ಸುಸಂಸ್ಕ್ರತ ಸಮಾಜ ನಿರ್ಮಾಣ ಮಾಡಬೇಕು

ಕಿನ್ನಿಗೋಳಿ: ಜನರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವಕೊಟ್ಟು, ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿ ಅರ್ಹರಿಗೆ ಸಹಾಯ ಹಸ್ತ ನೀಡಿ ಸುಸಂಸ್ಕ್ರತ ಸಮಾಜ ನಿರ್ಮಾಣ ಮಾಡಬೇಕು ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಅತ್ತೂರು ಕಾಪಿಕಾಡು ಶ್ರೀ ಕೋರ‍್ದಬ್ಬು ದೈವಸ್ಥಾನ ನೇಮೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಕಾರ್ಯಕ್ರಮ ಉದ್ಘಾಟಿಸಿದರು.
ಮಾಜಿ ಮಂಡಲ ಪ್ರಧಾನ ಬಾಲಾದಿತ್ಯ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ವರ್ಗಾವಣೆಗೊಂಡ ಕೆಮ್ರಾಲ್ ಪ್ರೌಢಶಾಲಾ ಮುಖ್ಯಶಿಕ್ಷಕಿ ಸಂಧ್ಯಾ ಹಗಡೆ ಹಾಗೂ ಶಿಕ್ಷಕಿ ಪುಪ್ಪಲತಾ ಅವರನ್ನು ಸನ್ಮಾನಿಸಲಾಯಿತು.
ಪಂಜ ಶ್ರೀಮಹಾಗಣಪತಿ ಮಂದಿರ ಅರ್ಚಕ ವಾಸುದೇವ ಭಟ್ ಪಂಜ, ಪಕ್ಷಿಕೆರೆ ಚರ್ಚ್ ಸಹಾಯಕ ಧರ್ಮಗುರು ಫಾ. ಪೆಟ್ರಿಕ್ ಸಿಕ್ವೇರಾ, ದ. ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ. ಕ ಜಿಲ್ಲಾ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಪಡುಪಣಂಬೂರು ಪಿಸಿಎ ಬ್ಯಾಂಕ್ ನಿರ್ದೇಶಕ ಜಯರಾಮ ಆಚಾರ್ಯ, ಪಕ್ಷಿಕೆರೆಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮೀರಾ ಹಚ್, ಕೆಮ್ರಾಲ್ ಗ್ರಾ. ಪಂ.ಸದಸ್ಯೆ ಲೀಲಾ ಪೂಜಾರ್ತಿ, ಶ್ರೀ ಕೊರ‍್ದಬ್ಬು ದೈವಸ್ಥಾನ ಆಡಳಿತ ಮೊಕ್ತೇಸರ ಶೀನ ಸ್ವಾಮಿ ಕಾಫಿಕಾಡು, ಅರ್ಚಕ ಸಾಧು ಗುರಿಕಾರ ಕಾಪಿಕಾಡು, ಶ್ರೀ ಕೋರ‍್ದಬ್ಬು ಯುವಕ ಮಂಡಲ ಅಧ್ಯಕ್ಷ ಅಣ್ಣಪ್ಪ ಕಾಪಿಕಾಡು, ಮಹಿಳಾ ಮಂಡಲ ಅಧ್ಯಕ್ಷೆ ಪುಪ್ಪ ಚಂದ್ರಾಹಾಸ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30011703

Comments

comments

Comments are closed.

Read previous post:
Kinnigoli-30011702
ಪ್ರತಿಫಲಾಫೇಕ್ಷೆಯಿಲ್ಲದ ಸಮಾಜ ಸೇವೆ ಮಾಡಬೇಕು

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಪ್ರತಿಫಲಾಫೇಕ್ಷೆಯಿಲ್ಲದೆ ಸಮಾಜ ಸೇವೆ ಮಾಡಿ ಬಡ ವರ್ಗದವರನ್ನು ಸಮಾಜದ ಮುಂಚೂಣಿಗೆ ತರಲು ಪ್ರಯತ್ನಿಸಬೇಕು. ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ...

Close