ಮದು ಮದಿಪು ಕೃತಿ ಬಿಡುಗಡೆ 

ಕಿನ್ನಿಗೋಳಿ: ಜನಪದಿಯವಾಗಿ ತೆರೆಯ ಮರೆಗೆ ಸಲ್ಲುವ ದೈವಗಳ ಆಚರಣೆ -ಆರಾಧನೆ ವಿಧಿ ವಿಧಾನಗಳ ಆಧಾರಿತ ಕೃತಿಗಳನ್ನು ರಚಿಸಿ ಪ್ರಕಟಿಸುವುದು ಉತ್ತಮ ಕೆಲಸವಾಗಿದೆ. ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸಾಹಿತಿ ಹರಿಶ್ಚಂದ್ರ ಸಾಲ್ಯಾನ್ ರಚಿತ ಮದು ಮದಿಪು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತಿಗಳಾದ ಮೋಹನ್‌ದಾಸ್ ಸುರತ್ಕಲ್, ಹರೀಶ್ಚಂದ್ರ ಸಾಲ್ಯಾನ್ ಮೂಲ್ಕಿ, ಕೆ. ಜಿ.ಮಲ್ಯ ಕಿನ್ನಿಗೋಳಿ, ಉದಯಕುಮಾರ್ ಹಬ್ಬು, ಶಕುಂತಳಾ ಭಟ್ ಹಳೆಯಂಗಡಿ, ಡಾ. ಸೋಂದಾ ಭಾಸ್ಕರ ಭಟ್, ಉಮೇಶ್‌ರಾವ್ ಎಕ್ಕಾರು ,ಕಿನ್ನಿಗೋಳಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಅಧ್ಯಕ್ಷ ವೈ. ಯೋಗೀಶ್ ರಾವ್, ಲಯನೆಸ್ ಕ್ಲಬ್ ಅಧ್ಯಕ್ಷೆ ವತ್ಸಲಾ ರಾವ್, ಪುರುಷೋತ್ತಮ ಶೆಟ್ಟಿ, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-30011709

Comments

comments

Comments are closed.

Read previous post:
Kinnigoli-30011708
ಭಾಗ್ಯಜ್ಯೋತಿ ಸ್ತ್ರಿಶಕ್ತಿ ಸಂಘ : ವಾರ್ಷಿಕೋತ್ಸವ

ಕಿನ್ನಿಗೋಳಿ: ಮಹಿಳೆಯರು ಶೈಕ್ಷಣಿಕ ಆರ್ಥಿಕವಾಗಿ ಸದೃಡರಾಗಿ ಸಂಘಟನಾ ಶಕ್ತಿಯ ಮೂಲಕ ಕಾರ್ಯಪ್ರವೃತ್ತರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮಂಗಳೂರು ರಾಮಕೃಷ್ಣ ಕಾಲೇಜು ಪ್ರಿನಿಪಾಲ್ ಕಿಶೋರ್‌ಕುಮಾರ್ ಹೇಳಿದರು. ಭಾನುವಾರ ಕೆರೆಕಾಡು...

Close