ಕ್ವಿಜ್ಐಟಿ ಟೆಕ್‌ಫಾರ್ಮರ‍್ಸ್-2017 ಪ್ರಶಸ್ತಿ

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜು ಕಂಪ್ಯೂಟರ್ ವಿಭಾಗದ ಸಂಯೋಜನೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಮಾಹಿತಿ ತಂತ್ರಜ್ಞಾನ ಸ್ಪರ್ದೆ ಕ್ವಿಜ್ಐಟಿ ಟೆಕ್‌ಫಾರ್ಮರ‍್ಸ್-2017 ಸಮಗ್ರ ಪ್ರಶಸ್ತಿಯನ್ನು ಮೂಲ್ಕಿ ಶ್ರೀನಾರಾಯಣ ಗುರು ಹೈಸ್ಕೂಲ್ ತಂಡ ಗಳಿಸಿದೆ.
ಫಲಿತಾಂಶ:
ಐಸ್ ಬ್ರೇಕರ್: ಮೂಲ್ಕಿ ಶ್ರೀನಾರಾಯಣಗುರು ಶಾಲೆ(ಪ್ರ),ಶ್ರೀವ್ಯಾಸಮಹರ್ಷಿ ವಿದ್ಯಾಪೀಠ ಶಾಲೆ (ದ್ವಿ). ಆಡ್ ಮೇನಿಯಾ:ವರ್ಷಾ ಕಾಮತ್ ಮತ್ತು ಕಾರ್ತಿಕ್ ಆಚಾರ್ಯ ಮೂಲ್ಕಿ ಶ್ರೀನಾರಾಯಣಗುರು ಶಾಲೆ (ಪ್ರ),ಅನಿಶ್ ಡಿಸೋಜ ಮತ್ತು ಫಾಸ್ನಾ ಹೋಲಿ ಫ್ಯಾಮಿಲಿ ಶಾಲೆ (ದ್ವಿ). ಪಿಕ್ ಒನ್ಸ್ ಬ್ರೈನ್:ಗೌತಮ್ ಮತ್ತು ಸಾತ್ವಿಕ್.ಕೆ ಹೋಲಿಫ್ಯಾಮಿಲಿ ಶಾಲೆ (ಪ್ರ),ಸಿದ್ದಾರ್ಥ ಶೆಟ್ಟಿ ಮತ್ತು ಎನ್.ಎನ್.ಅದ್ವಿತ್ ಡಾ.ಎಂ.ಆರ್.ಎಸ್.ಎಂ ಶಾಲೆ(ದ್ವಿ). ಮಿಸ್ಟಿಕ್ ಕ್ವೆಸ್ಟ್: ಮನೀಶ್ ಸಾಲ್ಯಾನ್,ಮೂಲ್ಕಿ ಶ್ರೀನಾರಾಯಣ ಗುರು ಶಾಲೆ (ಪ್ರ). ಗೇಮ್ ಬ್ಯಾಟಲ್: ಶಾದ್ವಲ್ ರಾವ್ ಮತ್ತು ಸುದಿತ್ ಹೊಳ್ಳ, ಶ್ರೀವ್ಯಾಸಮಹರ್ಷಿ ವಿದ್ಯಾಪೀಠ ಶಾಲೆ(ಪ್ರ),ರಿತೇಶ್ ಮತ್ತು ಸುಜಯ್, ಹೋಲಿ ಫ್ಯಾಮಿಲಿ ಶಾಲೆ(ದ್ವಿ).ಟರ್ಮಿನಲ್ ಚಾಂಪ್: ಡೀನಾ ಅವಿಟಾ ಅರಾಹ್ನ, ರೋಟರಿ ಹೈಸ್ಕೂಲ್(ಪ್ರ), ಪ್ರಥಮ್, ಮೇರಿವೆಲ್ ಶಾಲೆ (ದ್ವಿ)
ಸಮಗ್ರ ಪ್ರಶಸ್ತಿ: ಶ್ರೀ ನಾರಾಯಣಗುರು ಹೈಸ್ಕೂಲ್ ಮೂಲ್ಕಿ.
ದ್ವಿತೀಯ ಪ್ರಶಸ್ತಿ: ಹೋಲಿ ಫ್ಯಾಮಿಲಿ ಶಾಲೆ ಸುರತ್ಕಲ್.
ಮುಖ್ಯ ಅತಿಥಿ ಮಂಗಳೂರು ವಿಶ್ವ ವಿದ್ಯಾನಿಲಯ ಬಯೋಕೆಮೆಸ್ಟ್ರಿ ವಿಭಾಗದ ಪ್ರಾದ್ಯಾಪಕರಾದ ಡಾ.ಮಂಜುಳಾ ಶಾಂತಾರಾಮ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು ಪ್ರತಿಭಾನ್ವಿತರಾಗಲು ಹಾಗೂ ತಮ್ಮ ಬುದ್ದಿಮತ್ತೆ ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಅಹಾರ ಸೇವನೆ, ನಿಯಮಿತ ಜೀವನ ಪದ್ದತಿ ಅನುಸರಿಸುವುದು ಸೂಕ್ತ ಹೊರಗಿನ ಆಹಾರಗಳನ್ನು ಸೇವಿಸುವಾಗಲೂ ಹೆಚ್ಚಿನ ಜಾಗರೂಕತೆ ಅವಶ್ಯ ಎಂದರು. ಅತಿಥಿಯಾಗಿದ್ದ ಉಡುಪಿ ಎಂ.