ಶಿಕ್ಷಣ ನೀತಿ, ವ್ಯಾಪಾರೀಕರಣ ಬದಲಾಗಬೇಕು

ಕಿನ್ನಿಗೋಳಿ: ದೇಶದ ಪ್ರಸ್ತುತ ಶಿಕ್ಷಣ ನೀತಿ ಹಾಗೂ ವ್ಯಾಪಾರೀಕರಣ ಪರಿಣಾಮ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಬಡವ ಬಲ್ಲಿದ ಮಧ್ಯ ಅಂತರ ಹೆಚ್ಚಾಗುತ್ತಿದೆ. ಎಂದು ಬೆಂಗಳೂರು ಮಾನವ ಧರ್ಮ ಪೀಠದ ಶಿವಾಯುತ ಧರ್ಮ ಗುರುಗಳಾದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.
ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜಿನ ಕೆ.ಸೋಮಪ್ಪ ಸುವರ್ಣ ವೇದಿಕೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಹಳೆಯಂಗಡಿ ಗ್ರಾಮ ಪಂಚಾಯಿತಿ, ಅಪ್ನಾದೇಶ್ ಸಹಯೋಗದೊಂದಿಗೆ ಶುಕ್ರವಾರ ನಡೆದ ಶಿಕ್ಷಣ ಶಿಲ್ಪಿ ಮಾಸ ಪತ್ರಿಕೆಯ 4ನೇ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017 ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ್ಯಾದಂತ್ಯ ಒಂದೇ ಶಿಕ್ಷಣ ನೀತಿ ಇರಬೇಕು. ನೈತಿಕ ಮೌಲ್ಯಾಧಾರಿತ ಶಿಕ್ಷಣ ಕ್ರಮವಿರಬೇಕು. ಶಿಕ್ಷಣಕ್ಕೆ ಪೂರಕವಾಗಿ ನೌಕರಿ ಪಡೆಯುವ ವ್ಯವಸ್ಥೆ ಬರಬೇಕು.ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ದೇಶಾಭಿಮಾನದ ಚಿಂತನೆ ಮೂಡಿದಲ್ಲಿ ಮಾತ್ರ ಉತ್ತಮ ಶಿಕ್ಷಣ ವ್ಯವಸ್ಥೆಯೊಂದಿಗೆ ಬಲಿಷ್ಠ ಭಾರತ ಕಟ್ಟಲು ಸಾಧ್ಯ ಎಂದರು.
ಕರ್ನಾಟಕ ಜ್ಞಾನ ವಿಕಾಸ ಸಮಿತಿ ರಾಜ್ಯಾಧ್ಯಕ್ಷ ಹಿರಿಯ ಮನೋ ವೈದ್ಯರಾದ ಡಾ.ಸಿ.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ದ,ಕ ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಕಾರಿ ಡಾ. ಎಂ.ಆರ್.ರವಿ. ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಜ್ಞಾನ ವಿಕಾಸ ಸಮಿತಿಯ ರಾಜ್ಯ ಕಾರ್ಯದರ್ಶಿ ಬಸವರಾಜು, ಮಂಗಳೂರು ನಗರಾಭಿವೃದ್ಧಿ ಪ್ರಾಕಾರ ಸದಸ್ಯ ವಸಂತ ಬೆರ್ನಾಡ್, ಕಿನ್ನಿಗೋಳಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಾಲೇಜು ಪ್ರಾಂಶುಪಾಲ ಪ್ರೊ. ವಿಶ್ವನಾಥ ಭಟ್, ಜ್ಞಾನ ವಿಕಾಸ ಸಮಿತಿಯ ಜಿಲ್ಲಾಧ್ಯಕ್ಷೆ ನಂದಾ ಪಾಸ್ ಹಾಗೂ ವಿವಿಧ ಜಿಲ್ಲಾಧ್ಯಕ್ಷರು ಸಮಿತಿ ಪದಾಕಾರಿಗಳು ಉಪಸ್ಥಿತರಿದ್ದರು.
ವಸಂತ ಬೆರ್ನಾಡ್ ಸ್ವಾಗತಿಸಿದರು. ಸುಷ್ಮಾ ಎಸ್,ಸುವರ್ಣ ನಿರೂಪಿಸಿದರು. ನಂದಾ ಪಾಸ್ ವಂದಿಸಿದರು.

Kinnigoli-30011704

Comments

comments

Comments are closed.

Read previous post:
Kinnigoli-30011703
ಸುಸಂಸ್ಕ್ರತ ಸಮಾಜ ನಿರ್ಮಾಣ ಮಾಡಬೇಕು

ಕಿನ್ನಿಗೋಳಿ: ಜನರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವಕೊಟ್ಟು, ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿ ಅರ್ಹರಿಗೆ ಸಹಾಯ ಹಸ್ತ ನೀಡಿ ಸುಸಂಸ್ಕ್ರತ ಸಮಾಜ ನಿರ್ಮಾಣ ಮಾಡಬೇಕು ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಕೆ....

Close