KS ರಾವ್ ನಗರ ಶಾಲೆ ವಾರ್ಷಿಕೋತ್ಸವ

ಮೂಲ್ಕಿ: ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ವಿವಿಧ ರೀತಿಯ ಪ್ರೋತ್ಸಾಹ ದೊರೆಯುತ್ತಿದ್ದು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಸರ್ಕಾರಿ ಶಾಲೆಗೆ ಗೌರವ ತರುವ ಕಾರ್ಯ ಮಾಡಬೇಕೆಂದು ಮೂಲ್ಕಿ ಕ್ಲಸ್ತರ್ ಸಿ ಆರ್ ಪಿ ರಾಮ್ ದಾಸ್ ಹೇಳಿದರು.ಮೂಲ್ಕಿಯ ಕೆ ಎಸ್ ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಫ್ರೌಢ ಶಾಲೆಯಲ್ಲಿ ಜರಗಿದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಮಾಜಿ ಸದಸ್ಯ ಮಹಾಬಲ ಸನಿಲ್ ವಹಿಸಿದ್ದು ಮೂಲ್ಕಿ ನಗರ ಪಂಚಾಯತ್ ಮುಖ್ಯಾಽಕಾರಿ ಶ್ರೀಮತಿ ಇಂದುರವರು ಧ್ವಜಾರೋಹಣ ಗ್ಯೆದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.ಮೂಲ್ಕಿಯ ಕೆ ಎಸ್ ರಾವ್ ನಗರದ ಉದ್ಯಮಿ ಜನಾzsನ ಬಂಗೇರ,ಕೆ ಎಸ್ ರಾವ್ ನಗರದ ನವ ಭಾರತ್ ಯೂತ್ ಕ್ಲಬ್ ಅಧ್ಯಕ್ಷ ಇಮ್ತಿಯಾಜ್,ನೇತಾಜಿ ಸುಭಾಶ್ಚಂದ್ರ ಬೋಸ್ ಶಿಕ್ಷಣ ಸಮಿತಿ ಅಧ್ಯಕ್ಷ ಡಾ ಹರಿಪ್ರಸಾದ್ ಶೆಟ್ಟಿ,ಹಿರಿಯ ನಾಗರಿಕ ಇದಿನಬ್ಬ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದರು. ಫ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಭೀಮಶಂಕರ್ ಆರ್ ಕೆ .ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಮತಿ ಬಾಯಿ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೆ ಎಂ ಶರೀಫ್ ಉಪಸ್ತಿತರಿದ್ದರು.

Mulki-24011701 Mulki-24011702

Comments

comments

Comments are closed.

Read previous post:
Mulki-13011702
ಹಳೆಯಂಗಡಿ ಮಹಿಳಾ ಹಕ್ಕು ಕಾರ್ಯಗಾರ 

ಮೂಲ್ಕಿ : ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಯುಜಿಸಿ ಯ ಪ್ರಾಯೋಜಕತ್ವದೊಂದಿಗೆ ಜನವರಿ ೧೧ ರ ಬುಧವಾರ ಬೆಳಿಗ್ಗೆ ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...

Close