ಜಿ.ಎಂ ಕಾಲೇಜು ಕಂಪ್ಯೂಟರ್ ವಿಭಾಗ ಮುಖ್ಯಸ್ಥ ಪ್ರೊ.ಎಂ.ವಿಶ್ವನಾಥ ಪೈ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಅಧಿಕವಾಗಿದ್ದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದೊಂದಿಗೆ ಪ್ರಾಪಂಚಿಕ ವಿದ್ಯಮಾನಗಳ ಅರಿವು ಬಹಳ ಅಗತ್ಯವಾಗಿದ್ದು ಮಾಹಿತಿ ತಂತ್ರಜ್ಞಾನ ಸ್ಪರ್ದೆಯಲ್ಲಿ ಭಾಗವಹಿಸುವುದರಿಂದ ಜ್ಞಾನ ವೃದ್ಧಿ ಸಾಧ್ಯ ಎಂದರು.
ಈ ಸಂದರ್ಭ ಕಾಲೇಜಿನ ಕಂಪ್ಯೂಟರ್ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಮಂಗಳೂರು ವಿಶ್ವ ವಿದ್ಯಾನಿಲಯ ಅಂತಿಮ ಪದವಿ ಪರೀಕ್ಷೆಯಲ್ಲಿ ಕಂಪ್ಯೂಟರ್ ವಿಷಯದಲ್ಲಿ 100 ಅಂಕ ಗಳಿಸಿದ ಸೌಮ್ಯ ಮತ್ತು ಸ್ವಾತಿ ಮತ್ತು ಅತ್ಯಧಿಕ ಅಂಕಗಳಿಸಿದ ಬಿಸಿಎ ವಿಭಾಗದ ವೀಕ್ಷಿತಾ, ಬಿಎಸ್ಸಿ ವಿಭಾಗದ ಕರಿಷ್ಮಾ,ವಾಸವಿ,ಶಿಲ್ಪಾ ಮತ್ತು ಪದವಿ ಪೂರ್ವ ವಿಭಾಗದ ಕಿಷನ್ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ವಹಿಸಿದ್ದರು. ಕಾಲೇಜು ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಅನಸೂಯಾ ಕರ್ಕೇರಾ ಅತಿಥಿಗಳಾಗಿದ್ದರು. ಶ್ರೀಲಕ್ಷ್ಮಿ ಶೆಟ್ಟಿ ಸ್ವಾಗತಿಸಿದರು, ಸೌಮ್ಯಶ್ರೀ ಸನ್ಮಾನಿತರನ್ನು ಅಭಿನಂದಿಸಿದರು. ಸುಧೀಂದ್ರ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ಮಾನಸ ಎನ್.ಸುವರ್ಣ ಸ್ಪರ್ದಾ ವೀಜೇತರನ್ನು ಪರಿಚಯಿಸಿದರು.ನಾಗರಾಜ ರಾವ್ ವಂದಿಸಿದರು.

Mulki-24011706

Comments

comments

Comments are closed.

Read previous post:
Mulki-24011705
ಕಾಂಗ್ರೆಸ್ ಕಾರ್ಯಕರ್ತರ ಸಂಘಟಿತ ಪಕ್ಷ

ಮೂಲ್ಕಿ: ಇಂದು ಕೃಷಿಕರು ಕಾಂಗ್ರೆಸ್ ಬೆಂಬಲಿತ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸಹಕಾರ ನೀಡಿದ್ದರಿಂದ ಮತ್ತೆ ಮೂಲ್ಕಿ ಕಾಂಗ್ರೆಸ್‌ನ ಕಾರ್ಯಕರ್ತರ ಸಂಘಟಿತ ಪಕ್ಷವಾಗಿ ಹೊರಹೊಮ್ಮಿದೆ, ಕಾರ್ಯಕರ್ತರ ಹಾಗೂ ಶಾಸಕ ಅಭಯಚಂದ್ರರ...

Close