ಕೆಮ್ರಾಲ್ ನೀರಸ ಗ್ರಾಮ ಸಭೆ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ 2016-17 ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.
ಇಲಾಖಾಕಾರಿಗಳ ಗೈರು ಹಾಜರು ಮತ್ತು ಗ್ರಾಮಸ್ಥರ ನೀರಸ ಪ್ರತಿಕ್ರಿಯೆ ಗ್ರಾಮ ಸಭೇಯಲ್ಲಿ ಎದ್ದು ತೋರುತ್ತಿತ್ತು. ಪ್ರತೀ ಗ್ರಾಮ ಸಭೆಯಲ್ಲಿ ಅಕಾರಿಗಳ ಅನುಪಸ್ಥಿತಿ ಮತ್ತು ಗ್ರಾಮ ಸಭೆಯ ಬಗ್ಗೆ ನಿರ್ಲಕ್ಷ ಯಾಕೇ ಎಂದು ಗ್ರಾಮಸ್ಥ ವಿನ್ಸಂಟ್ ಪ್ರಶ್ನೆ ಕೇಳಿದಾಗ ಪಮಚಾಯಿತಿ ಅಭಿವೃದ್ಧಿ ಅಕಾರಿ ರಮೇಶ್ ರಾಥೋಡ್ ಮಾತನಾಡಿ ಎಲ್ಲಾ ಇಲಾಖೆಯವರಿಗೆ ರಿಜಿಸ್ಟರ್ಡ್ ಅಂಚೆ ಪತ್ರ ಕಳುಹಿಸಲಾಗಿದೆ. ಫೋನು ಮೂಲಕವೂ ತಿಳಿಸಲಾಗಿದೆ ಆದರೂ ಬಂದಿಲ್ಲ ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಮೇಲಾಕಾರಿಗಳಿಗೆ ಕಳುಹಿಸಲಾಗುವುದು ಎಂದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಸಮುದಾಯ ಭವನದ ಹತ್ತಿರ ಇರುವ ಗ್ರಂಥಾಲಯಕ್ಕೆ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ ಮಳೆಗಾಲದಲ್ಲಿ ಸೋರುತ್ತಿದೆ, ಪುಸ್ತಕಗಳ ಕೋರತೆ ಕೂಡ ಎದ್ದು ಕಾಣುತ್ತದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ನಿತಿನ್ ವಾಸ್ ಹೇಳಿದಾಗ ಪಿಡಿಒ ಉತ್ತರಿಸಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಗ್ರಂಥಾಲಯದ ಹೊಸ ಕಟ್ಟಡ ಕಟ್ಟಲು 5 ಲಕ್ಷ ರೂ ಮಂಜೂರು ಆಗಿದೆ ಎಂದು ಹೇಳಿದರು.
ಅಂಬೇಡ್ಕರ್ ಸಭಾ ಭವನ 2 ವರ್ಷವಾದರೂ ಪೂರ್ಣಗೊಂಡಿಲ್ಲ ಯಾಕೆ ಎಂದು ಗ್ರಾಮಸ್ಥ ಶ್ರೀಧರ್ ಪ್ರಶ್ನಿಸಿದಾಗ ಉತ್ತರಿಸಿದ ಪಂಚಾಯಿತಿ ಸದಸ್ಯ ಮಯ್ಯದ್ದಿ 1 ನೇ ಹಂತದ ಕಾಮಗಾರಿ ಮುಗಿದಿದೆ. ತಾಂತ್ರಿಕ ಕಾರಣಗಳಿಂದ ಕೆಲಸ ಕುಂಠಿತಗೊಂಡಿದೆ ಎಂದರು.

ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳೂರು ತಾಲೂಕಿನ ಈ ಪರಿಸರದಲ್ಲಿ ಅತೀ ಹೆಚ್ಚು ಕ್ಷಯ ರೋಗಿಗಳು ದಾಖಾಲಾಗುತ್ತಿದ್ದಾರೆ ಇದು ತುಂಬಾ ಆತಂಕಕಾರಿ ವಿಷಯ ಪ್ರತಿ ತಿಂಗಳಿಗೆ ೫ ರಿಂದ ೭ ರೋಗಿಗಳು ತಪಾಸಣೆಯಲ್ಲಿ ಕ್ಷಯ ರೋಗ ಇರುವುದು ದೃಡ ಪಟ್ಟಿದೆ. ಗ್ರ್ರಾಮಸ್ಥರು ಈ ಬಗ್ಗೆ ಜಾಗರೂಕರಾಗಿರಿ ಇದಕ್ಕೆ ಸೂಕ್ತ ಮದ್ದು ಸರಕಾರದ ವತಿಯಿಂದ ನೀಡಲ್ಪಡುತ್ತದೆ ಪ್ರಾರಂಭದಲ್ಲಿಯೇ ಇದರ ಲಕ್ಷಣ ಬಗ್ಗೆ ನಿಗಾ ವಹಿಸಿ. ಎಂದು ಕೆಮ್ರಾಲ್ ಪ್ರಾಥಮಿಕ ಕೇಂದ್ರ ವೈದ್ಯಾಕಾರಿ ಡಾ. ಮಾಧವ ಪೈ ಮಾಹಿತಿ ನೀಡಿದರು.
ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪರಿಶಿಷ್ಠ ಜಾತಿ ಹಾಗೂ ಪಂಗಡದ ರಸ್ತೆಗೆ ದಾರಿ ದೀಪದ ವ್ಯವಸ್ಥೆ ಸರಿ ಆಗಿಲ್ಲ, ಪಶು ಚಿಕಿತ್ಸಾ ಕೇಂದ್ರವಿಲ್ಲ , ತಾಜ್ಯ ವಿಲೇವಾರಿ ಸಮಸ್ಯೆ, ರಸ್ತೆ ದುರಸ್ತಿ ಮಾಡಿ, ಮುಂತಾದ ವಿಷಯಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚೆ ನಡೆಯಿತು.
ಅರಣ್ಯ ಇಲಾಖಾಕಾರಿ ನರೇಶ್ ನೋಡಲ್ ಅಕಾರಿಯಾಗಿ ಭಾಗವಹಿಸಿದ್ದರು.
ದ.ಕ. ಜಿ. ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ. ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್ತಿ, ಪಂಚಾಯಿತಿರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವ, ಮೆಸ್ಕಾಂ ಇಲಾಖೆಯ ಶ್ರೀನಿವಾಸ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-2701201701

Comments

comments

Comments are closed.

Read previous post:
Mulki-24011706
ಕ್ವಿಜ್ಐಟಿ ಟೆಕ್‌ಫಾರ್ಮರ‍್ಸ್-2017 ಪ್ರಶಸ್ತಿ

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜು ಕಂಪ್ಯೂಟರ್ ವಿಭಾಗದ ಸಂಯೋಜನೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಮಾಹಿತಿ ತಂತ್ರಜ್ಞಾನ ಸ್ಪರ್ದೆ ಕ್ವಿಜ್ಐಟಿ ಟೆಕ್‌ಫಾರ್ಮರ‍್ಸ್-2017 ಸಮಗ್ರ ಪ್ರಶಸ್ತಿಯನ್ನು ಮೂಲ್ಕಿ ಶ್ರೀನಾರಾಯಣ ಗುರು ಹೈಸ್ಕೂಲ್...

Close