ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನ

ಹಳೆಯಂಗಡಿ: ಪಡುಪಣಂಬೂರು ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 5ಲಕ್ಷ ಮೊತ್ತದ ಡಿ.ಡಿಯನ್ನು ತಾಲೂಕು ಯೋಜನಾಧಿಕಾರಿ ಉಮರಬ್ಬ ರವರು ಶುಕ್ರವಾರ ಕ್ಷೇತ್ರದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರಾಮದಾಸ್ ಪುತ್ರನ್,ಆಡಳಿತ ಮೊಕ್ತೇಸರ ಎಚ್.ರಂಗನಾಥ ಭಟ್ ಅರ್ಚಕ ಎಚ್.ರಾಮದಾಸ್ ಭಟ್,ಮೊಕ್ತೇಸರರಾದ ದೇವದಾಸ್ ಸುವರ್ಣ,ರಮೇಶ್ ಸುವರ್ಣ, ನಿವೃತ್ತ ಪ್ರಾಧ್ಯಾಪಕ ಡಾ.ಜಗದೀಶ, ಶುದ್ದಗಂಗಾ ಯೋಜನಾಧಿಕಾರಿ ಅಭಯರಾಜ್, ಜನಜಾಗ್ರತಿ ಸಮಿತಿ ಅಧ್ಯಕ್ಷ ವಿನೋದ್ ಸಾಲ್ಯಾನ್,ಮೂಲ್ಕಿ ವಲಯ ಮೇಲ್ವಿಚಾರಕಿ ನಿಶ್ಮಿತಾ ವಿ,ಒಕ್ಕೂಟದ ಅಧ್ಯಕ್ಷ ಕರುಣಾಕರ,ಸೇವಾಪ್ರತಿನಿಧಿ ಸವಿತ ಉಪಸ್ಥಿತರಿದ್ದರು.

Mulki-24011703

Comments

comments

Comments are closed.

Read previous post:
Mulki-24011702
KS ರಾವ್ ನಗರ ಶಾಲೆ ವಾರ್ಷಿಕೋತ್ಸವ

ಮೂಲ್ಕಿ: ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ವಿವಿಧ ರೀತಿಯ ಪ್ರೋತ್ಸಾಹ ದೊರೆಯುತ್ತಿದ್ದು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಸರ್ಕಾರಿ ಶಾಲೆಗೆ ಗೌರವ...

Close