜ ಸ್ಯೆಂಟ್ ಅಲೋಶಿಯಸ್ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಡಾ ಸುಮಿತ್ರಾ ಹೆಗ್ಡೆ,ಡಾ ಆಶಾ ಅಬ್ರಹಾಂ,ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ಜೋತ್ಸನಾ ಮಹೇಶ್,ನಂದಿನಿ ಮ್ಯೆಸೂರು ,ನಂದಾ ಪಾಯಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.ಸಂಜೆ ೪ ಕ್ಕೆ ಸಮಾರೋಪ ಸಮಾರಂಭ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Mulki-13011702

Comments

comments

Comments are closed.

Read previous post:
Mulki-13011701
ಮಾಹಿತಿ ತಂತ್ರಜ್ಞಾನ ಸ್ಪರ್ದೆ

 ಮೂಲ್ಕಿ: ಆಧುನಿಕ ಯುಗದಲ್ಲಿಪ್ರತೀ ಹೆಜ್ಜೆಯಲ್ಲಿಯೂ ಸ್ಪರ್ದೆ ಎದುರಿಸಬೇಕಾಗಿದ್ದು ವಿದ್ಯಾರ್ಥಿಗಳು ಸೋಲನ್ನು ಗೆಲುವಿನ ಹಾದಿಯ ಮೆಟ್ಟಿಲು ಎಂದು ತಿಳಿಯುವುದು ಅಗತ್ಯ ಎಂದು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆಂನ್ಸ್ ಅಧಿಕಾರಿ ತಿವಿಕ್ರಮ್...

Close