ಆನ್‌ಲೈನ್ ಟೆಸ್ಟ್ ಪ್ರಾತ್ಯಕ್ಷಿತೆ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳು ಉದ್ಯೋಗ ಕೇಂದ್ರಿತ ಮತ್ತು ಮಾನವ ಸಂಪನ್ಮೂಲ ನಿರ್ಮಾಣ ಕೇಂದ್ರವಾಗಿ ಬೆಳೆಯುತ್ತಿದೆ. ಎಂದು ನ್ಯಾಕ್ ಪರಿಶೀಲನಾ ಸಮಿತಿ ಮುಖ್ಯಸ್ಥ ಮತ್ತು ತೆಲಂಗಾಣ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಮಹಮ್ಮದ್ ಅಕ್ಬರ್ ಆಲಿಖಾನ್ ಹೇಳಿದರು.
ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯ ಪರವಾಗಿ ಭೇಟಿ ನೀಡಿ ಮಾತನಾಡಿದರು.
ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗಾಗಿ ಎನ್.ಸಿ.ಸಿ, ಪದವಿ ಬಳಿಕ ಉದ್ಯೋಗ ಗಳಿಕೆಗೆ ಉಪಯೋಗವಾಗುವ ಆನ್‌ಲೈನ್ ಟೆಸ್ಟ್ ಪ್ರಾತ್ಯಕ್ಷಿತೆಗಳು, ಪ್ರಾದ್ಯಾಪಕರೊಂದಿಗೆ ವಿದ್ಯಾರ್ಥಿಗಳು ಸೇರಿ ಪೂರ್ಣ ಪ್ರಮಾಣದಲ್ಲಿ ಸಂಶೋಧನಾ ವರದಿ ನಿರ್ಮಾಣ, ದೃಶ್ಯ ಶ್ರಾವ್ಯ ಕಾರ್ಯಕ್ರಮಗಳನ್ನು ಕಾಲೇಜು ಉತ್ಕ್ರಷ್ಟ ತರಬೇತಿ ನೀಡಿ ವಿದ್ಯಾರ್ಥಿಗಳ ಸಂಶೋಧನಾ ಕಾರ್ಯಕ್ಕೆ ಕಾಲೇಜು ಆಡಳಿತ ಮಂಡಳಿ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು. ಸರಕಾರಿ ಕಾಲೇಜುಗಳಲ್ಲಿ ಅತೀ ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು, ಅದ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭ ನ್ಯಾಕ್ ಸಮಿತಿಯ ಪರಿಶೀಲನಾ ವರದಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು. ತಮಿಳುನಾಡು ಗಾಂ ಗ್ರಾಮದ ಗ್ರಾಮೀಣ ಸಂಸ್ಥೆಯ ಡಾ.ರಾಜೇಂದ್ರನ್, ನಾಗಪುರ ಆಮ್ಟೆ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ದೇವೇಂದ್ರ ಬುರ್ಘಾಟೆ, ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ ರಾವ್,ನ್ಯಾಕ್ ಕೊರ್ರ‍್ಡಿನೇಟರ್ ರೋಶನಿ ಯಶವಂತ್ ಉಪಸ್ಥಿತರಿದ್ದರು.
ಪ್ರೊ, ವಿಶ್ವನಾಥ ರಾವ್ ಸ್ವಾಗತಿಸಿದರು, ಪ್ರೊ.ಜಗದೀಶ ಬಾಳ ನಿರೂಪಿಸಿದರು, ರೋಶನಿ ಯಶವಂತ್ ವಂದಿಸಿದರು.

Kinnigoli-30011701

Comments

comments

Comments are closed.

Read previous post:
Kinnigoli-2701201704
ಅಣೆಕಟ್ಟು – ಪೋಲಾದ ಸರಕಾರದ ಹಣ

ಕಿನ್ನಿಗೋಳಿ: ಅಂತರ್ಜಲ ರಕ್ಷಣೆ ಹಾಗೂ ಕೃಷಿಕರ ಏಳಿಗೆಗಾಗಿ ಸರಕಾರ ಹಲವು ಕ್ರಮ ಕೈಗೊಳ್ಳುತ್ತದೆ ಎಂಬುದು ಸರಕರದ ಮಟ್ಟದಲ್ಲಿ ಉಳಿದಿದೆ ಕೆಲವರ ಅವೈಜ್ಞಾನಿಕ ಯೋಜನೆ ಯೋಜನೆಗಳಿಗೆ ಸರಕಾರದ ಹಣ ಪೋಲಾಗುತ್ತಿರುವುದು...

Close