KS Rao ನಗರ ಶಾಲಾ ರಜತ ಮಹೋತ್ಸವ

ಮೂಲ್ಕಿ: ಕೆ ಎಸ್ ರಾವ್ ನಗರ ಶಾಲೆ ರಜತ ಮಹೋತ್ಸವ ಮೂಲ್ಕಿ ಕೆ ಎಸ್ ರಾವ್ ನಗರ ಶಾಲೆ ರಜತ ಮಹೋತ್ಸವ ಕನ್ನಡಪ್ರಭವಾರ್ತೆ,ಮೂಲ್ಕಿ: ಆಂಗ್ಲ ಮಾಧ್ಯಮ ಶಾಲೆಯ ಬಗ್ಗೆ ವ್ಯಾಮೋಹ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೆ ಎಸ್ ರಾವ್ ನಗರದಲ್ಲಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಸುಮಾರು 800 ಮಕ್ಕಳು ಕಲಿಯುತ್ತಿರುವುದಕ್ಕೆ ಶಾಲೆಯ ವಿದ್ಯಾರ್ಥಿಗಳ ಹೆತ್ತವರ ಕನ್ನಡಾಭಿಮಾನ ಕಾರಣವಾಗಿದೆಯೆಂದು ಶಾಸಕ ಕೆ ಅಭಯಚಂದ್ರ ಜ್ಯೆನ್ ಹೇಳಿದರು. ರಜತ ಮಹೋತ್ಸವದ ಸಂಭ್ರಮದಲ್ಲಿರುವ ಮೂಲ್ಕಿಯ ಕೆ ಎಸ್ ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಸರ್ಕಾರಿ ಫ್ರೌಢ ಶಾಲೆಯಲ್ಲಿ ಜರಗಿದ ಶಾಲೆಯ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ನೂತನ ಕಾರ್ನಾಡು ಸದಾಶಿವ ರಾವ್ ಹೊರಾಂಗಣ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಲ್ಲಿನ ಹೆತ್ತವರಿಂದಾಗಿ ಶಾಲೆಯು ಅಭಿವೃದ್ದಿ ಹೊಂದಿದ್ದು ಶಾಲೆಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದ್ದು ಮೂಲ್ಕಿ ನಗರ ಪಂಚಾಯತ್ ನ ನಗರೋತ್ತಾನ ಯೋಜನೆಯಲ್ಲಿ 10 ಲಕ್ಷ ಅನುದಾನದಲ್ಲಿ ಸುಸಜ್ಜಿತ ಕ್ರೀಡಾಂಗಣ,ಮೂಡಾದ ಅನುದಾನದಲ್ಲಿ ಶಾಲೆಗೆ ಆವರಣ ಗೋಡೆ ಹಾಗೂ ಶಿಕ್ಷಣ ಸಚಿವರ ವಿಶೇಷ ಅನುದಾನದಲ್ಲಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಮೇಲ್ಛಾವಣೆ ದುರಸ್ತಿ ಹಾಗೂ ನೆಲಕ್ಕೆ ಟ್ಯೆಲ್ಸ್ ಹಾಸುವ ಕಾರ್ಯ ಮಾಡಲಾಗುವುದು,ಜೊತೆಗೆ ಅದಾನಿ ಸಂಸ್ತೆಯ ವತಿಯಿಂದ 10 ಲಕ್ಷ ವೆಚ್ಚದಲ್ಲಿ ಶಾಲೆಗೆ ಸುಸಜ್ಜಿತ ಶೌಚಾಲಯದ ವ್ಯವಸ್ತೆ ಮಾಡಲಾಗುವುದೆಂದು ತಿಳಿಸಿದರು. ಆಶೀರ್ವಚನ ಗ್ಯೆದು ಮಾತನಾಡಿದ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿಯವರು ಒಂದು ಕಾಲದಲ್ಲಿ ಲಿಂಗಪ್ಪಯ್ಯ ಕಾಡಾಗಿದ್ದ ಈ ಪ್ರದೇಶವು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರ ಹೆಸರಿನಲ್ಲಿ ಕೆ ಎಸ್ ರಾವ್ ನಗರವಾಗಿ ಪರಿವರ್ತನೆ ಗೊಂಡಿದೆ.ಹಿರಿಯರ ಆಶಯದಂತೆ ಇಲ್ಲಿನ ಶಾಲೆಯು ಇನ್ನಷ್ತು ಉನ್ನತ ಮಟ್ಕಕೇರಲೆಂದು ಶುಭ ಹಾರ‍್ಯೆಸಿದರು,ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ,ಶಾಸಕ ಕೆ ಅಭಯಚಂದ್ರ ಜ್ಯೆನ್,ಶಾಲೆಯ ಹಿತ್ಯೆಪಿ ಡಾ ಹರಿ ಪ್ರಸಾದ್ ಶೆಟ್ಟಿ ಸೇರಿದಂತೆ ಕಳೆದ 25 ವರ್ಷಗಳಲ್ಲಿ ಶಾಲೆಯ ಅಭಿವೃದ್ದಿಗೆ ಸಹಕರಿಸಿದವರನ್ನು ಗೌರವಿಲಾಯಿತು. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ,ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ,ಸದಸ್ಯರುಗಳಾದ ಬಶೀರ್ ಕುಳಾಯಿ,ಪುರುಷೋತ್ತಮ್.ಯೋಗೀಶ್ ಕೋಟ್ಯಾನ್,ವಿಮಲಾ ಪೂಜಾರಿ,ಶಂಕ್ರವ್ವ,ಕಲಾವತಿ,ಆಶೋಕ್ ಪೂಜಾರ್.ಶ್ಯೆಲೇಶ್ ಕುಮಾರ್,ಮೂಡಾದ ಸದಸ್ಯ ವಸಂತ ಬೆರ್ನಾಡ್,ಉದ್ಯಮಿ ಸಯ್ಯದ್ ಕರ್ನಿರೆ,ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಸಾಹುಲ್ ಹಮೀದ್ ಕದಿಕೆ,ಉದ್ಯಮಿ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲೆಯ ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಡಾ ಕೆ ಹರಿಪ್ರಸಾದ್ ಶೆಟ್ಟಿ,ಬಿ ಎಂ ಇದಿನಬ್ವ, ಜನಾರ್ಧನ ಬಂಗೇರ,ಮಂಜುನಾಥ ಕಂಬಾರ,ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಮತಿ ಬಾಯಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಭೀಮಶಂಕರ್ ಆರ್ ಕೆ, ಫ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೆ ಎಂ ರಫೀಕ್ ಮತ್ತಿತರಿದ್ದರು. ಶಾಲೆಯ ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ನವೀನ್ ಪುತ್ರನ್ ಸ್ವಾಗತಿಸಿದರು,ಅಧ್ಯಕ್ಷ ಬಿ ಎಂ ಆಸೀಫ್ ಪ್ರಸ್ತಾವನೆಗ್ಯೆದರು,ವಿನಯ ನಿರೂಪಿಸಿದರು.Mulki-24011704

Comments

comments

Comments are closed.

Read previous post:
Mulki-24011703
ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನ

ಹಳೆಯಂಗಡಿ: ಪಡುಪಣಂಬೂರು ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 5ಲಕ್ಷ ಮೊತ್ತದ ಡಿ.ಡಿಯನ್ನು ತಾಲೂಕು ಯೋಜನಾಧಿಕಾರಿ ಉಮರಬ್ಬ...

Close