ಭಾಗ್ಯಜ್ಯೋತಿ ಸ್ತ್ರಿಶಕ್ತಿ ಸಂಘ : ವಾರ್ಷಿಕೋತ್ಸವ

ಕಿನ್ನಿಗೋಳಿ: ಮಹಿಳೆಯರು ಶೈಕ್ಷಣಿಕ ಆರ್ಥಿಕವಾಗಿ ಸದೃಡರಾಗಿ ಸಂಘಟನಾ ಶಕ್ತಿಯ ಮೂಲಕ ಕಾರ್ಯಪ್ರವೃತ್ತರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮಂಗಳೂರು ರಾಮಕೃಷ್ಣ ಕಾಲೇಜು ಪ್ರಿನಿಪಾಲ್ ಕಿಶೋರ್‌ಕುಮಾರ್ ಹೇಳಿದರು.
ಭಾನುವಾರ ಕೆರೆಕಾಡು ಭಾಗ್ಯಜ್ಯೋತಿ ಸ್ತ್ರಿಶಕ್ತಿ ಸಂಘದ 17 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಪುನರೂರು ಅಂಗನವಾಡಿ ಶಾಲೆಯ ಶಿಕ್ಷಕಿ ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು.
ಕೆರೆಕಾಡು ವಿನಾಯಕ ಯಕ್ಷಕಲಾ ಮಕ್ಕಳ ಮೇಳದ ಅಧ್ಯಕ್ಷ ಜಯಂತ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಮುಖಂಡ ಗಣೇಶ್ ಬಂಗೇರ ಕಂಬಳಬೆಟ್ಟು, ಗ್ರಾಮ ಪಂಚಾಯಿತಿ ಸದಸ್ಯೆ ಧಮಯಂತಿ, ಉಮೇಶ್ ಜೆ. ಆಚಾರ್ಯ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷೆ ಪ್ರೇಮಲತಾ ಅಮೀನ್ ಸ್ವಾಗತಿಸಿದರು. ಅನ್ವಿತಾ ಪ್ರಸ್ತಾವನೆಗೈದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.

Kinnigoli-30011708

Comments

comments

Comments are closed.

Read previous post:
Kinnigoli-30011707
ಸ್ಪೋಟ್ಸ್ ಕ್ಲಬ್ ನೂತನ ಕಟ್ಟಡದ ಶಿಲಾನ್ಯಾಸ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ಇದರ ನೂತನ ಕಟ್ಟಡದ ಶಿಲಾನ್ಯಾಸ ಮಧು ಭಟ್ ಅವರ ಪೌರೋಹಿತ್ಯದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಹೇಮನಾಥ್ ಅಮೀನ್...

Close