ಕೆ ಸೋಮಪ್ಪ ಸುವರ್ಣ 5 ನೇ ವರ್ಷದ ಸಂಸ್ಮರಣೆ

ಕಿನ್ನಿಗೋಳಿ:  ಮಾಜಿ ಶಾಸಕ ದಿ. ಸೋಮಪ್ಪ ಸುವರ್ಣ ಅವರು ಸಮಾಜಿಕವಾಗಿ, ಶೈಕ್ಷಣಿಕವಾಗಿ ಧಾರ್ಮಿಕವಾಗಿ ರಾಜಕೀಯವಾಗಿ ಸಮಾಜದಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಮದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.  ಕಿನ್ನಿಗೋಳಿ ಸಮೀಫದ ಕೊಲ್ಲೂರು ಕಾಂತಾಬಾರೆ- ಬೂದಬಾರೆ ಜನ್ಮಕ್ಷೇತ್ರದಲ್ಲಿ ನಡೆದ ಸೇವೆ ಮಾಜಿ ಶಾಸಕ ಕೆ. ಸೋಮಪ್ಪ ಸುವರ್ಣ ನೆರಳು-ನೆಂಪು ಸಮಿತಿಯ ಆಶ್ರಯದಲ್ಲಿ ಪ್ರಗತಿ ಪರ ಕೃಷಿಕ-ಶಿಕ್ಷಣ ತಜ್ಞ-ಸಾಮಾಜಿಕ ನೇತಾರ ಕೆ ಸೋಮಪ್ಪ ಸುವರ್ಣರ 5 ನೇ ವರ್ಷದ ಸಂಸ್ಮರಣೆ ಹಾಗೂ 2017 ರ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ ಸರಕಾರದಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಕಾಂತಾಬಾರೆ- ಬೂದಬಾರೆ ಜನ್ಮಕ್ಷೇತ್ರದ ಮೂಲಕವಾಗಿ ಅಭಿವೃದ್ಧಿ ಪಡಿಸುವ ಮೂಲಕವಾಗಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಬೇಕಾಗಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು. ಇದೇ ಸಂಧರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಕೊಲಕಾಡಿ ಕೆ ಪಿ ಎಸ್ ಕೆ ಫ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ವಸಂತ ರಾವ್,ಕೃಷಿ ಕ್ಷೇತ್ರದಲ್ಲಿ ಸಾಧನೆಗ್ಯೈದ ಐತಪ್ಪ ಸಾಲ್ಯಾನ್ ಹಾಗೂ ಸಮಾಜ ಸೇವೆಯಲ್ಲಿ ತನ್ನ್ನನ್ನು ತೊಡಗಿಸಿಕೊಂಡಿರುವ ಹೊನ್ನಯ್ಯವರಿಗೆ 2017 ರ ಕೆ ಸೋಮಪ್ಪ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ ಸುವರ್ಣ,ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಜಯಾನಂದ , ಕೊಲ್ಲೂರಿನ ಕಾಂತಾ ಬಾರೆ-ಬೂದಾ ಬಾರೆ ಜನ್ಮ ಕ್ಷೇತ್ರದ ಸಮಿತಿಯ ಅಧ್ಯಕ್ಷ ದಾಮೋದರ ದಂಡಕೇರಿ,ಸಲಹೆಗಾರ ಬಿಪಿನ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಾನಪದ ವಿದ್ವಾಂಸ ಡಾ ಗಣೇಶ್ ಅಮೀನ್ ಸಂಕಮಾರ್ ರವರು ಸೋಮಪ್ಪ ಸುವರ್ಣರ ಸಂಸ್ಮರಣಾ ಭಾಷಣಗೈದರು. ಪ್ರಾಚಾರ‍್ಯ ವೈ. ಎನ್ ಸಾಲ್ಯಾನ್ ಪ್ರಶಸ್ತಿ ಪುರಕೃತರ ಬಗ್ಗೆ ಮಾತನಾಡಿದರು. ನಾಲ್ಕು ವಿದ್ಯಾರ್ಥಿಗಳಾದ ಅನುಪಮಾ, ಸುಚಿತಾ, ಮೋಹಿತ್, ಸೌಂದರ್ಯ ಅವರಿಗೆ ಶಿಕ್ಷಣಕ್ಕೆ ನೆರೆವು ನೀಡಲಾಯಿತು. ಎಪಿಎಂಸಿ ಸದಸ್ಯರಾಗಿ ಚುನಾಯಿತರಾದ ಪ್ರಮೋದ್ ಕುಮಾರ್ ಅವರಿಗೆ ಗೌರವಿಸಲಾಯಿತು. ಗೋಪಿನಾಥ ಪಡಂಗ ಸ್ವಾಗತಿಸಿದರು. ವಿಜಯಕುಮಾರ್ ಕುಬೆವುರು, ವಿನಯ್ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಪೂಜಾರಿ ವಂದಿಸಿದರು.

Kinnigoli-30011705

Comments

comments

Comments are closed.

Read previous post:
Kinnigoli-30011704
ಶಿಕ್ಷಣ ನೀತಿ, ವ್ಯಾಪಾರೀಕರಣ ಬದಲಾಗಬೇಕು

ಕಿನ್ನಿಗೋಳಿ: ದೇಶದ ಪ್ರಸ್ತುತ ಶಿಕ್ಷಣ ನೀತಿ ಹಾಗೂ ವ್ಯಾಪಾರೀಕರಣ ಪರಿಣಾಮ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಬಡವ ಬಲ್ಲಿದ ಮಧ್ಯ ಅಂತರ ಹೆಚ್ಚಾಗುತ್ತಿದೆ. ಎಂದು ಬೆಂಗಳೂರು ಮಾನವ ಧರ್ಮ ಪೀಠದ...

Close