ಪ್ರತಿಫಲಾಫೇಕ್ಷೆಯಿಲ್ಲದ ಸಮಾಜ ಸೇವೆ ಮಾಡಬೇಕು

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಪ್ರತಿಫಲಾಫೇಕ್ಷೆಯಿಲ್ಲದೆ ಸಮಾಜ ಸೇವೆ ಮಾಡಿ ಬಡ ವರ್ಗದವರನ್ನು ಸಮಾಜದ ಮುಂಚೂಣಿಗೆ ತರಲು ಪ್ರಯತ್ನಿಸಬೇಕು. ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಲಯನ್ಸ್ – ಲಯನೆಸ್ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ನಡೆದ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಹತ್ತು ಮಂದಿ ಸಾಹಿತಿಗಳನ್ನು ಗೌರವಿಸಲಾಯಿತು. ಹಿರಿಯಸಾಹಿತಿಗಳಾದ ಹರಿಶ್ಚಂದ್ರ ಸಾಲ್ಯಾನ್ ಮೂಲ್ಕಿ, ಕೆ. ಜಿ.ಮಲ್ಯ ಕಿನ್ನಿಗೋಳಿ, ಮೋಹನ್‌ದಾಸ್ ಸುರತ್ಕಲ್, ಉದಯಕುಮಾರ್ ಹಬ್ಬು, ಶಕುಂತಳಾ ಭಟ್ ಹಳೆಯಂಗಡಿ, ಡಾ. ಸೋಂದಾ ಭಾಸ್ಕರ ಭಟ್, ಉಮೇಶ್ ರಾವ್ ಎಕ್ಕಾರು , ಹಾಗೂ ಡಾ. ನಾರಾಯಣ ಶೆಟ್ಟಿ, ಎನ್. ಪಿ. ಶೆಟ್ಟಿ ಮುಲ್ಕಿ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಲಯನೆಸ್ ಕ್ಲಬ್ ಅಧ್ಯಕ್ಷೆ ವತ್ಸಲಾ ರಾವ್, ಸವಿತಾ ಪಿ. ಶೆಟ್ಟಿ, ಲೀಲಾ ಬಂಜನ್, ಶಾಂಭವಿ ಶೆಟ್ಟಿ, ರಮೇಶ್, ಕೆ. ಭುವನಾಭಿರಾಮ ಉಡುಪ, ಕೃಷ್ಣ ಸಾಲ್ಯಾನ್, ಮೋಹನದಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್ ಸ್ವಾಗತಿಸಿದರು. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-30011702

Comments

comments

Comments are closed.

Read previous post:
Kinnigoli-30011701
ಆನ್‌ಲೈನ್ ಟೆಸ್ಟ್ ಪ್ರಾತ್ಯಕ್ಷಿತೆ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳು ಉದ್ಯೋಗ ಕೇಂದ್ರಿತ ಮತ್ತು ಮಾನವ ಸಂಪನ್ಮೂಲ ನಿರ್ಮಾಣ ಕೇಂದ್ರವಾಗಿ ಬೆಳೆಯುತ್ತಿದೆ. ಎಂದು ನ್ಯಾಕ್ ಪರಿಶೀಲನಾ ಸಮಿತಿ ಮುಖ್ಯಸ್ಥ ಮತ್ತು ತೆಲಂಗಾಣ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ...

Close