ಜನಪಯೋಗಿ ಕಾರ್ಯಗಳಿಗೆ ಸಮಾಜದ ಪ್ರೋತ್ಸಾಹ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಸೇವಾ ಮನೋಭಾವನೆ ಹಾಗೂ ಜನಪಯೋಗಿ ಕಾರ್ಯಗಳೊಂದಿಗೆ ಸ್ಪಂದಿಸಿದಾಗ ಸಂಘಟನೆಗಳಿಗೆ ಸಮಾಜದ ಪ್ರೋತ್ಸಾಹ ಸಿಗುತ್ತದೆ ಎಂದು ನಿವೃತ್ತ ಶಿಕ್ಷಕಿ ಹಿರಿಯ ಸಾಹಿತಿ ಗಾಯತ್ರಿ ಎಸ್. ಉಡುಪ ಹೇಳಿದರು.
ಕೊಡೆತ್ತೂರು ಶ್ರೀಕೋರ‍್ದಬ್ಬು ದೈವದ ನೇಮದ ಸಂದರ್ಭ ಆದರ್ಶ ಬಳಗ ಕೊಡೆತ್ತೂರು ಆಶ್ರಯದಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಅನನ್ಯಾ, ಅಂಕಿತಾ, ಶ್ರಾವ್ಯ, ಜೀವನ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕ ಕೆ. ವಿ. ಶೆಟ್ಟಿ ಅಭಿನಂದನಾ ಭಾಷಣಗೈದರು. ಹರೀಶ್ ಕೊಡೆತ್ತೂರು ಸನ್ಮಾನ ಪತ್ರ ವಾಚಿಸಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಗುತ್ತಿನಾರ್ ಸಂಜೀವ ಶೆಟ್ಟಿ, ಕುಂಜಿರಾಯ ದೈವಸ್ಥಾನದ ಮುಕ್ಕಾಲ್ದಿ ಜಯರಾಮ ಮುಕಾಲ್ದಿ, ಸುರೇಶ್ ಶೆಟ್ಟಿ, ಗಣೇಶ್ ಶೆಟ್ಟಿ ಸಂಕಯ್ಯಬೆನ್ನಿ , ಅನುಷಾ ಕೊಡೆತ್ತೂರು ಉಪಸ್ಥಿತರಿದ್ದರು.
ಆದರ್ಶ ಬಳಗದ ಅಧ್ಯಕ್ಷ ದಾಮೋದರ ಶೆಟ್ಟಿ ಸ್ವಾಗತಿಸಿದರು. ಕೇಶವ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-30011706

Comments

comments

Comments are closed.

Read previous post:
Kinnigoli-30011705
ಕೆ ಸೋಮಪ್ಪ ಸುವರ್ಣ 5 ನೇ ವರ್ಷದ ಸಂಸ್ಮರಣೆ

ಕಿನ್ನಿಗೋಳಿ:  ಮಾಜಿ ಶಾಸಕ ದಿ. ಸೋಮಪ್ಪ ಸುವರ್ಣ ಅವರು ಸಮಾಜಿಕವಾಗಿ, ಶೈಕ್ಷಣಿಕವಾಗಿ ಧಾರ್ಮಿಕವಾಗಿ ರಾಜಕೀಯವಾಗಿ ಸಮಾಜದಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಮದು ಶಾಸಕ ಕೆ. ಅಭಯಚಂದ್ರ ಜೈನ್...

Close