ಕಾಂಗ್ರೆಸ್ ಕಾರ್ಯಕರ್ತರ ಸಂಘಟಿತ ಪಕ್ಷ

ಮೂಲ್ಕಿ: ಇಂದು ಕೃಷಿಕರು ಕಾಂಗ್ರೆಸ್ ಬೆಂಬಲಿತ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸಹಕಾರ ನೀಡಿದ್ದರಿಂದ ಮತ್ತೆ ಮೂಲ್ಕಿ ಕಾಂಗ್ರೆಸ್‌ನ ಕಾರ್ಯಕರ್ತರ ಸಂಘಟಿತ ಪಕ್ಷವಾಗಿ ಹೊರಹೊಮ್ಮಿದೆ, ಕಾರ್ಯಕರ್ತರ ಹಾಗೂ ಶಾಸಕ ಅಭಯಚಂದ್ರರ ಶ್ರಮದಿಂದ ಎಪಿಎಂಸಿ ನಿರ್ಣಾಯಕವಾದ ಮೂಲ್ಕಿಯ ಎರಡೂ ಕ್ಷೇತ್ರಗಳನ್ನು ಗೆದ್ದಿದೆ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಹೇಳಿದರು.
ಅವರು ಎಪಿಎಂಸಿ ಚುನಾವಣೆಯಲ್ಲಿ ಮೂಲ್ಕಿ ಹೋಬಳಿಯ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜೋಯೆಲ್ ಡಿಸೋಜಾ ಮತ್ತು ಪ್ರಮೋದ್‌ಕುಮಾರ್ ಅವರು ಚುನಾಯಿತರಾಗಿ ಹಳೆಯಂಗಡಿಗೆ ಶನಿವಾರ ಆಗಮಿಸಿದಾಗ ಅವರನ್ನು ಅಭಿನಂದಿಸಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ ವಿಶೇಷವಾಗಿ ಗೌರವಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಡಾ ಸದಸ್ಯ ಎಚ್.ವಸಂತ ಬೆರ್ನಾಡ್, ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪುತ್ತುಬಾವ, ಬಶೀರ್ ಕುಳಾಯಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್, ಅಝೀಝ್, ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಕೋಟ್ಯಾನ್ ಮಟ್ಟು, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಪೂಜಾರಿ, ಕಾಂಗ್ರೆಸ್‌ನ ವಿವಿಧ ಸಮಿತಿಯ ಧನರಾಜ್ ಕೋಟ್ಯಾನ್ ಸಸಿಹಿತ್ಲು, ಅನಿಲ್ ಬಂಗೇರ ಮುಕ್ಕ, ವಾಹಿದ್ ತೋಕೂರು, ಧರ್ಮಾನಂದ ತೋಕೂರು, ಮಯ್ಯದ್ದಿ ಪಕ್ಷಿಕೆರೆ ಮತ್ತಿತರರು ಇದ್ದರು.
ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಯನ್ನು ಹಂಚಿ ವಿಜೇತ ಅಭ್ಯರ್ಥಿಗಳೊಂದಿಗೆ ಸಂಭ್ರಮಿಸಿದರು.

Mulki-24011705

Comments

comments

Comments are closed.

Read previous post:
Mulki-24011704
KS Rao ನಗರ ಶಾಲಾ ರಜತ ಮಹೋತ್ಸವ

ಮೂಲ್ಕಿ: ಕೆ ಎಸ್ ರಾವ್ ನಗರ ಶಾಲೆ ರಜತ ಮಹೋತ್ಸವ ಮೂಲ್ಕಿ ಕೆ ಎಸ್ ರಾವ್ ನಗರ ಶಾಲೆ ರಜತ ಮಹೋತ್ಸವ ಕನ್ನಡಪ್ರಭವಾರ್ತೆ,ಮೂಲ್ಕಿ: ಆಂಗ್ಲ ಮಾಧ್ಯಮ ಶಾಲೆಯ...

Close