ಮಾಹಿತಿ ತಂತ್ರಜ್ಞಾನ ಸ್ಪರ್ದೆ

 ಮೂಲ್ಕಿ: ಆಧುನಿಕ ಯುಗದಲ್ಲಿಪ್ರತೀ ಹೆಜ್ಜೆಯಲ್ಲಿಯೂ ಸ್ಪರ್ದೆ ಎದುರಿಸಬೇಕಾಗಿದ್ದು ವಿದ್ಯಾರ್ಥಿಗಳು ಸೋಲನ್ನು ಗೆಲುವಿನ ಹಾದಿಯ ಮೆಟ್ಟಿಲು ಎಂದು ತಿಳಿಯುವುದು ಅಗತ್ಯ ಎಂದು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆಂನ್ಸ್ ಅಧಿಕಾರಿ ತಿವಿಕ್ರಮ್ ಪೈ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ಕಂಪ್ಯೂಟರ್ ವಿಭಾಗದ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ಮಾಹಿತಿ ತಂತ್ರಜ್ಞಾನ ಸ್ಪರ್ದೆ ವಿಜ್‌ಐಟಿ ಟೆಕ್‌ಫಾರ‍್ಮರ‍್ಸ್-2017 ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ,ಉದ್ಯೋಗ, ವ್ಯವಹಾರ,ಸಮಾಜ ಕ್ಷೇತ್ರಗಳಲ್ಲಿ ಸ್ಪರ್ದೆಯನ್ನು ಪ್ರತೀಕ್ಷಣವೂ ಎದುರಿಸುವ ಅನಿರ್ವಾರ್ಯ ಸ್ಥಿತಿ ಸಾಧಕ ವ್ಯಕ್ತಿಗಳದ್ದಾಗಿದ್ದು ವಿದ್ಯಾರ್ಥಿಗಳು ಗೆಲುವಿಗೆ ಬೀಗದೆ ಸೋಲಿಗೆ ಹೆದರದೆ ಗುರಿಸಾಧನೆಯ ಛಲ ಮುಂದಿಟ್ಟುಕೊಂಡು ಸಾಧಕರಾಗಬೇಕು ಉತ್ತಮ ಸಂಸ್ಕಾರ ಪೂರ್ಣ ಯುವ ಜನತೆಗೆ ವಿಶ್ವಮಟ್ಟದಲ್ಲಿ ಅವಕಾಶಗಳಿವೆ. ನಮ್ಮ ದೇಶ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪಾರಮ್ಯತೆಯನ್ನು ಸಾಧಿಸುವ ಉದ್ದೇಶದಿಂದ ಡಿಜಿಟಲ್ ಇಂಡಿಯಾ ಯೋಜನೆ ಪ್ರಾರಂಭಿಸಿರುವುದಕ್ಕೆ ಪೂರಕವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಐಟಿ ಸ್ಪರ್ದೆ ಆಯೋಜಿಸಿರುವುದು ಬಹಳ ಉತ್ತಮ ಕಾರ್ಯವಾಗಿದ್ದು ಇದ್ದಕ್ಕಾಗಿ ಕಾಲೇಜು ಕಂಪ್ಯೂಟರ್ ವಿಭಾಗ ಮುಖ್ಯಸ್ಥರನ್ನು ಅಭಿನಂದಿಸುತ್ತೇನೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಶಮಿನಾ ಆಳ್ವಾ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜಯಾ ಕಾಲೇಜು ಮಾಹಿತಿ ತಂತ್ರಜ್ಞಾನ ಯುಗಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದು ಪರಿಸರದ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅವಕಾಶಗಳ ವೇದಿಕೆ ಯನ್ನು ಹಲವು ವರ್ಷಗಳಿಂದ ನೀಡುತ್ತಿದೆ. ಯುವ ವಿದ್ಯಾರ್ಥಿಗಳು ಈ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ವಿಜಯಾ ಕಾಲೇಜು ಪ್ರಾಂಶುಪಾಲ ಡಾ.ಕೆ. ನಾರಾಯಣ ಪೂಜಾರಿ,ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಅನಸೂಯಾ ಕರ್ಕೇರಾ, ಕಂಪ್ಯೂಟರ್ ವಿಭಾಗ ಕಾರ್ಯದರ್ಶಿ ಮಾನಸ ಎನ್.ಸುವರ್ಣ ಅತಿಥಿಗಳಾಗಿದ್ದರು.
ಜ್ಯೋತಿ ಶಂಕರ್ ಸಾಲ್ಯಾನ್ ಸ್ವಾಗತಿಸಿದರು. ಪ್ರಥ್ವಿ.ಪಿ.ಶೆಟ್ಟಿ ಪರಿಚಯಿಸಿದರು. ಡಾ.ನಾರಾಯಣ ಪೂಜಾರಿ ದಿಕ್ಸೂಚಿ ಭಾಷಣ ಮಾಡಿದರು. ಸಾನಿಯಾ ಅಸಾದಿ ಮತ್ತು ಸೌಮ್ಯಾ ಶೆಣೈ ನಿರೂಪಿಸಿದರು. ಮಾನಸ.ಎನ್.ಸುವರ್ಣ ವಂದಿಸಿದರು.

Mulki-13011701

Comments

comments

Comments are closed.

Read previous post:
ಜ. 23 ಕಿನ್ನಿಗೋಳಿ ಗ್ರಾ.ಪಂ. ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ 20176-17ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಜನವರಿ 23 ಸೋಮವಾರ ಕಿನ್ನಿಗೋಳಿ ಪಂಚಾಯಿತಿ ವಠಾರದ ಭಾರತ್ ನಿರ್ಮಾಣ ರಾಜೀವ್ ಗಾಂ ಸೇವಾ...

Close